ETV Bharat / city

ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಅಶ್ವತ್ಥ​ ನಾರಾಯಣ ಭೇಟಿ: ಮಳೆ ನೀರಿನಲ್ಲಿ ಸಚಿವರ ಸರ್ಕಸ್

ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ಸಂಬಂಧಪಟ್ಟಂತೆ ನಾಳೆ ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆಯಲಿದೆ. ಈ ಹಿನ್ನೆಲೆ ಇಂದು ಪರೀಕ್ಷಾ ಕೇಂದ್ರಗಳಿಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್​. ಅಶ್ವತ್ಥ​​ ನಾರಾಯಣ​ ಬೇಟಿ ನೀಡಿ ಪರಿಶೀಲನೆ ನಡೆಸಿದರು. ಒಟ್ಟು 530 ಕೆಂದ್ರಗಳಲ್ಲಿ 2,01,816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ashwath-narayan-visits-cet-exam-centres
ಅಶ್ವತ್ಥ್​ ನಾರಾಯಣ
author img

By

Published : Aug 27, 2021, 8:19 PM IST

ಬೆಂಗಳೂರು: ವೃತ್ತಿಪರ ಕೋರ್ಸ್​ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯು (ಸಿಇಟಿ) ರಾಜ್ಯಾದ್ಯಂತ ನಾಳೆಯಿಂದ ಶುರುವಾಗಲಿದೆ. ಈ ಹಿನ್ನೆಲೆಯಲ್ಲಿ ಇಂದು ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್. ಅಶ್ವಥ್ ನಾರಾಯಣ, ಸಿಇಟಿ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರಿಶೀಲನೆ ನಡೆಸಿದರು. ಈ ವೇಳೆ, ಮಳೆ ನೀರು ದಾಟಲು ಸಚಿವರು ಸರ್ಕಸ್ ಮಾಡುವಂತಾಯಿತು.

ಸಂಜೆ ವೇಳೆಗೆ ಸುರಿದ ಭಾರಿ ಮಳೆಗೆ ಮಲ್ಲೇಶ್ವರಂ 18ನೇ ಕ್ರಾಸ್ ನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯದ್ವಾರದಲ್ಲೇ ಮಳೆ ನೀರು ನಿಂತಿತ್ತು‌. ಇದರ ಪರಿಣಾಮ ಕಾಲೇಜು ಒಳ ಹೋಗಲು ಆಗದೇ ಹೊರ ಬರಲು ಆಗದೇ ಪರದಾಡಬೇಕಾಯ್ತು.‌ ನಿಂತ ಮಳೆ ನೀರನ್ನ ದಾಟಿ ಹೋಗಲು, ಸಚಿವರ ಗನ್​​​ಮನ್​​​​ಗಳು ಕಲ್ಲುಗಳನ್ನ ಇಟ್ಟು ಒಳಪ್ರವೇಶಿಲು ಅನುವು ಮಾಡಿಕೊಟ್ಟರು. ಕಲ್ಲು ಮೇಲೆ ನಡೆದುಕೊಂಡು ಬಂದು ಪರೀಕ್ಷಾ ಕೇಂದ್ರವನ್ನು ತಪಾಸಣೆ ನಡೆಸಿದರು. ಇದೇ ವೇಳೆ, ಕೂಡಲೇ ಮಳೆ ನೀರು ನಿಲ್ಲದಂತೆ ಪರ್ಯಾಯ ವ್ಯವಸ್ಥೆ ಮಾಡಿ ಅಂತ ಅಧಿಕಾರಿಗಳಿಗೆ ಸೂಚನೆ ಕೊಟ್ಟರು.

ಸಿಇಟಿ ಪರೀಕ್ಷಾ ಕೇಂದ್ರಗಳಿಗೆ ಅಶ್ವತ್ಥ್​ ನಾರಾಯಣ ಭೇಟಿ

ಬಳಿಕ ಮಾತಾನಾಡಿದ ಸಚಿವ ಅಶ್ವತ್ಥ ನಾರಾಯಣ, ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ನಡೆಯುತ್ತಿದ್ದು, ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಕೋವಿಡ್ ಸೋಂಕು ಬಂದ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿದ್ದು, ಸುಮಾರು 12 ಸೋಂಕಿತರು ಪರೀಕ್ಷೆ ಬರೆಯುತ್ತಿದ್ದಾರೆ. ಶಿವಮೊಗ್ಗ, ಕೋಲಾರದಲ್ಲಿ ತಲಾ ಒಬ್ಬರು, ಬೆಂಗಳೂರು 10 ಮಂದಿ ಸೋಂಕಿತರು ಪರೀಕ್ಷೆಗೆ ನೋಂದಣಿ ಮಾಡಿಕೊಡಿದ್ದಾರೆ ಎಂದು ತಿಳಿಸಿದರು.

ಕೊರೊನಾ ಗುಣಲಕ್ಷಣ ಇದ್ದವರಿಗೆ ಐಸೋಲೇಷನ್ ರೂಂ ವ್ಯವಸ್ಥೆ ಮಾಡಲಾಗಿದ್ದು, ವಿಕೆಂಡ್ ಲಾಕ್​​ಡೌನ್ ಇರುವ ಜಿಲ್ಲೆಗಳಲ್ಲಿ ಸಾರಿಗೆ ಸಮಸ್ಯೆ ಆಗದಂತೆ ಪರೀಕ್ಷೆ ಬರೆಯಲು ಅನುವು ಮಾಡಿಕೊಡಲಾಗುತ್ತಿದೆ. ಇನ್ನು ಈ ಬಾರಿ ದ್ವಿತೀಯ ಪಿಯುಸಿ ಅಂಕಗಳನ್ನ ಪರಿಗಣಿಸದೇ ಕೇವಲ ಸಿಇಟಿ ಅಂಕಗಳನ್ನ ಮಾತ್ರ ಪರಿಗಣಿಸಲಾಗುತ್ತೆ.

ಇನ್ನು ರಾಜ್ಯಾದ್ಯಂತ 530 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಒಟ್ಟು 2,01,816 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದು, ಕೋವಿಡ್ ಗೈಡ್​​ಲೈನ್ಸ್ ನಂತೆ ಪರೀಕ್ಷೆ ನಡೆಯಲಿದೆ. ನಾಳೆ ಜೀವಶಾಸ್ತ್ರ ಮತ್ತು ಗಣಿತ ವಿಷಯಕ್ಕೆ ಪರೀಕ್ಷೆ ನಡೆಯಲಿದ್ದು, ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಸಹಾಯಕ ಆಯುಕ್ತರ ಮಟ್ಟದಲ್ಲಿ ಅಧಿಕಾರಿಗಳು ನೇಮಕ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.