ETV Bharat / city

ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚುನಾವಣೆ: ಅಶೋಕ್ ಹಾರನಹಳ್ಳಿಗೆ ಜಯ - ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಚುನಾವಣೆ

ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶೋಕ್‌ ಹಾರನಹಳ್ಳಿ ವಿಜೇತರಾಗಿ ಅಧ್ಯಕ್ಷ ಪದವಿ ಪಡೆದಿದ್ದಾರೆ.

ಅಶೋಕ್ ಹಾರನಹಳ್ಳಿ
ಅಶೋಕ್ ಹಾರನಹಳ್ಳಿ
author img

By

Published : Dec 20, 2021, 6:37 AM IST

ಬೆಂಗಳೂರು: ಭಾನುವಾರ ನಡೆದ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಚುನಾವಣೆಯಲ್ಲಿ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ. ನಗರದ ಶಂಕರಪುರದ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪದಲ್ಲಿ ಮತದಾನ ಪ್ರಕ್ರಿಯೆ ನಡೆದಿತ್ತು.

ಬೆಳಗ್ಗೆ 10 ರಿಂದ 3 ರ ವರೆಗೆ ಮತದಾನ ನಡೆಯಿತು. ನಂತರ ನಡೆದ ಮತ ಎಣಿಕೆಯಲ್ಲಿ ಅಶೋಕ್​ ಹಾರನಹಳ್ಳಿ ಹೆಚ್ಚು ಮತಗಳನ್ನು ಪಡೆದು ವಿಜೇತರಾದರು. ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಶೋಕ್‌ ಹಾರನಹಳ್ಳಿ, ಎಸ್‌.ರಘುನಾಥ್‌ ಮತ್ತು ಆರ್‌.ಲಕ್ಷ್ಮೇಕಾಂತ್‌ ನಡುವಿನ ಸ್ಪರ್ಧೆಯಲ್ಲಿ ಅಶೋಕ್‌ ಹಾರನಹಳ್ಳಿ ಗೆಲುವು ಸಾಧಿಸಿ ಅಧ್ಯಕ್ಷ ಪದವಿ ಪಡೆದಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಮಹಾಸಭಾ ಬೈಲಾ ತಿದ್ದುಪಡಿ, ಗುರು ರಾಘವೇಂದ್ರ ಬ್ಯಾಂಕ್‌ ಹಾಗೂ ವಶಿಷ್ಠ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಹಗರಣ ಸೇರಿದಂತೆ ಹಲವು ಮಹತ್ವದ ವಿಚಾರಗಳು ಚರ್ಚೆಯಾಗಿದ್ದವು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.