ETV Bharat / city

ಬೆಂಗಳೂರಿನಲ್ಲಿ ಕೊರೊನಾಗೆ ಮಹಿಳೆ ಬಲಿ: ರಾಜ್ಯದಲ್ಲಿ 31ಕ್ಕೆ ಏರಿದ ಸೋಂಕಿತರ ಸಾವಿನ ಸಂಖ್ಯೆ

ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದ್ದು, ಸೋಂಕಿತರ ಒಟ್ಟು ಸಾವಿನ ಸಂಖ್ಯೆ ರಾಜ್ಯದಲ್ಲಿ 31ಕ್ಕೆ ಏರಿಕೆಯಾಗಿದೆ.

corona
ಕೊರೊನಾ
author img

By

Published : May 9, 2020, 11:22 PM IST

ಬೆಂಗಳೂರು: ಕೊರೊನಾ ಸೋಂಕಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.‌ ‌ಬೆಂಗಳೂರಿನ‌ ಹೆಣ್ಣೂರು ಮೂಲದ ಮಹಿಳೆಯೊಬ್ಬಳು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾಳೆ.

ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಈ ಮಹಿಳೆಗೆ ಮೇ 6ರಿಂದ ಬೆಂಗಳೂರಿನ ನಾರ್ಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೇ 7ರಂದು ಮಹಿಳೆ ಮೃತಪಟ್ಟಿದ್ದಳು. ಉಸಿರಾಟದ ತೊಂದರೆ ಇದ್ದ ಕಾರಣದಿಂದ ಈಕೆಯ ಗಂಟಲು ದ್ರವವನ್ನು ಹೈದರಾಬಾದ್​​ಗೆ ಕಳುಹಿಸಲಾಗಿತ್ತು. ಇಂದು ಆಕೆಯಲ್ಲಿ ಕೊರೊನಾ ದೃಢಪಟ್ಟಿದೆ.

ಸೋಂಕಿತ ಮಹಿಳೆಯ ಸಾವಿನಿಂದಾಗಿ ಬೆಂಗಳೂರು ನಾರ್ಥ್ ಆಸ್ಪತ್ರೆಯನ್ನು ಸದ್ಯಕ್ಕೆ ಕ್ಲೋಸ್ ಮಾಡಲಾಗಿದೆ. ಈಕೆಗೆ ಚಿಕಿತ್ಸೆ ನೀಡಿದ್ದ ಆಸ್ಪತ್ರೆಯ 7 ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. 15 ದಿನಗಳ ಕಾಲ ಆಸ್ಪತ್ರೆ ಬಂದ್ ಮಾಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ. ಮಹಿಳೆಯ ಮೃತದೇಹವನ್ನು ಸಿ.ವಿ.ರಾಮನ್ ನಗರದ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು, ಇನ್ನೂ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.