ಬೆಂಗಳೂರು: ಒಂದೇ ನಿಮಿಷದಲ್ಲಿ ಇಡ್ಲಿ ನೀಡುವಂತಹ ವಿಶೇಷ ಯಂತ್ರವನ್ನು (ಎನಿ ಟೈಮ್ ಇಡ್ಲಿ-ಎಟಿಐ) ಬೆಂಗಳೂರು ಮೂಲದ ಫ್ರೆಶ್ ಶಾಟ್ಸ್ ರೋಬೋಟಿಕ್ಸ್ ಸಂಸ್ಥೆ ವಿನ್ಯಾಸಗೊಳಿಸಿದೆ.
ಸಂಸ್ಥೆ ಹೇಳುವ ಪ್ರಕಾರ, ಈ ರೋಬೋಟ್ 'ಜಗತ್ತಿನ ಮೊಟ್ಟ ಮೊದಲ ಇಡ್ಲಿ ಬೋಟ್' ಅಂತೆ. ಈ ಬೋಟ್, ಇಡ್ಲಿಗಳನ್ನು ಬೇಯಿಸಿ, ಪ್ಯಾಕ್ ಮಾಡಿ ನೀಡುವ ಸ್ವಯಂಚಾಲಿತ ಯಂತ್ರ. ಈ ಯಂತ್ರ ಗ್ರಾಹಕರಿಗೆ 24X7 ಕಾಲಾವಧಿಯಲ್ಲಿ ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ಇಡ್ಲಿ ನೀಡಲಿದೆ. ಯುಪಿಐ ಮೂಲಕ ಹಣ ಪಾವತಿ ಮಾಡಿದರೆ ಸಾಕು ಒಂದೇ ನಿಮಿಷದಲ್ಲಿ ಬಿಸಿ ಬಿಸಿ ಇಡ್ಲಿ ನಿಮಗೆ ಸಿಗುತ್ತೆ ಎಂದು ಸಂಸ್ಥೆ ತಿಳಿಸಿದೆ.
ನಾಲ್ಕು ವಿವಿಧ ಇಡ್ಲಿಗಳನ್ನು ಈ ಯಂತ್ರದಲ್ಲಿ ತಯಾರಿಸಬಹುದು. ಇದರ ಜತೆಗೆ ಚಟ್ನಿ, ಸಾಂಬಾರ್ ಕೂಡ ಪಾರ್ಸಲ್ ಆಗಿ ಸಿಗುತ್ತೆ. ಇದೀಗ ಯಂತ್ರ ಪ್ರಾಯೋಗಿಕ ಹಂತದಲ್ಲಿದೆ. ಮುಂದಿನ ವರ್ಷದ ಏಪ್ರಿಲ್ 22ಕ್ಕೆ ಲೋಕಾರ್ಪಣೆಯಾಗಲಿದೆ.
ಹೆದ್ದಾರಿಗಳು, ಚಲನಚಿತ್ರ ಮಂದಿರ, ಮೆಟ್ರೋ ನಿಲ್ದಾಣ, ಬಸ್ ನಿಲ್ದಾಣ, ರೈಲು ನಿಲ್ದಾಣ, ಕಛೇರಿಗಳು ಸೇರಿದಂತೆ ಇನ್ನೂ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಯಂತ್ರವನ್ನು ಅಳವಡಿಸಿಕೊಳ್ಳಬಹುದು.
ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮ ಅನಿವಾರ್ಯ, ಲಾಕ್ಡೌನ್ ಮಾಡುವುದಿಲ್ಲ: ಸಿಎಂ