ಬೆಂಗಳೂರು: ರಾಜ್ಯ ಪೊಲೀಸ್ ಮೀಸಲು ಪಡೆ ಎಡಿಜಿಪಿ ಅಲೋಕ್ ಕುಮಾರ್ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಮನೆಗೆ ಮರಳುತ್ತಿದ್ದಂತೆ ಅವರ ಮಗಳು ಕೇಕ್ ಕತ್ತರಿಸಿ ಸಂಭ್ರಮಾಚರಣೆ ಮಾಡಿದ್ದಾರೆ.
ಕೇಕ್ನಲ್ಲಿ 'ವೆಲ್ ಕಮ್ ಬ್ಯಾಕ್ ಪಪ್ಪ' ಎಂದು ಬರೆಯಲಾಗಿದ್ದು, ಸಿಹಿ ತಿನ್ನಿಸುವ ಮೂಲಕ ಅಪ್ಪನನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ. ಅಲೋಕ್ ಕುಮಾರ್ ತಮ್ಮ ಬಿಡುವಿನ ಅಮೂಲ್ಯ ಸಮಯವನ್ನು ಮಗಳೊಂದಿಗೆ ಕಳೆದಿದ್ದಾರೆ.
ಡಿಸೆಂಬರ್ 9ರಂದು ನನಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇದನ್ನ ನಾನು ಪಾಸಿಟಿವ್ ರೀತಿಯಲ್ಲಿ ಸ್ವೀಕರಿಸಿದ್ದೇನೆ. ಸಿಹಿ-ಕಹಿ ಅನುಭವವೇ ಜೀವನ ಎಂದು ಅಲೋಕ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಓದಿ: ಅಕ್ರಮ ಸಂಬಂಧ ವಿಚಾರಕ್ಕೆ ಪತಿಯ ಹತ್ಯೆ: ಪತ್ನಿ-ಪ್ರಿಯಕರ ಸೇರಿ ಮೂವರ ಬಂಧನ
ಇದೀಗ ನಾನು ಸೋಂಕಿನಿಂದ ಗುಣಮುಖನಾಗಿದ್ದೇನೆ. ಸಾರ್ವಜನಿಕರು ಕೊರೊನಾ ಕುರಿತಂತೆ ಮುಂಜಾಗ್ರತೆ ವಹಿಸಬೇಕು ಎಂದು ಕರೆ ನೀಡಿದ್ದಾರೆ.