ETV Bharat / city

ಬೆಂಗಳೂರಲ್ಲಿ ಗಂಡನ ಕೊಲೆಗೆ ಸುಪಾರಿ ಕೊಟ್ಟ ಪತ್ನಿ ಸೇರಿ ಮೂವರು ಅರೆಸ್ಟ್ - wife who gave money to husband's murder

ಗಂಡನ ಹಿಂಸೆ ತಾಳಲಾರದೆ ಬೇಸತ್ತ ಪತ್ನಿಯು ತಾನು ಕೆಲಸ ಮಾಡುತ್ತಿದ್ದ ಅಪಾರ್ಟ್​ಮೆಂಟ್ ಬಳಿ ಪರಿಚಿತನಾಗಿದ್ದ ಮುನಿರಾಜುಗೆ ಕಿರುಕುಳ ಬಗ್ಗೆ ತಿಳಿಸಿ ಗಂಡನನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾಳೆ‌. ಮುನಿರಾಜು, ಲೋಕನಾಥ್​ನನ್ನು ಮೇ 15 ರಂದು ಕರೆ ಮಾಡಿ ಮದ್ಯ ಕೊಡಿಸುವ ನೆಪದಲ್ಲಿ ಕಸ್ತೂರಿ ನಗರ ರೈಲ್ವೇ ಹಳಿ ಬಳಿ ಕರೆಯಿಸಿಕೊಂಡು ಮದ್ಯಪಾನ ಮಾಡಿಸಿದ್ದಾರೆ‌‌. ಬಳಿಕ ಆತನ ಕುತ್ತಿಗೆಗೆ ಹಗ್ಗ ಬಿಗಿಹಿಡಿದು ಕೊಲೆ ಮಾಡಿದ್ದಾರೆ.

ಮೂವರು ಅರೆಸ್ಟ್
ಮೂವರು ಅರೆಸ್ಟ್
author img

By

Published : May 17, 2021, 9:44 PM IST

ಬೆಂಗಳೂರು: ಕಿರುಕುಳ ತಾಳಲಾರದೆ ಗಂಡನ ಕೊಲೆಗೆ ಸುಪಾರಿ ನೀಡಿದ್ದ ಹೆಂಡತಿ ಸೇರಿದಂತೆ ಮೂವರು ಆರೋಪಿಗಳನ್ನು ಕಂಟೋನ್​ಮೆಂಟ್​ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ಟಿನ್ ಫ್ಯಾಕ್ಟರಿಯ ಶಕ್ತಿ ನಗರ ನಿವಾಸಿ ಯಶೋಧ, ಸ್ನೇಹಿತರಾದ ಮುನಿರಾಜು ಹಾಗೂ ಪ್ರಭು ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನಕ್ಕೆ‌ ಒಪ್ಪಿಸಲಾಗಿದೆ‌‌. ಲೋಕನಾಥ ಕೊಲೆಯಾದವನು.
ಯಶೋಧ ಹಾಗೂ ಲೋಕನಾಥ್ ದಂಪತಿ ಶಕ್ತಿ‌ನಗರದಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಯಶೋಧ ಮನೆಗೆಲಸ ಮಾಡುತ್ತಿದ್ದರೆ ಗಂಡ ಗಾರೆ‌ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿಯಾಗಿದ್ದ ಈತ ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಮದ್ಯ ಸೇವಿಸಲು ಹಣ ನೀಡುವಂತೆ‌ ಪೀಡಿಸುತ್ತಿದ್ದ. ಹೆಂಡತಿ ಮೇಲೆ ಇಲ್ಲಸಲ್ಲದ ಅನುಮಾನ ಬೆಳೆಸಿಕೊಂಡು ಕಿರುಕುಳ ನೀಡುತ್ತಿದ್ದ‌‌‌‌.

ಗಂಡನ ಹಿಂಸೆ ತಾಳಲಾರದೆ ಬೇಸತ್ತ ಪತ್ನಿಯು ತಾನು ಕೆಲಸ ಮಾಡುತ್ತಿದ್ದ ಅಪಾರ್ಟ್​ಮೆಂಟ್ ಬಳಿ ಪರಿಚಿತನಾಗಿದ್ದ ಮುನಿರಾಜುಗೆ ಕಿರುಕುಳದ ಬಗ್ಗೆ ತಿಳಿಸಿ ಗಂಡನನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾಳೆ‌. ಸಹಚರ ಪ್ರಭುವಿಗು ವಿಷಯ ತಿಳಿಸಿ ಮುನಿರಾಜು, ಲೋಕನಾಥ್​ನಿಗೆ ಮೇ 15 ರಂದು ಕರೆ ಮಾಡಿ ಮದ್ಯ ಕೊಡಿಸುವ ನೆಪದಲ್ಲಿ ಕಸ್ತೂರಿ ನಗರ ರೈಲ್ವೆ ಹಳಿ ಬಳಿ ಕರೆಯಿಸಿಕೊಂಡು ಮದ್ಯಪಾನ ಮಾಡಿಸಿದ್ದಾರೆ‌‌. ಬಳಿಕ ಆತನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಸಹಜ ಸಾವು ಎಂದು ಬಿಂಬಿಸಲು ಬೈಯ್ಯಪ್ಪನ ಹಳ್ಳಿ-ಚನ್ನಸಂದ್ರ‌ ನಡುವಿನ ರೈಲ್ವೆ ಮಾರ್ಗದ ಹಳಿ ಮೇಲೆ ಮೃತದೇಹವಿಟ್ಟು ಪರಾರಿಯಾಗಿದ್ದರು.

ಮೃತದೇಹ ಕಂಡು ರೈಲು ನಿಲ್ಲಿಸಿದ ಲೊಕೋಪೈಲಟ್

ವಾರಾಣಸಿಯಿಂದ ನಗರಕ್ಕೆ ಬರುತ್ತಿದ್ದ ರೈಲಿನ ಲೊಕೊಪೈಲಟ್​ ಟ್ರ್ಯಾಕ್ ಮೇಲೆ‌ ಮೃತದೇಹ ಬಿದ್ದಿರುವುದನ್ನು ಸೂಕ್ಷ್ಮತೆಯಿಂದ ಗಮನಿಸಿ ರೈಲು ನಿಲ್ಲಿಸಿದ್ದಾರೆ‌. ಶವದ ಕುರಿತಂತೆ ರೈಲ್ವೆ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ ಮೇರೆಗೆ ಕಂಟ್ಮೋನೆಂಟ್ ರೈಲ್ವೆ ಠಾಣೆಯ ಇನ್​ಸ್ಪೆಕ್ಟರ್ ಸುಧಾಕರ್ ನೇತೃತ್ವದ ತಂಡ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದೆ. ‌ಮೃತದೇಹ ರೈಲ್ವೆ ಹಳಿ ಪಕ್ಕಕ್ಕಿಟ್ಟು ರೈಲು ಸಂಚಾರಕ್ಕೆ‌ ಅನುವು ಮಾಡಿಕೊಟ್ಟಿದೆ.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮೃತನ ಚಹರೆಗಾಗಿ ತಲಾಶ್ ನಡೆಸಿದಾಗ ಸಿಲಿಂಡರ್ ವಿತರಿಸುವ ಸಿಬ್ಬಂದಿ ಮೃತದೇಹವನ್ನು ಗುರುತು ಪತ್ತೆ ಹಚ್ಚಿದ್ದಾನೆ. ಈತ ನೀಡಿದ‌ ಮಾಹಿತಿ ಮೇರೆಗೆ ಕೊಲೆಗೀಡಾದವನ ಪತ್ನಿಯನ್ನು ಪ್ರಶ್ನಿಸಿದಾಗ ಆಕೆ ಸತ್ಯವನ್ನು ಒಪ್ಪಿಕೊಂಡಿದ್ದಾಳೆ‌. ಸದ್ಯ‌ ಮೂವರನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ರೈಲ್ವೆ ಎಸ್​ಪಿ ಸಿರಿಗೌರಿ ತಿಳಿಸಿದ್ದಾರೆ.

ಇದನ್ನೂ ಓದಿ.. ಮೃತದೇಹ ದಹನಕ್ಕೂ ಎದುರಾದ ಸವಾಲುಗಳು; ಉರುವಲಿಗೆ ಹೆಚ್ಚಿತು ಬೇಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.