ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿಯು 9 ಮಂದಿ ಹಿರಿಯ ರಾಷ್ಟ್ರೀಯ ನಾಯಕರನ್ನು ಕರ್ನಾಟಕದ ವಿಧಾನಸಭೆ ಉಪಚುನಾವಣೆಗೆ ವೀಕ್ಷಕರನ್ನಾಗಿ ನೇಮಿಸಿದೆ.
![AICC appointed 9 senior national leaders as observers for by-election](https://etvbharatimages.akamaized.net/etvbharat/prod-images/5096219_thumbna.jpeg)
ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಹಿರಿಯ ಕಾರ್ಯಕಾರಿಗಳನ್ನು ವಿಶೇಷವಾಗಿ ಆಯ್ಕೆ ಮಾಡಿ ವೀಕ್ಷಕರನ್ನಾಗಿ ನೇಮಿಸಿದೆ. ಈಗಾಗಲೇ 15 ಕ್ಷೇತ್ರಗಳಿಗೂ ಮಾಜಿ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ವೀಕ್ಷಕರ ತಂಡ ನೇಮಿಸಿರುವ ಪಕ್ಷ, ಇಂದು ಹೆಚ್ಚುವರಿಯಾಗಿ ಹಿರಿಯರನ್ನು ನೇಮಿಸಿದೆ. ಇವರು ತಮಗೆ ನಿಯೋಜಿಸಿದ ಕ್ಷೇತ್ರಗಳ ಮೇಲೆ ನಿಗಾ ಇಟ್ಟು ಕಾರ್ಯನಿರ್ವಹಿಸಲಿದ್ದಾರೆ.
ಎಐಸಿಸಿ ನೇಮಿಸಿದ ವೀಕ್ಷಕರ ವಿವರ ಇಂತಿದೆ:
- ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ಎಸ್.ಎ.ಸಂಪತ್ಕುಮಾರ್- ಅಥಣಿ, ಕಾಗವಾಡ
- ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಶಾಸಕ ವಂಶಿ ಚಂದ್ ರೆಡ್ಡಿ - ಗೋಕಾಕ್, ಯಲ್ಲಾಪುರ
- ತೆಲಂಗಾಣದ ಮಾಜಿ ಸಂಸದ ಪೂನಂ ಪ್ರಭಾಕರ್ - ಹಿರೆಕೆರೂರು, ರಾಣೆಬೆನ್ನೂರು
- ಆಂಧ್ರಪ್ರದೇಶದ ಮಾಜಿ ಸಂಸದ ಎಂ.ಎಂ.ಪಲ್ಲಂ ರಾಜು - ಚಿಕ್ಕಬಳ್ಳಾಪುರ, ಹೊಸಕೋಟೆ
- ತಮಿಳುನಾಡು ಪಿಸಿಸಿ ಕಾರ್ಯಾಧ್ಯಕ್ಷ ಮಯೂರ ಜಯಕುಮಾರ್ - ಕೆ.ಆರ್.ಪುರ, ಶಿವಾಜಿನಗರ
- ತಮಿಳುನಾಡಿನ ಮಾಜಿ ಸಂಸದ ವಿಶ್ವನಾಥನ್ - ಕೃಷ್ಣರಾಜಪೇಟೆ, ಹುಣಸೂರು
- ಕೇರಳ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂಜೀವ್ ಜೋಸೆಫ್ - ಮಹಾಲಕ್ಷ್ಮಿಲೇಔಟ್, ಯಶವಂತಪುರ
- ಆಂಧ್ರಪ್ರದೇಶದ ಮಾಜಿ ಸಂಸದ ಎನ್.ತುಳಸಿ ರೆಡ್ಡಿ - ಬಳ್ಳಾರಿ, ವಿಜಯನಗರ
- ಎಐಸಿಸಿ ಕಾರ್ಯದರ್ಶಿ ಹಾಗೂ ಮಾಜಿ ಸಂಸದ ಜೆ.ಡಿ.ಸೇಲಂ ಅವರನ್ನು ಸಮನ್ವಯಕಾರರನ್ನಾಗಿ ನೇಮಿಸಲಾಗಿದೆ.