ETV Bharat / city

ಪತ್ರಕರ್ತೆ ಭಾರತಿ ಹೆಗಡೆಯವರ 'ಮಣ್ಣಿನ ಗೆಳತಿ' ಕೃಷಿ ಪುಸ್ತಕ ಪ್ರಶಸ್ತಿಗೆ ಆಯ್ಕೆ - Bangalore Agriculture university

ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಅನುಭವವನ್ನು ಒಳಗೊಂಡಿರುವ 'ಮಣ್ಣಿನ ಗೆಳತಿ' ಕೃಷಿ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಪುಸ್ತಕವನ್ನು ಪತ್ರಕರ್ತೆ ಭಾರತಿ ಹೆಗಡೆ ಬರೆದಿದ್ದಾರೆ.

Mannina gelati Book
ಪತ್ರಕರ್ತೆ ಭಾರತಿ ಹೆಗಡೆ
author img

By

Published : Sep 28, 2020, 6:36 PM IST

ಬೆಂಗಳೂರು: ಪತ್ರಕರ್ತೆ ಭಾರತಿ ಹೆಗಡೆ ಅವರ 'ಮಣ್ಣಿನ ಗೆಳತಿ' ಪುಸ್ತಕ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ. ಅಕ್ಟೋಬರ್ 3 ರಂದು ನಡೆಯಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 55ನೇ ಸಂಸ್ಥಾಪನಾ ದಿನಾಚರಣೆಯಂದು ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವಿ ಪ್ರಕಟಣೆಯಲ್ಲಿ ತಿಳಿಸಿದೆ.

Mannina gelati Book
'ಮಣ್ಣಿನ ಗೆಳತಿ'

ಈ ಕೃತಿಯು ಕೃಷಿಯಲ್ಲಿ ತೊಡಗಿದ ಮಹಿಳೆಯರ ಅನುಭವದ ಕಥನವಾಗಿದೆ. ಈ ಪುಸ್ತಕದಲ್ಲಿ ಕೃಷಿಯಲ್ಲಿ ತೊಡಗಿಕೊಂಡವರ 38 ಮಹಿಳೆಯರ ಅನುಭವವನ್ನು ಬರೆಯಲಾಗಿದೆ. ಭಾರತಿ ಹೆಗಡೆಯವರು ಮೊದಲು ಈ ಪುಸ್ತಕವನ್ನು ಮೈಸೂರು ವಿಶ್ವವಿದ್ಯಾನಿಲಯದ ಫೆಲೋಶಿಪ್​​​​​​​​​​​​​​​ಗಾಗಿ ಬರೆದರು. ನಂತರ ಅದರೊಂದಿಗೆ ಇನ್ನೊಂದಿಷ್ಟು ಮಹಿಳೆಯರ ಅಭಿಪ್ರಾಯ ಹಾಗೂ ಅನುಭವಗಳನ್ನು ಸಂಗ್ರಹವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿದೆ. ಈ ಪುಸ್ತಕವನ್ನು ವಿಕಾಸ ಪ್ರಕಾಶನ ಹೊರತಂದಿದೆ.‌

Mannina gelati Book
ಬೆಂಗಳೂರು ಕೃಷಿ ವಿವಿ ಪ್ರಕಟಣೆ

"ಕೃಷಿಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರ ಕುರಿತು ಕನ್ನಡದಲ್ಲಿ ಬರೆಯಲಾದ ಮೊದಲ ಪುಸ್ತಕವಿದು. ಈ ಪುಸ್ತಕವನ್ನು ಕೃಷಿ ವಿವಿಯವರು ಗುರುತಿಸಿ ಪ್ರಶಸ್ತಿ ನೀಡಿರುವುದು ಬಹಳ ಖುಷಿಯಾಗುತ್ತಿದೆ. ಇದು ನನಗೆ ದೊರೆತ ಪ್ರಶಸ್ತಿ ಎನ್ನುವುದಕ್ಕಿಂತ ಕೃಷಿಯಲ್ಲಿ ತೊಡಗಿಸಿಕೊಂಡ ಎಲ್ಲಾ ಮಹಿಳೆಯರಿಗೆ ಇದು ಸಲ್ಲಬೇಕು. ಕೃಷಿ ಅನುಭವಗಳ ಕುರಿತು ಮತಷ್ಟು ಪುಸ್ತಕ ಬರಬೇಕು. ಕೃಷಿಯಲ್ಲಿ ಮಹಿಳೆಯರಿಗೆ ಇರುವ ಜ್ಞಾನ ಮತ್ತಷ್ಟು ದಾಖಲಾಗಬೇಕಿದೆ. ಆ ನಿಟ್ಟಿನಲ್ಲಿ ಇದು ಮತ್ತೊಂದು ಪ್ರಯತ್ನ ಅಷ್ಟೇ" ಎಂದು ಲೇಖಕಿ ಭಾರತಿ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.