ಬೆಂಗಳೂರು: ನನಗೆ ಸಚಿವ ಸ್ಥಾನ ಬೇಕೇ ಬೇಕು ಎಂದು ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆನಂದ್ ಮಾಮನಿ ಒತ್ತಾಯಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಈ ಬಗ್ಗೆ ಸಿಎಂ, ರಾಜ್ಯಾಧ್ಯಕ್ಷರಿಗೂ ನಾನು ಮನವಿ ಮಾಡಿದ್ದೇನೆ. ಮೂರು ಬಾರಿ ನಾನು ಶಾಸಕನಾಗಿದ್ದೇನೆ. ಕ್ಷೇತ್ರ, ರಾಜ್ಯದ ಕೆಲಸ ಮಾಡಲು ಅವಕಾಶ ಕೊಡಬೇಕು ಎಂದು ಮಾಮನಿ ಒತ್ತಾಯಿಸಿದ್ದಾರೆ.
ಸಿಎಂ, ರಾಜ್ಯಾಧ್ಯಕ್ಷರು, ಸಂಘದ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಸಂಪುಟ ವಿಸ್ತರಣೆಯನ್ನಾದ್ರೂ ಮಾಡಲಿ, ಪುನರ್ರಚನೆಯನ್ನಾದ್ರೂ ಮಾಡಲಿ, ನನಗೆ ಸಚಿವ ಸ್ಥಾನ ಬೇಕು. ಕೇವಲ ಕ್ಷೇತ್ರದ ಅಭಿವೃದ್ಧಿಗೆ ಅಂತ ಕೇಳ್ತಿಲ್ಲ. ಕ್ಷೇತ್ರದ ಜೊತೆ ರಾಜ್ಯದ ಕೆಲಸ ಮಾಡುತ್ತೇನೆ ಎಂದರು.
ಇದನ್ನೂ ಓದಿ: ಇಂದು ಸಚಿವ ಸಂಪುಟ ಸಭೆ: ಜಂಟಿ ಅಧಿವೇಶನ ಸೇರಿ ಹಲವು ಮಹತ್ವದ ತೀರ್ಮಾನ ಸಾಧ್ಯತೆ
ಹಿರಿಯರನ್ನು ಕೈಬಿಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ನಾನು ಮಾತನಾಡಲ್ಲ. ಮಾತನಾಡುವುದು ಸಮಂಜಸವೂ ಅಲ್ಲ. ಅದನ್ನ ಸಿಎಂ, ಹಿರಿಯರು ನಿರ್ಧರಿಸಬೇಕು ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ