ಈ ಕೊರೊನಾ ಎಂಬ ಹೆಮ್ಮಾರಿ ವೈರಸ್ಗೆ ಜನಸಾಮಾನ್ಯರು, ಶ್ರೀಮಂತರು, ಸಿನಿಮಾ ತಾರೆಯರು ಉಸಿರು ಚೆಲ್ಲುತ್ತಿದ್ದಾರೆ. ಇದೀಗ ಹಿರಿಯ ಪತ್ರಕರ್ತ, ಚಿತ್ರನಟ ಸುರೇಶ್ ಚಂದ್ರ ಕೊರೊನಾಗೆ ಬಲಿಯಾಗಿದ್ದಾರೆ.
ಸೋಂಕಿನ ಹಿನ್ನೆಲೆ ಇಪ್ಪತ್ತು ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಉಸಿರಾಟದ ತೊಂದರೆಯಾದ ಕಾರಣ ಸುರೇಶ್ ಚಂದ್ರು ನಿಧರಾಗಿದ್ದಾರೆ ಎಂದು ಅವರ ದೊಡ್ಡ ಮಗ ವಿನಯ್ ಚಂದ್ರ ತಿಳಿಸಿದ್ದಾರೆ. ಈಗಾಗಲೇ ಕೊರೊನಾದಿಂದಾಗಿ ಸ್ಯಾಂಡಲ್ವುಡ್ ಹಲವು ನಟರನ್ನು ಕಳೆದುಕೊಂಡಿದ್ದು, ಸುರೇಶ್ ಸಹ ಇಂದು ಅಸುನೀಗಿದ್ದಾರೆ.
ಸೋಂಕು ಹಿನ್ನೆಲೆ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಸುರೇಶ್ ಚಂದ್ರಗೆ 69 ವರ್ಷ ವಯಸ್ಸಾಗಿತ್ತು. ಇವರು ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ವಾಸವಿದ್ರು.
ಸಂಜೆವಾಣಿ ಪತ್ರಿಕೆಯ ಸಂಪಾದಕರಾಗಿದ್ದ ಸುರೇಶ್ ಚಂದ್ರ, ನಟ, ನಿರ್ದೇಶಕ ಎಸ್.ನಾರಾಯಣ್ ಅವರ ಆಹ್ವಾನದ ಮೇರೆಗೆ ಗಣೇಶ್ ಅಭಿನಯದ 'ಚೆಲುವಿನ ಚಿತ್ತಾರ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು. ಅಲ್ಲಿಂದ ಸುರೇಶ್ ಚಂದ್ರ ಕನ್ನಡ ಚಿತ್ರರಂಗದ ಪೋಷಕ ನಟರಾಗಿ ಬೇಡಿಕೆ ಪಡೆದರು. ಉಗ್ರಂ, ಕಲೀವೀರ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಸುರೇಶ್ ಚಂದ್ರ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಕಿಚ್ಚನ 'ವಿಕ್ರಾಂತ್ ರೋಣ' ಸಿನಿಮಾ ಬಗ್ಗೆ ನಟ ರವಿಶಂಕರ್ ಗೌಡ ಏನು ಹೇಳಿದ್ರು ಗೊತ್ತಾ?
80ರ ದಶಕದಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಕೆಲಸ ನಿರ್ವಹಿಸಿದ್ದ ಸುರೇಶ್ ಚಂದ್ರ, ಚಂದನವನದ ಶಂಕರ್‌ನಾಗ್, ವಿಷ್ಣುವರ್ಧನ್, ಅಂಬರೀಶ್, ದೇವರಾಜ್ ಸೇರಿದಂತೆ ಹಲವು ಹಿರಿಯ ನಟರೊಂದಿಗೆ ಉತ್ತಮ ಒಡನಾಟ ಹೊಂದಿದ್ದರು. ಪತ್ನಿ ಜಯಲಕ್ಷ್ಮಿ, ಮಕ್ಕಳಾದ ವಿನಯ್ ಚಂದ್ರ ಹಾಗೂ ಅಭಯ್ ಚಂದ್ರರನ್ನು ಅಗಲಿ ಸುರೇಶ್ ಚಂದ್ರ ಬಾರದ ಲೋಕಕ್ಕೆ ತೆರಳಿದ್ದಾರೆ. ಸುರೇಶ್ ಚಂದ್ರ ಅವರ ಅಂತ್ಯಕ್ರಿಯೆ ಅವರ ಸ್ವಗ್ರಾಮ ಮಧುಗಿರಿ ತಾಲೂಕು ಲಿಂಗೇನಹಳ್ಳಿಯಲ್ಲಿ ನಡೆಯಲಿದೆ ಎಂದು ಮಗ ವಿನಯ್ ಚಂದ್ರ ತಿಳಿಸಿದ್ದಾರೆ.
ಇದನ್ನೂ ಓದಿ:‘ಕನ್ನಡತಿ’ಯ ನಟಿ ಮಧುಮತಿ ನಟನೆಗೂ ಮುನ್ನ ಮಾಡುತ್ತಿದ್ದ ಕೆಲಸ ಇದೇ ನೋಡಿ..