ETV Bharat / city

ಈದ್ಗಾ ಮೈದಾನ ವಿವಾದ: ಹಿಂದೂ ಸಂಘಟನೆಗಳು ಪೊಲೀಸರ ಜಟಾಪಟಿ, ಕಾರ್ಯಕರ್ತರ ವಶ

author img

By

Published : Jul 12, 2022, 3:18 PM IST

ಈದ್ಗಾ ಮೈದಾನ ವಿವಾದಕ್ಕೆ ಸಂಬಂಧಿಸಿದಂತೆ ಬಂದ್​ಗೆ ಚಾಮರಾಜ ಪೇಟೆ ಸುತ್ತಮುತ್ತ ಮತ್ತು ಆಜಾದ್​ ನಗರ, ಗೋರಿಪಾಳ್ಯಲ್ಲಿ ಮಿಶ್ರ ಪ್ರತಿಕ್ರಿಯೆ ಲಭಿಸಿದೆ.

Eidgha Ground protest
ಈದ್ಗಾ ಮೈದಾನ ವಿವಾದ

ಬೆಂಗಳೂರು : ಈದ್ಗಾ ಮೈದಾನಕ್ಕೆ ಸಂಬಂಧಿಸಿದ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಂಗಳವಾರ ಚಾಮರಾಜಪೇಟೆ ನಾಗರಿಕ ವೇದಿಕೆ, ಶ್ರೀರಾಮ ಸೇನೆ, ವರ್ತಕರು, ಹಿಂದೂ ದೇವಾಲಯಗಳ ಪದಾಧಿಕಾರಿಗಳು ಹಾಗೂ ಇತರ ಹಿಂದೂ ಪರವಾದ ಸಂಘಟನೆಗಳು ಬಂದ್​​ಗೆ ಕರೆ ಕೊಟ್ಟಿದ್ದವು. ಆಜಾದ್ ನಗರ, ಗೋರಿಪಾಳ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಮರಾಜಪೇಟೆ ಸುತ್ತಮುತ್ತಲಿನ ಹಿಂದೂ ಬಾಹುಳ್ಯದ ಪ್ರದೇಶದಲ್ಲೂ ಸಹ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ.

ಈದ್ಗಾ ಮೈದಾನ ವಿವಾದ ಬಂದ್​ಗೆ ಮಿಶ್ರ ಪ್ರತಿಕ್ರಿಯೆ

ಈದ್ಗಾ ಮೈದಾನದಲ್ಲಿ ಬೆಳಗಿನಿಂದ ಪ್ರತಿಭಟನಾಕಾರರು ಜಮಾಯಿಸಿದ್ದರು. ಈ ವೇಳೆ, ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಮೈದಾನಕ್ಕೆ ನುಗ್ಗಲು ಯತ್ನಿಸಿದವರನ್ನು ವಶಕ್ಕೆ ಪಡೆದರು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ಸಂಬರಗಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ವಿವಾದಿತ ಸ್ಥಳವಾದ ಈದ್ಗಾ ಮೈದಾನದಲ್ಲೂ ಹೆಚ್ಚುವರಿ ಬಂದೋಬಸ್ತ್ ಇತ್ತು.

ಕೋರ್ಟ್ ಆದೇಶವಿದ್ದರೂ ಧಾರ್ಮಿಕ ಆಚರಣೆಗೆ ಪೊಲೀಸರು ಅವಕಾಶ ಕೊಡುತ್ತಿಲ್ಲ. ಮುಸ್ಲಿಂ ಸಮುದಾಯದವರು ಹಿಂದೂಗಳ ಧಾರ್ಮಿಕ ಆಚರಣೆಗೆ ವಿರೋಧಿಸುತ್ತಿಲ್ಲ. ಆದರೆ, ಕ್ಷೇತ್ರದ ಶಾಸಕರು ಪೊಲೀಸರ ಮೂಲಕ ಅಡ್ಡಿಪಡಿಸುತ್ತಿದ್ದಾರೆ ಎಂಬುವುದು ಬಂದ್ ಕರೆ ಕೊಟ್ಟ ಸಂಘಟನೆಗಳು ಆರೋಪ ಮಾಡಿದೆ.

ಪಾಲಿಕೆ ಆಯುಕ್ತರ ದ್ವಂದ್ವ ಹೇಳಿಕೆ: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌ ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಸಂಬಂಧಿಸಿದ ದ್ವಂದ್ವ ಹೇಳಿಕೆಗಳನ್ನು ನೀಡಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಪಾಲಿಕೆ ಮುಖ್ಯ ಆಯುಕ್ತ ಒಮ್ಮೆ ಇದನ್ನು ವಕ್ಫ್‌ ಆಸ್ತಿ ಎಂದರೆ ಮತ್ತೊಮ್ಮೆ ಬಿಬಿಎಂಪಿ ಆಸ್ತಿ ಎಂದು ಹೇಳಿಕೆ ನೀಡಿದ್ದಾರೆ. ಆಯುಕ್ತರ ಬೇಜವಾಬ್ದಾರಿಯಿಂದಾಗಿ ಈದ್ಗಾ ಮೈದಾನವು ವಿವಾದಿತ ಸ್ಥಳವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1952 ಮೈದಾನದ ವಿವಾದ: ಚಾಮರಾಜಪೇಟೆಯ ಆಟದ ಮೈದಾನವನ್ನು ಈದ್ಗಾ ಮೈದಾನ ಎಂದು ಕರೆಯಲಾಗುತ್ತಿದೆ. 1952 ರಿಂದ ಈ ಮೈದಾನದ ವಿಚಾರವಾಗಿ ವಿವಾದ ಪ್ರಾರಂಭವಾಗಿದೆ. ಈ ಮೈದಾನದಲ್ಲಿ ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಅವಕಾಶ ಕೊಡದಿದ್ದರೆ ಮೈದಾನ ನೆಲಸಮ ಮಾಡುತ್ತೇವೆ ಎಂದು ವಿಶ್ವ ಸನಾತನ ಪರಿಷತ್ ಎಚ್ಚರಿಕೆ ನೀಡಿತ್ತು.

ಇದನ್ನೂ ಓದಿ : ಚಾಮರಾಜಪೇಟೆ ಬಂದ್‌: ಪ್ರತಿಭಟನಾಕಾರರು-ಪೊಲೀಸರ ಮಧ್ಯೆ ವಾಗ್ವಾದ, ಸ್ಥಳದಲ್ಲಿ ಬಿಗುವಿನ ವಾತಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.