ETV Bharat / city

ಬೆಂಗಳೂರು ವಿವಿ ಕುಲಪತಿ ನೇಮಕ ವಿವಾದ.. ವಿವಿ ಸಿಂಡಿಕೇಟ್ ಸದಸ್ಯರಿಂದ ಅಹೋರಾತ್ರಿ ಧರಣಿಗೆ ನಿರ್ಧಾರ - bengaluru university

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕ ಕ್ರಮಬದ್ಧವಿಲ್ಲ ಎಂದು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರು ಆರೋಪಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನ ಖಾಲಿ ಇದ್ದು, ಕುಲಪತಿಗಳ ನೇಮಕಾತಿ ಬಗ್ಗೆ ರಾಜ್ಯಪಾಲರೂ ಗಮನ ಹರಿಸಿಲ್ಲ, ಅರ್ಹರ ಪಟ್ಟಿಯನ್ನೂ ಸರ್ಕಾರವೂ ಸಿದ್ಧಪಡಿಸುತ್ತಿಲ್ಲ ಎಂದು ದೂರಿದ್ದಾರೆ.

appointment-of-bangalore-vv-chancellor-is-not-systematic
ಬೆಂಗಳೂರು ವಿವಿ ಕುಲಪತಿ ನೇಮಕ , ವಿವಿ ಸಿಂಡಿಕೇಟ್ ಸದಸ್ಯರಿಂದ ಅಹೋರಾತ್ರಿ ಧರಣಿ
author img

By

Published : Apr 2, 2022, 10:02 AM IST

Updated : Apr 2, 2022, 2:31 PM IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ನೇಮಕ ಕ್ರಮಬದ್ಧವಿಲ್ಲ ಎಂದು ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರು ಆರೋಪಿಸಿದ್ದಾರೆ. ಮಾರ್ಚ್ 16ರಿಂದ ಇಲ್ಲಿಯವರೆಗೂ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಸ್ಥಾನ ಖಾಲಿ ಇದ್ದು, ಇತ್ತ ನೂತನ ಕುಲಪತಿಗಳ ನೇಮಕಾತಿ ಮಾಡಬೇಕಿದ್ದ ರಾಜ್ಯಪಾಲರೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಮತ್ತೊಂದೆಡೆ ನೇಮಕಾತಿ ಮಾಡಲು ಅರ್ಹರ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಬೆಂಗಳೂರು ವಿವಿ ಕುಲಪತಿ ನೇಮಕ ವಿವಾದ, ವಿವಿ ಸಿಂಡಿಕೇಟ್ ಸದಸ್ಯರಿಂದ ಅಹೋರಾತ್ರಿ ಧರಣಿಗೆ ನಿರ್ಧಾರ

ಈ ಬಗ್ಗೆ ಬೆಂಗಳೂರು ವಿವಿ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸಲು ಸಿಂಡಿಕೇಟ್ ಸದಸ್ಯರು ಹಾಗು ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ಕೂಡಲೇ ನೂತನ ಕುಲಪತಿಯನ್ನು ನೇಮಕಾತಿ ಮಾಡದಿದ್ದಲ್ಲಿ ಬೋಧಕ ವರ್ಗ, ಆಡಳಿತಕ್ಕೆ ಹಾಗು ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆಯಾಗುವುದಾಗಿ ಹೇಳಿದ್ದಾರೆ. ಈ ಹಿಂದೆ ಪ್ರೋ. ಡಾ. ವೇಣುಗೋಪಾಲ್‌ರವರನ್ನು ಕುಲಪತಿಗಳಾಗಿ ನೇಮಿಸಿದ್ದು, ಇದು ಕ್ರಮಬದ್ಧವಾಗಿಲ್ಲ ಎಂದು ಸಿಂಡಿಕೇಟ್ ಸದಸ್ಯ ಸಂಗಮೇಶ್ ಪಾಟೀಲ್‌ರವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಹೈಕೋರ್ಟ್ ಕುಲಪತಿಗಳ ನೇಮಕಾತಿ ಕ್ರಮಬದ್ಧವಾಗಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಕೋರ್ಟ್ ಈ ಆದೇಶಕ್ಕೆ ತಡೆ ನೀಡಬೇಕು ಎಂಬ ಬೇಡಿಕೆಯಿಟ್ಟು ಕುಲಪತಿಗಳಾಗಿದ್ದ ಪ್ರೋ. ಡಾ. ವೇಣುಗೋಪಾಲ್ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದರು. ಅಲ್ಲಿಯೂ ಕೂಡ ಅವರಿಗೆ ಸ್ಟೇ ಸಿಗದ ಕಾರಣ ಅವರಿದ್ದ ಸ್ಥಾನ ಈಗ ಖಾಲಿ ಉಳಿದಿದೆ. ಅಂದರೆ, ಪ್ರೋ. ಡಾ. ವೇಣುಗೋಪಾಲ್‌ರವರ ನೇಮಕಾತಿ ಕ್ರಮಬದ್ಧವಾಗಿಲ್ಲ ಅಂತ ಮೇಲ್ನೋಟಕ್ಕೆ ಸಾಬೀತಾಗಿದೆ.

ಕಾನೂನು ಉಲ್ಲಂಘನೆ : ಹೈಕೋರ್ಟ್ ಆದೇಶ ನೀಡಿದಾಗಿನಿಂದಲೂ ಯುನಿವರ್ಸಿಟಿಗೆ ಪ್ರೋ. ಡಾ. ವೇಣುಗೋಪಾಲ್‌ ಬಂದಿಲ್ಲ. ಮಾರ್ಚ್ 16ರಿಂದ ಇಲ್ಲಿಯವರೆಗೂ ಕುಲಪತಿಗಳ ಸ್ಥಾನ ಖಾಲಿಯೇ ಉಳಿದಿದೆ. ಇದರ ನಡುವೆ ಕೆಲ ದಿನಗಳ ಹಿಂದಷ್ಟೇ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಅಧೀಕೃತ ಇ-ಮೇಲ್‌ ಐಡಿಯಿಂದ ರಿಜಿಸ್ಟ್ರಾರ್‌ಗೆ ಪ್ರೋ. ಡಾ. ವೇಣುಗೋಪಾಲ್ ಸಂದೇಶ ಕಳಿಸಿದ್ದಾರೆ. ನೇಮಕಾತಿ ಕ್ರಮಬದ್ಧವಾಗಿಲ್ಲ ಎಂದ ಮೇಲೂ ಅಧಿಕೃತ ಇ-ಮೇಲ್ ಬಳಸಲಾಗಿದೆ. ಜೊತೆಗೆ ಸರ್ಕಾರ ನೀಡಿರೋ ವಾಹನವನ್ನೂ ಇಲ್ಲಿಯವರೆಗೂ ಮರಳಿಸದೇ ಕಾನೂನು ಉಲ್ಲಂಘಿಸುತ್ತಿದ್ದಾರೆ. ಇದು ನ್ಯಾಯಾಂಗ ನಿಂದನೆ ಅಲ್ಲದೇ ಮತ್ತೇನೂ ಅಲ್ಲ ಎಂದು ಸಿಂಡಿಕೇಟ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.

ಪ್ರೋ. ಡಾ. ವೇಣುಗೋಪಾಲ್‌ ಅವರು ಇಂದಿಗೂ ಕೂಡ ಜ್ಞಾನಭಾರತಿಯಲ್ಲಿರೋ ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿರುವುದರಿಂದ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಹಾಗು ನೃಪತುಂಗ ರಸ್ತೆಯಲ್ಲಿರೋ ಯುವಿಸಿಇ ಕಚೇರಿಯನ್ನು ಖಾಲಿ ಮಾಡದೇ ಇರುವುದರಿಂದ ಹಲಸೂರು ಗೇಟ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಾಗಿ ಸಿಂಡಿಕೇಟ್ ಸದಸ್ಯರು ಹೇಳಿದ್ದಾರೆ. ಒಟ್ಟಿನಲ್ಲಿ, ಬೆಂಗಳೂರು ಯೂನಿವರ್ಸಿಟಿಯು ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದು, ಸದ್ಯ ಅಧಿಕಾರಕ್ಕಾಗಿ ಸುದ್ದಿಯಾಗಿದೆ.

ಓದಿ : 2 ವರ್ಷದ ನಂತರ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ.. ಯುಗಾದಿ ಸಂಭ್ರಮದಲ್ಲಿ ಭಕ್ತರು

Last Updated : Apr 2, 2022, 2:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.