ಬೆಂಗಳೂರು : ದೇಶಾದ್ಯಂತ ಇಂದು ವೈದ್ಯ ಸಂಘಟನೆಗಳು 'ರಾಷ್ಟ್ರೀಯ ಪ್ರತಿಭಟನಾ ದಿನ'ವನ್ನು ಆಚರಿಸುತ್ತಿವೆ. ವೈದ್ಯರ ಪ್ರೋಟೆಸ್ಟ್ಗೆ, ಸ್ಯಾಂಡಲ್ ವುಡ್ ಖ್ಯಾತ ನಟ ಕೋಮಲ್ ಬೆಂಬಲ ಸೂಚಿಸಿದ್ದಾರ. ಈ ಬಗ್ಗೆ ವಿಡಿಯೋ ಮಾಡುವ ಮೂಲಕ ವೈದ್ಯರ ಕಾರ್ಯವನ್ನು ಸ್ಮರಿಸಿದ್ದಾರೆ ಕೋಮಲ್.
ಈ ವಿಡಿಯೋ ಮಾಡಲು ತುಂಬಾ ದೊಡ್ಡ ಕಾರಣ ಇದೆ. ಕಾರಣ ಅನ್ನುವುದಕ್ಕಿಂತ ವೈದ್ಯರ ಪ್ರತಿಭಾಟನ ದಿನವನ್ನು ಬೆಂಬಲಿಸಬೇಕಾದ ಕರ್ತವ್ಯ ಕೂಡ ಇದೆ. ಕೋವಿಡ್ ಮಹಾಮಾರಿಯ ವಿರುದ್ಧ ಮುಂದೆ ನಿಂತು ಹೋರಾಡುತ್ತಿರುವಂತಹ ಡಾಕ್ಟರ್ಸ್ ಕರ್ತವ್ಯವನ್ನು ತಮ್ಮ ವ್ಯಾಪ್ತಿಯಲ್ಲಿ ಮಾಡುತ್ತಿದ್ದಾರೆ. ಹಣೆಬರಹ ಸರಿಯಿಲ್ಲದ ಸಮಯದಲ್ಲಿ ಎಷ್ಟೋ ಜನ ರೋಗಿಗಳು ಸಾವನ್ನಪ್ಪುತ್ತಾರೆ.
ಹಾಗಂತಾ, ಎಲ್ಲಾ ಸಾವಿಗೂ ಡಾಕ್ಟರ್ಸ್ ಕಾರಣ ಆಗುವುದಿಲ್ಲ. ಆದರೂ ಅವರ ಮೇಲೆ ಹಲ್ಲೆ ನಡೆಯುತ್ತಿವೆ. ಎಲ್ಲರಿಗೂ ಗೊತ್ತಿರುವ ಹಾಗೆ ನಾನು ಮತ್ತೆ ಹೇಳುತ್ತೇನೆ ವೈದ್ಯೋ ನಾರಾಯಣ ಹರಿ ಅಂದರೆ ವೈದ್ಯರನ್ನು ನಾರಾಯಣನಿಗೆ ನಮ್ಮ ಸಂಸ್ಕೃತಿಯಲ್ಲಿ ಹೋಲಿಸಲಾಗುತ್ತದೆ. ಎಲ್ಲರಿಗೂ ನೋವಿರುತ್ತದೆ ನಮ್ಮ ಆಪ್ತರೊಬ್ಬರು ಸತ್ತಿದ್ದಾರೆ ಎಂದರೆ ಎಲ್ಲಾ ಸಂದರ್ಭದಲ್ಲೂ ಡಾಕ್ಟರ್ಸ್ ಕಾರಣರಾಗುವುದಿಲ್ಲ.
ಅವರಿಗೆ ಗೊತ್ತಿರುವ ಮಟ್ಟಿಗೆ ಟ್ರೀಟ್ಮೆಂಟ್ ಮಾಡಿರುತ್ತಾರೆ. ಯಾರೂ ರೋಗಿ ಸಾಯಲಿ ಎಂದು ಬಯಸುವುದಿಲ್ಲ. ಹಾಗಾಗಿ, ನನ್ನ ಕಳಕಳಿಯ ಪ್ರಾರ್ಥನೆ ವೈದ್ಯರನ್ನು ಬೆಂಬಲಿಸಿ. ಡಾಕ್ಟರ್ಸ್ ಜೀವವನ್ನು ಉಳಿಸುವವರು. ಸಂಯಮ ಇರಲಿ, ಪ್ರೋತ್ಸಾಹಿಸಿ. ನನ್ನ ಅನಿಸಿಕೆಯನ್ನು ನಾನು ಹೇಳಿದ್ದೇನೆ. ಏನಾದರೂ ತಪ್ಪಿದ್ದರೆ ಕ್ಷಮಿಸಿ. ನಾನಂತೂ ಸದಾ ಡಾಕ್ಟರ್ಸ್ಗಳಿಗೆ ಬೆಂಬಲ ನೀಡುತ್ತೇನೆ ಎಂದು ತಮ್ಮ ಅನಿಸಿಕೆ ವ್ಯಕ್ತಗಪಡಿಸಿದ್ದಾರೆ.
ವೈದ್ಯರು ದೇವರ ಸಮಾನವೆಂದು ಹೇಳುತ್ತೇನೆ. ಉದಾಹರಣೆಗೆ ನನಗೆ ಕೋವಿಡ್ ಬಂದಿದ್ದನ್ನು ಗುಣಪಡಿಸಿದ್ದೆ ವೈದ್ಯರು. ಆದ್ದರಿಂದ ಕಳಕಳಿಯಿಂದ ಕೇಳುತ್ತೇನೆ, ಹಲ್ಲೆ ಮಾಡಬೇಡಿ ಇದು ಅಪರಾಧ ಕೂಡ ಹೌದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ.