ಬೆಂಗಳೂರು: ಅಲಾಯನ್ಸ್ ವಿವಿ ವಿಶ್ರಾಂತ ಉಪಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಆರ್.ಟಿ.ನಗರ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಫಯಾಜ್, ಗಣೇಶ್ ಹಾಗೂ ಮಂಜು ಬಂಧಿತರು. ಅ.15ರ ರಾತ್ರಿ ಆರ್.ಟಿ. ನಗರದ ಹೆಚ್ಎಂಟಿ ಮೈದಾನದ ಬಳಿ ಅಯ್ಯಪ್ಪ ದೊರೆ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು.
ಇದನ್ನೂ ಓದಿ...ಅಲಾಯನ್ಸ್ ವಿವಿ ವಿಶ್ರಾಂತ ಕುಲಪತಿ ಕೊಲೆ ಪ್ರಕರಣ, ಇಬ್ಬರು ಆರೋಪಿಗಳ ಬಂಧನ
ನಗರ ಉತ್ತರ ವಿಭಾಗದ ಡಿಸಿಪಿ ಕೆ.ಶಶಿಕುಮಾರ್ ಅವರು ಎಂಟು ವಿಶೇಷ ತಂಡ ರಚಿಸಿ ಪ್ರಮುಖ ಆರೋಪಿ ಸುಧೀರ್ ಅಂಗೂರ್ ಹಾಗೂ ಈತನ ಸಹಚರ ಸೂರಜ್ ಸಿಂಗ್ನನ್ನು ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ತನಿಖೆಯಲ್ಲಿ ಕೊಲೆ ಮಾಡಲು ಸುಧೀರ್ ಹಂತಕರಿಗೆ ₹1 ಕೋಟಿಗೆ ಸುಪಾರಿ ನೀಡಿರುವುದು ಬೆಳಕಿಗೆ ಬಂದಿತ್ತು.
ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಪ್ರಕರಣದಲ್ಲಿ ಆರೋಪಿಗಳ ಪಾತ್ರವೇನು ಎಂಬುದರ ಕುರಿತು ವಿಚಾರಣೆಯಿಂದ ತಿಳಿದು ಬರಬೇಕಿದೆ.