ಬೆಂಗಳೂರು: ವಿಶ್ವಾಸ ಮತಯಾಚನೆ ಕುರಿತ ಚರ್ಚೆ ಸಂದರ್ಭದಲ್ಲಿ ಇಂದು ಸಂಜೆ ಮಾಜಿ ಡಿಸಿಎಂ ಆರ್.ಅಶೋಕ್ ಹಾಗೂ ಸಚಿವ ಜಮೀರ್ ಅಹಮ್ಮದ್ ಖಾನ್ ಸದನದ ಹೊರಗಡೆ ಗಂಭೀರ ಮಾತುಕತೆಯಲ್ಲಿ ತೊಡಗಿದ್ದು ಅಚ್ಚರಿಗೆ ಕಾರಣವಾಗಿತ್ತು.
ಇಂದು ಸಿಎಂ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡುವುದಾಗಿ ತಿಳಿಸಿದ್ದು, ಬೆಳಗಿನಿಂದಲೂ ಅದರ ಮೇಲೆ ಚರ್ಚೆ ನಡೆಯುತ್ತಿದೆ. ಮಧ್ಯಾಹ್ನದ ನಂತರವೂ ಚರ್ಚೆ ಮುಂದುವರೆದಿದ್ದು, ಕಳೆದ ಒಂದು ಗಂಟೆಯಿಂದ ಸದನದ ಹೊರಗೆ ಎಲ್ಲ ನಾಯಕರು ಗುಸುಗುಸು ಮಾತಿನಲ್ಲಿ ತೊಡಗಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಗಂಭೀರ ಚರ್ಚೆ ನಡುವೆಯೂ ಆರ್.ಅಶೋಕ್ ಸದನದಿಂದ ಹೊರ ಬಂದು, ಜಮೀರ್ ಅವರ ಭುಜದ ಮೇಲೆ ಕೈಹಾಕಿಕೊಂಡು ಸದನದ ಹೊರಗಿನ ಲಾಂಜ್ಗೆ ಕರೆ ತಂದು ಸ್ವಲ್ಪ ಹೊತ್ತು ಗಂಭೀರ ಚರ್ಚೆ ನಡೆಸಿದರು.