ಬೆಂಗಳೂರು: ಸಾಮಾಜಿಕ ಬದಲಾವಣೆ, ಸಾಹಿತ್ಯ ಕೃಷಿ ಮತ್ತು ಮಹಿಳಾ ಸಬಲೀಕರಣಕ್ಕಾಗಿ ದುಡಿದ ಸಾಧಕರಿಗೆ ಕಾಗಿನೆಲೆ ಗುರು ಪೀಠದಿಂದ ಪ್ರತಿವರ್ಷವೂ ಕೊಡಮಾಡುವ 'ಪ್ರತಿಷ್ಠಿತ ವಾರ್ಷಿಕ ಪ್ರಶಸ್ತಿ' ಪ್ರಕಟ ಮಾಡಲಾಗಿದೆ.
ಕವಿ, ಕತೆಗಾರ ಲಿಂಗದಹಳ್ಳಿ ಹಾಲಪ್ಪ ಅವರಿಗೆ ಹಾಲುಮತ ಬಾಸ್ಕರ್ ಪ್ರಶಸ್ತಿ(ಸಾಹಿತ್ಯ ಕ್ಷೇತ್ರ), ಪವಾಡ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ಗೆ ಸಿದ್ದಶ್ರೀ ಪ್ರಶಸ್ತಿ(ಸಾಮಾಜಿಕ ಬದಲಾವಣೆ), ಹಾಸ್ಯ ಸಾಹಿತಿ ಡಾ.ಆರ್. ಸುನಂದಮ್ಮ ಅವರಿಗೆ ಕನಕರತ್ನ ಪ್ರಶಸ್ತಿ(ಮಹಿಳಾ ಸಬಲೀಕರಣ ಕ್ಷೇತ್ರ)ನೀಡಲಾಗಿದೆ.
ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿದೆ. ಕಾಗಿನೆಲೆ ಗುರುಪೀಠದ ತಿಂಥಣಿ ಶಾಖಾ ಮಠದಲ್ಲಿ ಜನವರಿ 12 ರಿಂದ ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ವೇಳೆ ಜ.13 ರಂದು ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಮೂವರು ಸಾಧಕರಿಗೆ ಪ್ರಶಸ್ತಿ ನೀಡಲಾಗುವುದು.
ಕೇಂದ್ರ ಸಚಿವ ಭಗವಂತ ಖೂಬಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕನಕಗುರು ಪೀಠದ ತಿಂಥಿಣಿ ಮಠದ ಪೀಠಾಧ್ಯಕ್ಷ ಸಿದ್ದರಾಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಗುರುಪೀಠದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕರ್ಫ್ಯೂ ವೇಳೆ ಅನಗತ್ಯ ಓಡಾಡಿದರೆ ಬಂಧನ ಗ್ಯಾರಂಟಿ : ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ