ಬೆಂಗಳೂರು: ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರನ್ನು ಕರೆತರಲು ರಾಜ್ಯ ಸರ್ಕಾರ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಕೇಂದ್ರ ಸರ್ಕಾರದ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಆರ್‌ಟಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಕ್ರೇನ್ನಿಂದ ವಿದ್ಯಾರ್ಥಿಗಳನ್ನು ಕರೆತರಿಸಲಾಗುತ್ತಿದೆ. ಇಂದು ವಿದ್ಯಾರ್ಥಿಗಳನ್ನು ಹೊತ್ತು 7ನೇ ಫ್ಲೈಟ್ ಬಂದಿದೆ. ಮುಂಬೈನಲ್ಲಿ ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ. ದೆಹಲಿಯಲ್ಲಿ ಕರೆತರುವ ವ್ಯವಸ್ಥೆ ಮಾಡಲಾಗಿದೆ. ಇಂದು ವಿದೇಶಾಂಗ ಕಾರ್ಯದರ್ಶಿ ಜೊತೆ ಸಹ ಮಾತನಾಡಿದ್ದೇನೆ. ಎಲ್ಲಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೋ ಅಲ್ಲಿ ಅವರ ರಕ್ಷಣೆ ಮಾಡಲು ಕೇಳಿಕೊಂಡಿದ್ದೇವೆ. ಅವರಿಗೆ ಊಟ ಉಪಚಾರದ ವ್ಯವಸ್ಥೆ ಮಾಡಲು ಸಹ ಹೇಳಿದ್ದೇವೆ. ಅವರ ಲೊಕೇಷನ್ ಎಲ್ಲ ಕಳುಹಿಸಿಕೊಟ್ಟಿದ್ದೇವೆ ಎಂದರು.
ಪಾದಯಾತ್ರೆಯಿಂದ ಉಪಯೋಗವಿಲ್ಲ: ಕಾಂಗ್ರೆಸ್ ಪಾದಯಾತ್ರೆಯಿಂದ ಬೆಂಗಳೂರಿಗೆ ಯಾವುದೇ ಉಪಯೋಗವಿಲ್ಲ. ಇವರ ರಾಜಕೀಯ ಇಚ್ಛಾ ಶಕ್ತಿಯಿಂದ ಬೆಂಗಳೂರಿಗರಿಗೆ ಕಷ್ಟ ಕೊಡುತ್ತಿದ್ದಾರೆ. ಒಂದಲ್ಲ ಮೂರು ದಿನ ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಬೆಂಗಳೂರಿನ ಟ್ರಾಫಿಕ್ ಎಲ್ಲರಿಗೂ ಗೊತ್ತಿದೆ. ಇದರಿಂದ ಇನ್ನಷ್ಟು ಟ್ರಾಫಿಕ್ ಜಾಮ್ ಆಗಲಿದೆ. ಫ್ರೀಡಂ ಪಾರ್ಕ್ಗೆ ಬಂದು ಪಾದಯಾತ್ರೆ ಮುಗಿಸಬಹುದಿತ್ತು. ಆದರೆ, ಇವರು ರಾಜಕೀಯಕ್ಕಾಗಿ ಬೆಂಗಳೂರಿನಲ್ಲಿ ಮೂರು ದಿನ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರ ವಿರುದ್ಧ ಡಿಕೆಶಿ ಟೀಕೆ ಕುರಿತು ಪ್ರತಿಕ್ರಿಯಿಸಿ, ಡಿಕೆ ಶಿವಕುಮಾರ್ ಅವರು ಹಲವಾರು ಖಾತೆ ಹೊಂದಿದ್ದ ಹಿರಿಯ ರಾಜಕಾರಣಿ. ಇನ್ನೊಬ್ಬರನ್ನು ಟೀಕೆ ಮಾಡೋದು ಬಹಳ ಸುಲಭ. ಅವರು ಎಲ್ಲವನ್ನು ಅರ್ಥ ಮಾಡಿಕೊಳ್ಳಬೇಕು, ಯಾವ ಸಂದರ್ಭದಲ್ಲಿ ಏನು ನಡೆಯುತ್ತಿದೆ ಅನ್ನೋದು ಗೊತ್ತಿರಬೇಕು, ಜೊತೆಗೆ ತಮ್ಮ ಪಾತ್ರ ಏನಿದೆ, ತಮ್ಮ ಕರ್ತವ್ಯ ಏನಿದೆ ಅಂತ ವಿಶ್ಲೇಷಣೆ ಮಾಡಿಕೊಳ್ಳಬೇಕು ಎಂದರು.
ಇದನ್ನೂ ಓದಿ: 'ನಮ್ಮನ್ನು ರಕ್ಷಿಸಿ'....ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಅಳಲು!
ನಮ್ಮ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ನೈತಿಕ ಹಕ್ಕಿಲ್ಲ. ಕಾನೂನು ತನ್ನ ಕೆಲಸ ಮಾಡಿದರೆ ಕಾಂಗ್ರೆಸ್ನವರು ವಿಪರೀತವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದ ಮೇಲೆ ಎಷ್ಟು ಕೇಸ್ ಹಾಕಿದೆ? ಎಷ್ಟು ಲಾಠಿ ಚಾರ್ಚ್ ಮಾಡಿಸಿದ್ದೀರಾ? ವಿರೋಧ ಪಕ್ಷವನ್ನು ಹತ್ತಿಕ್ಕಲು ಎಷ್ಟು ಪ್ರಯತ್ನ ಮಾಡಿದ್ದೀರಾ? ಜವಾಬ್ದಾರಿಯುತವಾದ ರಾಷ್ಟ್ರೀಯ ಪಕ್ಷ ಪ್ರತಿಭಟನೆ ಮಾಡೋಕೆ ಅವಕಾಶ ಇದೆ. ಅದೇ ರೀತಿ ಕಾನೂನಿನ ಅನ್ವಯ ಕೆಲಸ ಮಾಡುವುದಕ್ಕೆ ನಮಗೂ ಅವಕಾಶ ಇದೆ. ವಾಸ್ತವಾಂಶ ತಿಳಿಯದೇ ಮಾತನಾಡೋದು ನೋಡಿದರೆ ಕಾಂಗ್ರೆಸ್ ಪಕ್ಷ ಎಷ್ಟು ತಳಮಟ್ಟಕ್ಕೆ ಬಂದಿದೆ ಎಂದು ಗೊತ್ತಾಗುತ್ತಿದೆ ಎಂದು ವ್ಯಂಗ್ಯವಾಡಿದರು.
ಶಿವರಾತ್ರಿ ಹಬ್ಬದ ಶುಭಾಶಯ: ಇಂದು ಮಹಾ ಶಿವರಾತ್ರಿ ಹಬ್ಬದ ಸಂಭ್ರಮ. ನಾಡಿನ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಶಿವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ
ನಾಡಿನ ಸಮಸ್ತ ಮಹಾಜನತೆಗೆ ಮಹಾಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಸಂಕಷ್ಟಗಳೆಲ್ಲವನ್ನೂ ಪರಿಹರಿಸಿ ಆ ಮಹಾಮಹೀಶ್ವರ ಸಕಲ ಜೀವರಾಶಿಗಳಿಗೂ ಒಳಿತನ್ನು ಮಾಡಲೆಂದು ವಿಶೇಷವಾಗಿ ಪ್ರಾರ್ಥಿಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
-
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಆ ಮಹಾಶಿವನು ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ, ಎಲ್ಲರಿಗೂ ಆರೋಗ್ಯ, ಸಂತಸ, ಸಮೃದ್ಧಿಗಳನ್ನು ದಯಪಾಲಿಸಲಿ, ಇಡೀ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಅನುಗ್ರಹಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ. pic.twitter.com/Wh42t3Nuby
— B.S. Yediyurappa (@BSYBJP) March 1, 2022 " class="align-text-top noRightClick twitterSection" data="
">ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಆ ಮಹಾಶಿವನು ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ, ಎಲ್ಲರಿಗೂ ಆರೋಗ್ಯ, ಸಂತಸ, ಸಮೃದ್ಧಿಗಳನ್ನು ದಯಪಾಲಿಸಲಿ, ಇಡೀ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಅನುಗ್ರಹಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ. pic.twitter.com/Wh42t3Nuby
— B.S. Yediyurappa (@BSYBJP) March 1, 2022ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಆ ಮಹಾಶಿವನು ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ, ಎಲ್ಲರಿಗೂ ಆರೋಗ್ಯ, ಸಂತಸ, ಸಮೃದ್ಧಿಗಳನ್ನು ದಯಪಾಲಿಸಲಿ, ಇಡೀ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಅನುಗ್ರಹಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ. pic.twitter.com/Wh42t3Nuby
— B.S. Yediyurappa (@BSYBJP) March 1, 2022
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಆ ಮಹಾಶಿವನು ಎಲ್ಲರ ಸಂಕಷ್ಟಗಳನ್ನು ಪರಿಹರಿಸಿ, ಎಲ್ಲರಿಗೂ ಆರೋಗ್ಯ, ಸಂತಸ, ಸಮೃದ್ಧಿಗಳನ್ನು ದಯಪಾಲಿಸಲಿ, ಇಡೀ ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಅನುಗ್ರಹಿಸಲಿ ಎಂದು ವಿಶೇಷವಾಗಿ ಪ್ರಾರ್ಥಿಸೋಣ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
"ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ಅಮೃತೇಶಾಯ ಸರ್ವಾಯ ಮಹಾದೇವಾಯ ತೇ ನಮಃ". ನಾಡಿನ ಸಮಸ್ತ ಜನತೆಗೂ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.