ETV Bharat / city

ಕೊರೊನಾ ಯಾವಾಗ ಹೆಚ್ಚು ಕಡಿಮೆಯಾಗುತ್ತೆ ಅಂತ ಹೇಳಲು ಸಾಧ್ಯವಿಲ್ಲ: ಡಿಸಿಎಂ ಅಶ್ವತ್ಥ್ ‌ನಾರಾಯಣ್

ಸರ್ಕಾರದ ಮುಂದೆ ಸವಾಲು ಇದೆ, ಇಲ್ಲ ಅಂದ್ರೆ ತಪ್ಪಾಗುತ್ತೆ. ಈ ಕೊರೊನಾ ಯಾವಾಗ ಕಡಿಮೆ ಆಗುತ್ತೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ, ಒಬ್ಬೊಬ್ಬ ತಜ್ಞರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ನಾವು ಕೈಗೊಂಡಿದ್ದೇವೆ ಎಂದು ಡಿಸಿಎಂ ಅಶ್ವತ್ಥ್​ನಾರಾಯಣ ತಿಳಿಸಿದ್ದಾರೆ.

ashwathnarayana-statement-on-corona-control
ಡಿಸಿಎಂ ಅಶ್ವತ್ಥ್ ‌ನಾರಾಯಣ್
author img

By

Published : Jul 28, 2020, 7:00 PM IST

ಬೆಂಗಳೂರು: ಕೊರೊನಾ ಯಾವಾಗ ಹೆಚ್ಚು ಕಡಿಮೆ ಆಗುತ್ತೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಎಷ್ಟು ತಯಾರಿ ಇದ್ರೂ ಸಾಲಲ್ಲ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ಅಭಿಪ್ರಾಯಪಟ್ಟಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ನಮ್ಮ ವ್ಯವಸ್ಥೆಯಿಂದ ಪರೀಕ್ಷೆ ನಡೆಯುತ್ತಿದೆ. ಎಲ್ಲೋ ಒಂದು ಕಡೆ ಕೊರೊನಾ ಪ್ರಕರಣಗಳಲ್ಲಿ ಏರು ಪೇರು ಆಗಬಹುದು. ತಜ್ಞರು ಅಭಿಪ್ರಾಯಗಳನ್ನು ಒಬ್ಬರು ಒಂದೊಂದು ರೀತಿಯಲ್ಲಿ ಕೊಡ್ತಾ ಇದ್ದಾರೆ. ಕೆಲವರು ಈ ತಿಂಗಳಲ್ಲಿ ಹೆಚ್ಚು ಆಗುತ್ತೆ ಎಂದು ಹೇಳುತ್ತಾರೆ. ಮತ್ತೆ ಕೆಲವರು ಮುಂದಿನ ತಿಂಗಳು ಹೆಚ್ಚಾಗುತ್ತೆ ಎನ್ನುತ್ತಾರೆ. ಹೀಗಾಗಿ ನಾವು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಕೊರೊನಾ ನಿಯಂತ್ರಣ ಕುರಿತು ಡಿಸಿಎಂ ಹೇಳಿಕೆ

ಖಂಡಿತ ನಮ್ಮ ಮುಂದೆ ಸವಾಲು ಇದೆ, ಇಲ್ಲ ಅಂದ್ರೆ ತಪ್ಪು ಆಗುತ್ತದೆ. ಆದರೆ ಸೋಂಕನ್ನು ಬೇಗ ಪತ್ತೆ ಮಾಡುವ ಕೆಲಸ ನಡೆಯುತ್ತಿದೆ. 95% ಜನರಿಗೆ ಎ ಸಿಂಪ್ಟ್ ಮ್ಯಾಟಿಕ್ ಇದ್ದು, ಅವರಿಗೆ ಯಾವುದೇ ಸಮಸ್ಯೆ ಇಲ್ಲ. ಕೇವಲ 5% ಸೋಂಕಿತರಿಗೆ ಸಮಸ್ಯೆ ಇದೆ. ಆ 5% ಜನರಿಗೆ ಬೇಗ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.

ನಿಗಮ‌ ಮಂಡಳಿ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿಗಮ ಮಂಡಳಿ ಸ್ಥಾನಗಳನ್ನು ನೀಡಿದ್ದಾರೆ. ಆ ಮೂಲಕ ಅವರಿಗೆ ಅವಕಾಶ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಶಾಸಕ ಪ್ರೀತಂ ಗೌಡ ಅತೃಪ್ತಿ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಸಿಎಂ, ಅದು ಅವರ ವಯಕ್ತಿಕ ಹೇಳಿಕೆ. ಸಿಎಂ ಅವರು ಅವರ ಕರ್ತವ್ಯವನ್ನು ನೋಡಿ ಅವರಿಗೆ ಅವಕಾಶ ನೀಡಿದ್ದಾರೆ. ಅದನ್ನು ಪಡೆಯೋದು ಬಿಡೋದು ಅವರ ವೈಯಕ್ತಿಕ ವಿಚಾರವೆಂದು ಹೇಳಿದರು.

ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ, ಈ ಬಗ್ಗೆ ಪಕ್ಷದ ವರಿಷ್ಟರು, ಸಿಎಂ ಯಡಿಯೂರಪ್ಪ ತೀರ್ಮಾನ ಕೈಗೊಳ್ಳುತ್ತಾರೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.