ETV Bharat / city

ಚುನಾವಣೆ ಮೇಲೆ ಕಣ್ಣು: ಜೆಡಿಎಸ್​ ಜನತಾ ಜಲಧಾರೆ, ಕಾಂಗ್ರೆಸ್​ನಿಂದ ಮೇಕೆದಾಟು ಹೋರಾಟದ ಸಿದ್ಧತೆ - ಜೆಡಿಎಸ್​ನಿಂದ ಜಲಧಾರೆ ಯಾತ್ರೆ

ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಆಸುಪಾಸಿನಲ್ಲೇ, ಜೆಡಿಎಸ್ ಜನತಾ ಜಲಧಾರೆ ನಡೆಸಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ ವಿರುದ್ಧ ಬಹಿರಂಗ ಸಮರ ಸಾರಿರುವ ಜೆಡಿಎಸ್, ಜನತಾ ಜಲಧಾರೆಯನ್ನು ಹಿಂದೂ ಸಂಪ್ರದಾಯದಂತೆ ಆಚರಿಸುವ ಮೂಲಕ ಬಿಜೆಪಿಗೂ ಒಳಗೊಳಗೆ ಸೆಡ್ಡು ಹೊಡೆಯಲು ಸಿದ್ದತೆ ಮಾಡಿಕೊಳ್ಳುತ್ತಿದೆ.

all-parties-preparing
ಜನತಾ ಜಲಧಾರೆ
author img

By

Published : Feb 25, 2022, 10:05 AM IST

ಬೆಂಗಳೂರು: ರಾಜ್ಯ ರಾಜಕೀಯ ಪಕ್ಷಗಳ ಕಣ್ಣು ಮುಂಬರುವ 2023ರ ವಿಧಾನಸಭೆ ಚುನಾವಣೆಯ ಮೇಲಿದೆ. ಮೇಕೆದಾಟು ಪಾದಯಾತ್ರೆ, ಹಿಜಾಬ್ ವಿವಾದ, ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿದೆ. ಅದೇ ರೀತಿಯಾಗಿ ಜೆಡಿಎಸ್ ಕೂಡ ಜನತಾ ಜಲಧಾರೆಯೊಂದಿಗೆ 2023 ರ ವಿಧಾನಸಭೆ ಚುನಾವಣಾ ಹೋರಾಟಕ್ಕೆ ಮುನ್ನುಡಿ ಬರೆಯಲು ಸಜ್ಜಾಗುತ್ತಿದೆ.

ಕಾಂಗ್ರೆಸ್​ನ ಮೇಕೆದಾಟು ಪಾದಯಾತ್ರೆ ಆಸುಪಾಸಿನಲ್ಲೇ, ಜೆಡಿಎಸ್ ಜನತಾ ಜಲಧಾರೆ ನಡೆಸಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ ವಿರುದ್ಧ ಬಹಿರಂಗ ಸಮರ ಸಾರಿರುವ ಜೆಡಿಎಸ್, ಜನತಾ ಜಲಧಾರೆಯನ್ನು ಹಿಂದೂ ಸಂಪ್ರದಾಯದಂತೆ ಆಚರಿಸುವ ಮೂಲಕ ಬಿಜೆಪಿಗೂ ಒಳಗೊಳಗೆ ಸೆಡ್ಡು ಹೊಡೆಯಲು ಸಿದ್ದತೆ ಮಾಡಿಕೊಳ್ಳುತ್ತಿದೆ.

ಇಡೀ ಜನತಾ ಜಲಧಾರೆ ಯಾತ್ರೆಗೆ ಹಿಂದೂ ಧಾರ್ಮಿಕ ಸ್ಪರ್ಶ ನೀಡಲಾಗುತ್ತಿದೆ. ಹಿಂದೂ ಸಂಪ್ರದಾಯವನ್ನು ಈ ಸಂದರ್ಭದಲ್ಲಿ ಚಾಚೂ ತಪ್ಪದೆ ಪಾಲಿಸಿ ಬಿಜೆಪಿಯ ಹಿಂದು ಅಜೆಂಡಾಕ್ಕೆ ಪೆಟ್ಟು ಕೊಡುವ ತಂತ್ರಗಾರಿಕೆ ಜೊತೆಗೆ, ಜನತಾ ಜಲಧಾರೆ ಮೂಲಕ ಪಕ್ಷದಲ್ಲಿ ಹೊಸ ಹುಮ್ಮಸ್ಸು, ಉತ್ಸಾಹ ತುಂಬುವ ಯೋಜನೆ ಜೆಡಿಎಸ್‍ ಹಾಕಿಕೊಂಡಿದೆ.

ತಳ ಹಂತದ ಕಾರ್ಯಕರ್ತರಿಂದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಶಾಸಕರನ್ನು ಒಟ್ಟುಗೂಡಿಸುವುದೇ ಈ ಜಲಧಾರೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದ ಎಲ್ಲ ಭಾಗಗಳಿಗೂ ನೀರು ಒದಗಿಸುವ, ಲಭ್ಯ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಹಾಗೂ ನನೆಗುದಿಗೆ ಬಿದ್ದಿರುವ ಎಲ್ಲ ನೀರಾವರಿ ಯೋಜನೆಗಳನ್ನು ಜಾರಿ ಮಾಡುವ ಮಹಾ ಸಂಕಲ್ಪದೊಂದಿಗೆ ಈ ಜನತಾ ಜಲಧಾರೆ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 15 ನದಿಗಳ 51 ಸ್ಥಳಗಳಲ್ಲಿ ಪವಿತ್ರ ನದಿಗಳ ಜಲ ಸಂಗ್ರಹ ಮಾಡಲಾಗುತ್ತದೆ.

ಜೆಡಿಎಸ್​ನಿಂದ ಗಂಗಾರತಿ: ರಾಜ್ಯದ 180 ವಿಧಾನಸಭೆ ಕ್ಷೇತ್ರಗಳು, 140 ತಾಲೂಕು ಕೇಂದ್ರಗಳಲ್ಲಿ ಈ ಕಲಶಗಳು ಹಾದು ಹೋಗಲಿವೆ. ಜಲಧಾರೆ ಉತ್ಸಾಹ ಕಾರ್ಯಕ್ರಮ ಮುಗಿದ ನಂತರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಕಲಶ ಪ್ರತಿಷ್ಠಾಪನೆ ಮಾಡಿ ಚುನಾವಣೆ ಘೋಷಣೆಯಾಗುವವರೆಗೂ ಗಂಗಾ ಪೂಜೆ, ಗಂಗಾ ಆರತಿ ನಿರಂತರವಾಗಿ ನಡೆಸುವ ಕಾರ್ಯಕ್ರಮವನ್ನು ಜೆಡಿಎಸ್ ರೂಪಿಸಿದೆ.

ಇದರ ಜೊತೆಗೆ ಅಭ್ಯರ್ಥಿಗಳ ಆಯ್ಕೆಗೂ ಜಲಧಾರೆ ಕಾರ್ಯಕ್ರಮ ಬಳಕೆ ಮಾಡಿಕೊಳ್ಳುವ ತಂತ್ರ ಜೆಡಿಎಸ್​ನದ್ದು. 2ನೇ ಹಂತದ ನಾಯಕರು ಹಾಗೂ ಕ್ರಿಯಾಶೀಲ ಕಾರ್ಯಕರ್ತರು ಮತ್ತು ಅಭ್ಯರ್ಥಿಗಳನ್ನು ಗುರುತಿಸಲು ಜಲಧಾರೆ ಬಳಕೆ ಮಾಡಿಕೊಳ್ಳುವ ತಂತ್ರಗಾರಿಕೆ ಮಾಡಲಾಗಿದೆ. ಕ್ರಿಯಾಶೀಲ ಮುಖಂಡರಿಗೆ ಪಕ್ಷದಲ್ಲಿ ಅವಕಾಶ ಕಲ್ಪಸುವ ಉದ್ದೇಶವನ್ನು ವರಿಷ್ಠರು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ: ಶಾಸಕ ದತ್ತು ಪಡೆದ ಶಾಲೆಯಲ್ಲೇ ಇಲ್ಲ ಶೌಚಾಲಯ: ಸಿಎಂಗೆ ಪತ್ರ ಬರೆದ ವಿದ್ಯಾರ್ಥಿನಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.