ETV Bharat / city

ಜಮೀರ್ ಅಹಮದ್ ಮನೆ, ಕಚೇರಿಗಳ ಮೇಲಿನ ಇಡಿ ದಾಳಿ ರಾಜಕೀಯ‌ ಪ್ರೇರಿತ: ಅಲ್ತಾಫ್ ಖಾನ್ - ಜಮೀರ್ ಅಹಮದ್ ಮನೆ, ಕಚೇರಿಗಳ ಮೇಲೆ ಇಡಿ ದಾಳಿ

ಜಮೀರ್ ಅಹಮದ್ ಖಾನ್​ ಮನೆ ಹಾಗೂ ಕಚೇರಿಗಳ ಮೇಲೆ ಇಡಿ ದಾಳಿ ರಾಜಕೀಯ‌ ಪ್ರೇರಿತವಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರಬರಲಿದೆ‌ ಎಂದು ಜಮೀರ್ ಆಪ್ತ ಅಲ್ತಾಫ್ ಖಾನ್ ಹೇಳಿದ್ದಾರೆ.

Altaf Khan
ಜಮೀರ್ ಆಪ್ತ ಅಲ್ತಾಫ್ ಖಾನ್
author img

By

Published : Aug 5, 2021, 2:08 PM IST

ಬೆಂಗಳೂರು: ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್​ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಜಮೀರ್ ಆಪ್ತ ಅಲ್ತಾಫ್ ಖಾನ್ ಅವರು ಜಮೀರ್​ ನಿವಾಸದ ಬಳಿ ದೌಡಾಯಿಸಿದ್ದಾರೆ.

ಜಮೀರ್ ಅಹಮದ್ ಮನೆ, ಕಚೇರಿಗಳ ಮೇಲೆ ಇಡಿ ದಾಳಿ ರಾಜಕೀಯ‌ ಪ್ರೇರಿತ_ ಅಲ್ತಾಫ್​ ಆರೋಪ

ಇಡಿ ಅಧಿಕಾರಿಗಳ ದಾಳಿಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಲ್ತಾಫ್ ಖಾನ್​, ಇಡಿ ದಾಳಿ ರಾಜಕೀಯ‌ ಪ್ರೇರಿತವಾಗಿದ್ದು, ತನಿಖೆಯಿಂದ ಸತ್ಯಾಂಶ ಹೊರಬರಲಿದೆ‌. ಜಮೀರ್ ಐಎಂಎ ಮಾಲೀಕ ಮನ್ಸೂರ್ ಖಾನ್​ಗೆ ನ್ಯಾಯಯುತವಾಗಿ ಆಸ್ತಿ ಮಾರಿದ್ದಾರೆ. ಹಣಕಾಸು ವ್ಯವಹಾರದಲ್ಲಿ ಯಾವುದೇ ಅಕ್ರಮ ಎಸಗಿಲ್ಲ. ಕೋವಿಡ್ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. ನೂರಾರು ಅನಾಥ ಶವಗಳಿಗೆ ಮುಕ್ತಿ ಕಾಣಿಸಿದ್ದಾರೆ ಎಂದರು.

ಹಲವರಿಗೆ ಕೋವಿಡ್ ಕಿಟ್ ಹಾಗೂ ಹಣಕಾಸಿನ ಸಹಾಯ ಮಾಡಿದ್ದಾರೆ. ಇದನ್ನು ಸಹಿಸದೆ ಕೆಲವರು ಷಡ್ಯಂತ್ರ ರೂಪಿಸಿದ್ದಾರೆ. ಇಡಿ ದಾಳಿ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ‌ ಎಂದು ಆರೋಪಿಸಿದರು.

ಇದನ್ನೂ ಓದಿ: ಜಮೀರ್, ರೋಷನ್ ಬೇಗ್​ಗೆ ED ಸಂಕಷ್ಟ: ಪ್ರತ್ಯೇಕ ತಂಡಗಳಾಗಿ ಮಾಹಿತಿ‌ ಕಲೆ ಹಾಕುತ್ತಿರುವ ಅಧಿಕಾರಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.