ETV Bharat / city

ಮಹದೇವಪುರದ 8 ವಾರ್ಡ್‌ಗಳಲ್ಲಿ ಕೋವಿಡ್​ ಕೇರ್, ಟ್ರಯಾಜ್​ ಸೆಂಟರ್ ಉದ್ಘಾಟನೆ

ಮಹದೇವಪುರ ಕ್ಷೇತ್ರದ ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್ ಮತ್ತು ಟ್ರಯಾಜ್​ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಒದಗಿಸಲು ಬದ್ದರಾಗಿದ್ದೇವೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.

Bangalore
8 ವಾರ್ಡ್‌ಗಳಲ್ಲಿ ಕೋವಿಡ್​ ಕೇರ್, ಟ್ರಯಾಜ್​ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ
author img

By

Published : May 17, 2021, 7:51 AM IST

ಮಹದೇವಪುರ (ಬೆಂಗಳೂರು): ಮಹದೇವಪುರ ಕ್ಷೇತ್ರದ 8 ವಾರ್ಡ್‌ಗಳಲ್ಲಿ ಕೋವಿಡ್ ಕೇರ್ ಸೆಂಟರ್ ಹಾಗು ಟ್ರಯಾಜ್​ ಸೆಂಟರ್​ಗಳನ್ನು ಅರಣ್ಯ ಹಾಗು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.

8 ವಾರ್ಡ್‌ಗಳಲ್ಲಿ ಕೋವಿಡ್​ ಕೇರ್, ಟ್ರಯಾಜ್​ ಸೆಂಟರ್ ಉದ್ಘಾಟಿಸಿದ ಅರವಿಂದ ಲಿಂಬಾವಳಿ

ಮಹದೇವಪುರ ಕ್ಷೇತ್ರದ ಕಾಡುಗೋಡಿ, ಹಗದೂರು, ಹೂಡಿ, ಗರುಡಾಚಾರ್ ಪಾಳ್ಯ, ದೊಡ್ಡನೆಕ್ಕುಂದಿ, ಮಾರತಹಳ್ಳಿ, ಬೆಳ್ಳಂದೂರು ವಾರ್ಡ್‌ಗಳಲ್ಲಿ ವಾರ್ಡ್ ಮಟ್ಟದ ಡೆಟರ್ ಕಮಿಟಿಯನ್ನು ಪ್ರಾಂಭಿಸಿ, ಗ್ರೂಪ್ 'ಎ' ಮತ್ತು 'ಬಿ' ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಪಾಲಿಕೆ ಅಧಿಕಾರಿಗಳು, ಇತರೆ ಸರ್ಕಾರಿ ಅಧಿಕಾರಿಗಳು ಹಾಗು 60 ಸ್ವಯಂ ಸೇವಕರುಗಳು ಈ ಡೆಟರ್ ಕಮಿಟಿಯ ಸದಸ್ಯರುಗಳಾಗಿರುತ್ತಾರೆ. ವಾರ್ಡ್ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ವೈದ್ಯರ ಸೇವೆಯನ್ನು ಸಹ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ನಂತರ ಮಾತನಾಡಿದ ಸಚಿವ ಲಿಂಬಾವಳಿ, ವಾರ್ಡ್​ನಲ್ಲಿರುವ ಪಾಲಿಕೆ ಕಚೇರಿಗಳೇ ವಾರ್ ರೂಮ್​ಗಳಾಗಿ ಕೆಲಸ ನಿರ್ವಹಿಸಲಿವೆ. ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪ್ರತಿನಿತ್ಯ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ನೇಮಿಸಲಾಗಿದೆ. ಕ್ಷೇತ್ರದ ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್ ಮತ್ತು ಟ್ರಯಾಜ್​ ಸೆಂಟರ್‌ಗಳಲ್ಲಿ ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ಸೂಕ್ತ ಚಿಕಿತ್ಸೆ, ವೈದ್ಯಕೀಯ ಸೌಲಭ್ಯ ಒದಗಿಸಲು ಬದ್ದರಾಗಿದ್ದೇವೆ ಎಂದರು.

ಕೋವಿಡ್ ಕೇರ್ ಸೆಂಟರ್ ಮತ್ತು ಮತ್ತು ಟ್ರಯಾಜ್​ ಸೆಂಟರ್‌ಗಳ ಮೇಲುಸ್ತುವಾರಿ ಅಧಿಕಾರಿಯನ್ನಾಗಿ ಕೆ.ಚಂದ್ರಶೇಖರ್ ಅವರನ್ನು ನೇಮಿಸಲಾಗಿದೆ. ಪ್ರತಿಯೊಂದು ಕೋವಿಡ್ ಕೇರ್ ಸೆಂಟರ್‌ನಲ್ಲಿ ಸೋಂಕಿತರಿಗೆ ಅವಶ್ಯಕವಿರುವ ಪಲ್ಸ್ ಆಕ್ಸಿಮೀಟರ್, ಗ್ರೂಕೊಮೀಟರ್, ಥರ್ಮಾಮೀಟ‌ರ್, ಪಿಪಿಇ ಕಿಟ್‌ಗಳು, ಗ್ಲೌಸ್, ಸ್ಯಾನಿಟೈಜರ್, ಮಾಸ್ಕ್, ಮೆಡಿಕಲ್ ಕಿಟ್‌, ಆಕ್ಸಿಜನ್, ಕಾನ್ಸನ್‌ಟೈಟರ್, ಆಕ್ಸಿಜನ್ ಮಾಸ್ಕ್ ಹಾಗೂ ಅವಶ್ಯಕ ಸಿಬ್ಬಂದಿ ಒದಗಿಸಲಾಗುವುದು. ಕ್ಷೇತ್ರದ ಜನತೆ ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ‌ ಮಾಡಿದರು.

ವರ್ತೂರು, ಹಗದೂರು, ಕಾಡುಗೋಡಿ ವಾರ್ಡ್​ನ ಜನರಿಗಾಗಿ ಜಿಂಕ್ ಹೋಟೆಲ್​​ನಲ್ಲಿ ತಲಾ 50 ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಹೂಡಿ, ಗರುಡಾಚಾರ್ ಪಾಳ್ಯ ಜನರಿಗಾಗಿ ಕೀಸ್ ಹೋಟೆಲ್​​ನಲ್ಲಿ ತಲಾ 25, ದೊಡ್ಡನೆಕ್ಕುಂದಿ, ಮಾರತಹಳ್ಳಿ ವಾರ್ಡ್ ಜನರಿಗೆ ಕುಂದಲಳ್ಳಿಯ ಓಯೋ ಟೌನ್ ಹೋಟೆಲ್​ನಲ್ಲಿ ತಲಾ 24, ಬೆಳ್ಳಂದೂರು ವಾರ್ಡ್​ನ ಜನತೆಗೆ ಆಕ್ಟೇವ್ ಹೋಟೆಲ್​ನಲ್ಲಿ 39 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ಡಬಲ್​ ಮದುವೆ ಪ್ರಕರಣ: ಕಂಬಿ ಹಿಂದೆ ಸೇರಿದ 'ವರ ಉಮಾಪತಿ'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.