ETV Bharat / city

ವಾಸ್ತು, ಲಕ್​ ಲೆಕ್ಕಾಚಾರ... ಮತ್ತೆ ಮೂವರು ಸಚಿವರ ವಿಧಾನ ಸೌಧ ಕೊಠಡಿ ಸಂಖ್ಯೆ ಬದಲಾವಣೆ

ಈ‌ ಮುಂಚೆ ಹಂಚಲಾದ ಕೊಠಡಿಯನ್ನು ಬದಲಾಯಿಸುವಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳ ಬಳಿ ಸಚಿವರುಗಳು ದುಂಬಾಲು ಬಿದ್ದಿದ್ದಾರೆ. ಹೀಗಾಗಿ, ಸಚಿವರಾದ ವಿ.ಸೋಮಣ್ಣ, ಲಕ್ಷ್ಮಣ ಸವದಿ ಮತ್ತು ಪ್ರಭು ಚೌವಾಣ್​ಗೆ ಈ ಹಿಂದೆ ನೀಡಲಾಗಿದ್ದ ಕೊಠಡಿಯನ್ನು ಬದಲಾಯಿಸಲಾಗಿದೆ.

author img

By

Published : Aug 26, 2019, 4:18 PM IST

ಮತ್ತೆ ಕೆಲ ಸಚಿವರುಗಳ ವಿಧಾನಸೌಧ ಕೊಠಡಿ ಬದಲಾವಣೆ!

ಬೆಂಗಳೂರು: ವಿಧಾನಸೌಧದಲ್ಲಿ ಸಚಿವರ ಕೊಠಡಿಗಳ ಬದಲಾವಣೆ ಪರ್ವ ಮುಂದುವರಿದಿದೆ.

ಲಕ್ಕಿ ಕೊಠಡಿ, ವಾಸ್ತು ಪ್ರಕಾರದಂತೆ ಈ‌ ಮುಂಚೆ ಹಂಚಲಾದ ಕೊಠಡಿಯನ್ನು ಬದಲಾಯಿಸುವಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳ ಬಳಿ ಸಚಿವರುಗಳು ದುಂಬಾಲು ಬಿದ್ದಿದ್ದಾರೆ. ಇದೀಗ ಮತ್ತೆ ಮೂವರು ಸಚಿವರ ಕೊಠಡಿಯನ್ನು ಬದಲಾಯಿಸಿ, ಡಿಪಿಆರ್ ಇಲಾಖೆ ಆದೇಶ ಹೊರಡಿಸಿದೆ.

vidhana soudha

ಸಚಿವರಾದ ವಿ.ಸೋಮಣ್ಣ, ಲಕ್ಷ್ಮಣ ಸವದಿ ಮತ್ತು ಪ್ರಭು ಚೌವಾಣ್​ಗೆ ಈ ಹಿಂದೆ ನೀಡಲಾಗಿದ್ದ ಕೊಠಡಿಯನ್ನು ಬದಲಾಯಿಸಲಾಗಿದೆ. ಈ ಮುಂಚೆ ವಿ.ಸೋಮಣ್ಣ ಗೆ ವಿಧಾನಸೌಧದ‌ ಮೂರನೇ ಮಹಡಿಯಲ್ಲಿರುವ 314ರ ಕೊಠಡಿಯನ್ನು ಹಂಚಿಕೆ ಮಾಡಿತ್ತು. ಬಳಿಕ ಕೆ.ಎಸ್.ಈಶ್ವರಪ್ಪರಿಗೆ ಆ ಕೊಠಡಿಯನ್ನು ನೀಡಲಾಗಿತ್ತು. ವಿ.ಸೋಮಣ್ಣಗೆ 329ರ ಕೊಠಡಿಯನ್ನು ಹಂಚಿಕೆ ಮಾಡಾಲಾಗಿತ್ತು. ಆದರೆ, ಆ‌ ಕೊಠಡಿಗೆ ಹೋಗಲು ಇಷ್ಟ ಪಡದ ವಿ.ಸೋಮಣ್ಣ ವಿಕಾಸಸೌಧದಲ್ಲಿ ಕೊಠಡಿ ನೀಡುವಂತೆ ಕೋರಿದ್ದರು. ಅದರಂತೆ ಈಗ ವಿ.ಸೋಮಣ್ಣಗೆ ವಿಕಾಸಸೌಧದಲ್ಲಿನ 143-146 ಕೊಠಡಿಯನ್ನು ಹಂಚಿಕೆ ಮಾಡಲಾಗಿದೆ‌.

ಇನ್ನು ಸಚಿವ ಲಕ್ಷ್ಮಣ ಸವದಿಗೆ ವಿಧಾನಸೌಧದಲ್ಲಿನ 301ರ ಕೊಠಡಿಯನ್ನು ನೀಡಲಾಗಿತ್ತು. ಆದರೆ ಅವರೂ ಕೊಠಡಿ ಬದಲಾವಣೆಗೆ ಮನವಿ ಮಾಡಿದ್ದರಿಂದ ಇದೀಗ ಅವರಿಗೆ ವಿಕಾಸಸೌಧದಲ್ಲಿನ 344-345 ಕೊಠಡಿ ಮರು ಹಂಚಿಕೆ ಮಾಡಲಾಗಿದೆ.

ಸಚಿವ ಪ್ರಭು ಚೌಹಾಣ್​ಗೆ ಈ‌ ಮುಂಚೆ ವಿಕಾಸಸೌಧದಲ್ಲಿನ 143-146 ಕೊಠಡಿ ನೀಡಲಾಗಿತ್ತು. ಆದರೆ, ಇದೀಗ ಅವರಿಗೆ ವಿಧಾನಸೌಧದಲ್ಲಿನ 329ರ ಕೊಠಡಿಯನ್ನು ಮರು ಹಂಚಿಕೆ ಮಾಡಲಾಗಿದೆ.

Intro:GggBody:KN_BNG_01_VIDHANSAUDHAROOM_CHANGE_SCRIPT_7201951

ಮತ್ತೆ ಕೆಲ ಸಚಿವರುಗಳ ವಿಧಾನಸೌಧ ಕೊಠಡಿ ಬದಲಾವಣೆ!

ಬೆಂಗಳೂರು: ವಿಧಾನಸೌಧದಲ್ಲಿ ಸಚಿವರುಗಳಿಗೆ‌ ಹಂಚಿಕೆ‌ ಮಾಡಲಾದ ಕೊಠಡಿಗಳ ಬದಲಾವಣೆ ಮುಂದುವರಿದಿದೆ.

ಲಕ್ಕಿ ಕೊಠಡಿ, ವಾಸ್ತು ಪ್ರಕಾರದಂತೆ ಈ‌ ಮುಂಚೆ ಹಂಚಲಾದ ಕೊಠಡಿಯನ್ನು ಬದಲಾಯಿಸುವಂತೆ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳ ಬಳಿ ಸಚಿವರುಗಳು ದಂಬಾಲು ಬಿದ್ದಿದ್ದಾರೆ. ಇದೀಗ ಮತ್ತೆ ಮೂವರು ಸಚಿವರುಗಳ ಕೊಠಡಿಯನ್ನು ಬದಲಾಯಿಸಿ, ಡಿಪಿಆರ್ ಇಲಾಖೆ ಆದೇಶ ಹೊರಡಿಸಿದೆ.

ಸಚಿವರಾದ ವಿ.ಸೋಮಣ್ಣ, ಲಕ್ಷ್ಮಣ ಸವದಿ ಮತ್ತು ಪ್ರಭು ಚೌವಾಣ್ ಗೆ ಈ ಹಿಂದೆ ನೀಡಲಾಗಿದ್ದ ಕೊಠಡಿಯನ್ನು ಬದಲಾಯಿಸಲಾಗಿದೆ. ಈ ಮುಂಚೆ ವಿ.ಸೋಮಣ್ಣ ಗೆ ವಿಧಾನಸೌಧದ‌ ಮೂರನೇ ಮಹಡಿಯಲ್ಲಿರುವ 314ರ ಕೊಠಡಿಯನ್ನು ಹಂಚಿಕೆ ಮಾಡಿತ್ತು. ಬಳಿಕ ಕೆ.ಎಸ್.ಈಶ್ವರಪ್ಪರಿಗೆ ಆ ಕೊಠಡಿಯನ್ನು ನೀಡಲಾಗಿತ್ತು. ವಿ.ಸೋಮಣ್ಣಗೆ 329ರ ಕೊಠಡಿಯನ್ನು ಹಂಚಿಕೆ ಮಾಡಾಲಗಿತ್ತು. ಆದರೆ, ಆ‌ ಕೊಠಡಿಗೆ ಹೋಗಲು ಇಷ್ಟ ಪಡದ ವಿ.ಸೋಮಣ್ಣ ವಿಕಾಸಸೌಧದಲ್ಲಿ ಕೊಠಡಿ ನೀಡುವಂತೆ ಕೋರಿದ್ದರು, ಅದರಂತೆ ಈಗ ವಿ.ಸೋಮಣ್ಣಗೆ ವಿಕಾಸಸೌಧದಲ್ಲಿನ 143-146 ಕೊಠಡಿ ಯನ್ನು ಹಂಚಿಕೆ ಮಾಡಲಾಗಿದೆ‌.

ಇನ್ನು ಸಚಿವ ಲಕ್ಷ್ಮಣ ಸವದಿಗೆ ವಿಧಾನಸೌಧದಲ್ಲಿನ 301ರ ಕೊಠಡಿಯನ್ನು ನೀಡಲಾಗಿತ್ತು. ಆದರೆ ಅವರೂ ಕೊಠಡಿ ಬದಲಾವಣೆಗೆ ಮನವಿ ಮಾಡಿದ್ದರಿಂದ ಇದೀಗ ಅವರಿಗೆ ವಿಕಾಸಸೌಧದಲ್ಲಿನ 344-345 ಕೊಠಡಿ ಮರು ಹಂಚಿಕೆ ಮಾಡಲಾಗಿದೆ.

ಸಚಿವ ಪ್ರಭು ಚೌಹಾಣ್ ಗೆ ಈ‌ ಮುಂಚೆ ವಿಕಾಸಸೌಧದಲ್ಲಿನ 143-146 ಕೊಠಡಿ ನೀಡಲಾಗಿತ್ತು. ಆದರೆ, ಇದೀಗ ಅವರಿಗೆ ವಿಧಾನಸೌಧದಲ್ಲಿನ 329ರ ಕೊಠಡಿಯನ್ನು ಮರು ಹಂಚಿಕೆ ಮಾಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.