ETV Bharat / city

8ನೇ ದಿನಕ್ಕೆ ಕಾಲಿಟ್ಟ ಹೋರಾಟ: ಮನೆಯಿಂದಲೇ ಫಲಕ ಪ್ರದರ್ಶಿಸಿದ ಆಶಾ ಕಾರ್ಯಕರ್ತೆಯರು - Monthly Honors

ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬ ಸದಸ್ಯರ ಜೊತೆ ಬೇಡಿಕೆಗಳಿರುವ ನಾಮಫಲಕಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

Asha workers protest in all over Karnataka
ಮನೆಯಿಂದಲೇ ಬೇಡಿಕೆಗಳ ನಾಮಫಲಕ ಪ್ರದರ್ಶಿಸಿದ ಆಶಾ ಕಾರ್ಯಕರ್ತೆಯರು
author img

By

Published : Jul 17, 2020, 1:58 PM IST

ಬೆಂಗಳೂರು: ಮಾಸಿಕ ಗೌರವ ಧನ ₹12,000 ನೀಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ 8ನೇ ದಿನಕ್ಕೆ ಕಾಲಿಟ್ಟಿದೆ.

Asha workers protest in all over Karnataka
ಗ್ರಾಮದಲ್ಲಿ ಸರ್ಕಾರದ ವಿರುದ್ಧ ಹೋರಾಟ ನಡೆಸಿದ ಆಶಾ ಕಾರ್ಯಕರ್ತೆ

ಇಂದು ರಾಜ್ಯಾದ್ಯಂತ 42,000 ಆಶಾ ಕಾರ್ಯಕರ್ತೆಯರು ತಮ್ಮ ಕುಟುಂಬ ಸದಸ್ಯರ ಜೊತೆ ಬೇಡಿಕೆಗಳಿರುವ ನಾಮಫಲಕಗಳನ್ನು ಪ್ರದರ್ಶಿಸಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು. ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಿ ಮುಖ್ಯಮಂತ್ರಿಗಳಿಗೆ ಪತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ರಸ್ತೆಯಲ್ಲಿ ಪತಿ ಮತ್ತು ಮಕ್ಕಳೊಂದಿಗೆ ಆಶಾ ಕಾರ್ಯಕರ್ತೆ ಪ್ರತಿಭಟನೆ

ಇಷ್ಟಾದರೂ ಸರ್ಕಾರ ಇನ್ನೂ ಬೇಡಿಕೆ ಈಡೇರಿಕೆ ಕುರಿತು ಮಾತುಕತೆ ನಡೆಸಿಲ್ಲ ಎಂದು ಆಶಾ ಕಾರ್ಯಕರ್ತೆಯರ ಸಂಘದ ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ‌.

Asha workers protest in all over Karn
ಕುಟುಂಬ ಸದಸ್ಯರೊಂದಿಗೆ ಆಶಾ ಕಾರ್ಯಕರ್ತೆ ಪ್ರತಿಭಟನೆ

ರಾಜ್ಯದಲ್ಲಿ ಕೋವಿಡ್ ಪ್ರಕರಣ ಗಣನೀಯವಾಗಿ ಹೆಚ್ಚುತ್ತಿದ್ದು, ಆಶಾ ಕಾರ್ಯಕರ್ತೆಯರ ಗೈರಿನಿಂದಾಗಿ ಸಾಕಷ್ಟು ರೋಗಿಗಳಿಗೆ ಅಗತ್ಯ ಮಾತ್ರೆಗಳು ತಲುಪುತ್ತಿಲ್ಲ. ಕೋವಿಡ್ ಸಂಬಂಧಿತ ಸರ್ವೇಗಳೂ ನಡೆಯುತ್ತಿಲ್ಲ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು. ನಂತರ ಆಶಾ ಕಾರ್ಯಕರ್ತೆಯರು ಎಂದಿನಂತೆ ಕೆಲಸದಲ್ಲಿ ತೊಡಗುತ್ತಾರೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ ತಿಳಿಸಿದ್ದಾರೆ.

ಮನೆಯಿಂದಲೇ ಬೇಡಿಕೆಗಳ ನಾಮಫಲಕ ಪ್ರದರ್ಶನ

ಮನೆಯಲ್ಲಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.