ETV Bharat / city

ಕಡಲೆಕಾಯಿ ಪರಿಷೆಗೆ ಮುಗಿಬಿದ್ದ ಜನ.. ಜಾತ್ರೆ ನಡೆಯುವ ಸ್ಥಳದಲ್ಲಿಯೇ ಕೋವಿಡ್​​ ಟೆಸ್ಟಿಂಗ್, ವ್ಯಾಕ್ಸಿನೇಷನ್​

ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಶುರುವಾಗಿದ್ದು, ಸಿದ್ಧತೆ ಸುಗಮವಾಗಿ ನಡೆದಿದೆ.

kadalekayi parishe in Bangalore
ಕಡಲೆಕಾಯಿ ಪರಿಷೆಗೆ ಕ್ಷಣಗಣನೆ
author img

By

Published : Nov 28, 2021, 4:58 PM IST

ಬೆಂಗಳೂರು: ಕಡೇ ಕಾರ್ತಿಕ ಮಾಸದಂದು ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಶುರುವಾಗಿದೆ. ನಾಳೆಯಿಂದ ಮೂರು ದಿನಗಳ ಕಾಲ ನಡೆಯಲಿದೆ. ಈ ಪರಿಷೆಗೆ ನಗರದ ಬಸವನಗುಡಿ ಸಜ್ಜಾಗುತ್ತಿದ್ದು, ಗುಂಪು ಗೂಡದಂತೆ ಮಾರ್ಷಲ್​​​ರಿಂದ ಎಚ್ಚರಿಕೆ ನೀಡಲಾಗುತ್ತಿದೆ.

ಕಡಲೆಕಾಯಿ ಪರಿಷೆಗೆ ಕ್ಷಣಗಣನೆ

ಈಗಾಗಲೇ ಪರಿಷೆಗೆ ಸಾಮ್ರಾಟ್‌, ಗಡಂಗ್‌, ಬಾದಾಮಿ ಸೇರಿದಂತೆ ಇಂತಹ ಹತ್ತಾರು ಜಾತಿಯ ಕಡಲೆ ಕಾಯಿಗಳನ್ನು ರಾಮನಗರ, ಮಾಗಡಿ, ಕನಕಪುರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಮತ್ತಿತರ ಭಾಗಗಳಿಂದ ತಂದು ಮಾರಾಟ ಮಾಡಲಾಗುತ್ತಿದೆ. ಇವುಗಳ ರುಚಿಯನ್ನು ಸವಿಯಲು ಜನರು ಮುಗಿಬೀಳುತ್ತಿದ್ದಾರೆ. ಪರಿಷೆಯ ಅಂಗವಾಗಿ ಬಸವನಗುಡಿ ಪ್ರದೇಶದಲ್ಲಿ ವಾಹನ ನಿಲುಗಡೆ ಬದಲಾವಣೆ ಸಾಧ್ಯತೆ ಇದೆ.

3 ದಿನಗಳ ಜಾತ್ರೆ:

ಈ ಬಾರಿಯ ಪರಿಷೆಗೆ ಕಳೆದ ವರ್ಷಕ್ಕಿಂತ ಹೆಚ್ಚು ಜನರು ಬರುವ ನಿರೀಕ್ಷೆಯಿದೆ. ಕಳೆದ ವರ್ಷ ಕೋವಿಡ್ ಹಿನ್ನೆಲೆ ಪರಿಷೆಗೆ ಕೇವಲ ಒಂದು ದಿನ ಮಾತ್ರ ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಈ ಬಾರಿ ಮೊದಲಿನಂತೆ 3 ದಿನಗಳ ಕಾಲ ಜಾತ್ರೆ ನಡೆಯಲಿದೆ.‌

preparation for kadalekayi parishe: ಬಸವನಗುಡಿಯ ದೊಡ್ಡ ಗಣಪನಿಗೆ ಇಂದು ಮುಂಜಾನೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ನಡೆದಿವೆ. ಸುಮಾರು 2 ಕ್ವಿಂಟಾಲ್ ಕಡಲೆಕಾಯಿ, ಪಂಚಾಮೃತಗಳಿಂದ ದೇವರಿಗೆ ಅಭಿಷೇಕ ನಡೆದಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಬಸವನಗುಡಿ ಸುತ್ತಮುತ್ತ ಜಾತ್ರೆಯ ವಾತಾವರಣವಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ದೊಡ್ಡ ಗಣೇಶ ಹಾಗೂ ದೊಡ್ಡ ಬಸವಣ್ಣನ ದೇವಸ್ಥಾನದಲ್ಲಿ ಭಕ್ತಾದಿಗಳು ಸರಥಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಿಯಮ ಜಾರಿ ಮಾಡಿದ್ದು, ದೇವಾಸ್ಥಾನಕ್ಕೆ ಬರುವ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯ ಮಾಡಲಾಗಿದೆ.‌

ಜಾತ್ರೆ ನಡೆಯುವ ಸ್ಥಳದಲ್ಲಿಯೇ ಟೆಸ್ಟಿಂಗ್ ಸೆಂಟರ್ ಹಾಗೂ ವ್ಯಾಕ್ಸಿನ್​ ನೀಡಲು ಸಜ್ಜು ಮಾಡಲಾಗಿದೆ. ಓಮಿಕ್ರಾನ್ ಆತಂಕದ ನಡುವೆಯೇ ಐಸಿಹಾಸಿಕ ಜಾತ್ರೆಗೆ ಅನುಮತಿ ನೀಡಿದ್ದು, ಜನರು ಸಂಭ್ರಮದಲ್ಲಿ ಮೈ ಮರೆಯದಂತೆ ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ: ಕುಷ್ಟಗಿ : ಮೊರಾರ್ಜಿ ವಸತಿ ನಿಲಯದಲ್ಲಿ ಕಳಪೆ ಉಪಹಾರ ಸೇವಿಸಿ 30ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

ಮಾರ್ಷಲ್ಸ್ ಸೂಪರ್​ವೈಸರ್ ರಾಜೇಂದ್ರ ಭದ್ರತೆ ಬಗ್ಗೆ ಮಾಹಿತಿ ನೀಡಿದ್ದು, ಪರಿಷೆಗೆ ಒಟ್ಟು 15 ಜನ ಮಾರ್ಷಲ್​​ಗಳನ್ನು ನೇಮಕ ಮಾಡಿದ್ದೇವೆ. ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾಸ್ಕ್ ಹಾಕದೇ ಇರುವವರಿಗೆ ಜಾಗೃತಿ ಮೂಡಿಸುತ್ತಿದ್ದು, ಯಾವುದೇ ದಂಡವನ್ನು ವಿಧಿಸುತ್ತಿಲ್ಲ. ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಸಿದ್ರೆ ಸೀಜ್ ಮಾಡುತ್ತಿದ್ದೇವೆ. ಎರಡು ಟೆಸ್ಟಿಂಗ್ ಕೇಂದ್ರ ಹಾಗೂ ಎರಡು ವ್ಯಾಕ್ಸಿನೇಷನ್‌ ಸೆಂಟರ್​ಗಳನ್ನು ತೆರೆದಿದ್ದೇವೆ. ವ್ಯಾಪಾರಸ್ಥರಿಂದ ವ್ಯಾಕ್ಸಿನೇಷನ್‌ ಪಡೆದುಕೊಂಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ವ್ಯಾಕ್ಸಿನ್​​ ಪಡೆಯದವರಿಗೆ ವ್ಯಾಕ್ಸಿನ್​ ಹಾಕಿಸಿದ್ದೇವೆ. ಗುಂಪು ಗೂಡದಂತೆ ಮಾರ್ಷಲ್ಸ್ ಎಚ್ಚರಿಸಲಿದ್ದು, ದೇವಸ್ಥಾನದಲ್ಲಿ ಹೆಚ್ಚು ಹೊತ್ತು ಜನರು ನಿಲ್ಲದಂತೆ ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಅಂತ ತಿಳಿಸಿದ್ದಾರೆ.

ಒಟ್ಟಾರೆ, ಕಡಲೆಕಾಯಿ ಪರಿಷೆಗೆ ಬಸವನಗುಡಿಯಲ್ಲಿ ಭರ್ಜರಿ ತಯಾರಿ ನಡೆದಿದ್ದು, ಬೆಂಗಳೂರು ಜನತೆ ಕೂಡ ಈ ಜಾತ್ರೆಯನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.