ಬೆಂಗಳೂರು: ವಿವಿಧ ಅಪರಾಧ ಪ್ರಕರಣಗಳ ತನಿಖೆ ವೇಳೆ ಲೋಪ ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಗೊಳ್ಳುವುದಾಗಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಎಚ್ಚರಿಸಿದ್ದಾರೆ.
ಪ್ರಕರಣದ ತನಿಖೆ ವೇಳೆ ಅಧಿಕಾರಿಗಳು ಎಸಗುವ ಲೋಪದಿಂದ ನ್ಯಾಯಾಲಯದಲ್ಲಿ ಅವರಿಗೆ ಶಿಕ್ಷೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಸರಿಯಾದ ಸಾಕ್ಷಿ, ಆಧಾರಗಳು ಸಕಾಲಕ್ಕೆ ಹಾಜರುಪಡಿಸಿದ ಕಾರಣ ಕೋರ್ಟ್ನಲ್ಲಿ ಆರೋಪಿಗಳಿಗೆ ಲಾಭವಾಗುತ್ತಿದೆ. ಹೀಗಾಗಿ ಇನ್ಮುಂದೆ ತನಿಖೆ ವೇಳೆ ನಿರ್ಲಕ್ಷ್ಯ ಕಂಡು ಬಂದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಿನಿಸ್ಟರ್ ಅಂದ್ರೆ ದೇವಲೋಕದಿಂದ ಇಳಿದು ಬಂದವರಾ?: ಸ್ವಪಕ್ಷದವರ ವಿರುದ್ಧ ರೇಣುಕಾಚಾರ್ಯ ಕಿಡಿ
ತನಿಖೆ ನಡೆಸುವಾಗ ನಿರ್ಲಕ್ಷ್ಯ ವಹಿಸಿ, ಸೂಕ್ತ ಸಮಯಕ್ಕೆ ಬಿ ರಿಪೋರ್ಟ್, ಚಾರ್ಜ್ಶೀಟ್ ಸಲ್ಲಿಕೆ ಮಾಡದಿರುವುದು ಸೇರಿದಂತೆ ಕರ್ತವ್ಯ ಲೋಪದಿಂದ ನ್ಯಾಯಾಲಯದಲ್ಲಿ ಕೇಸ್ಗಳು ಖುಲಾಸೆಯಾಗುತ್ತಿವೆ. ತನಿಖಾಧಿಕಾರಿಗಳ ಲೋಪದ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಥಳದಿಂದ ವರ್ಗಾವಣೆ ಆಗಿದ್ದರೂ ಕೂಡ ಮೇಲಾಧಿಕಾರಿ ವರದಿ ಆಧರಿಸಿ ಕ್ರಮ ಕೈಗೊಳ್ಳಿ ಎಂದು ಪ್ರವೀಣ್ ಸೂದ್ ಆದೇಶಿಸಿದ್ದಾರೆ.