ETV Bharat / city

ಜೈಲಿನಿಂದ ಕರೆ ಪ್ರಕರಣ:  ಶಾಸಕ ಬೆಲ್ಲದ್ ಭೇಟಿ ಮಾಡಿದ ಎಸಿಪಿ ಯತಿರಾಜ್

author img

By

Published : Jun 19, 2021, 3:17 PM IST

ಶಾಸಕ ಅರವಿಂದ್ ಬೆಲ್ಲದ್ ಬಳಿ ತೆರಳಿ ಮಾಹಿತಿ ಪಡೆದ ಪೊಲೀಸರು, ಕರೆ ಬಂದಿದ್ದ ನಂಬರ್ ಸೇರಿ ಅನೇಕ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಅವಶ್ಯಕತೆ ಇದ್ದರೆ ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ. ಅವಶ್ಯಕತೆ ಇದ್ದಾಗ ಬಂದು ಮಾಹಿತಿ ನೀಡುತ್ತೇನೆ ಎಂದು ಬೆಲ್ಲದ್ ಕೂಡ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

phone-tapping-case
ಜೈಲಿನಿಂದ ಕರೆ ಪ್ರಕರಣ

ಬೆಂಗಳೂರು: ಜೈಲಿನಿಂದ ಕರೆ ಪ್ರಕರಣದ ಸಂಬಂಧ ಎಸಿಪಿ ಯತಿರಾಜ್, ಶಾಸಕ ಅರವಿಂದ್ ಬೆಲ್ಲದ್ ಅವರನ್ನು ಭೇಟಿ ಮಾಡಿದ್ದು, ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ತನಿಖೆ ಚುರುಕು ಪಡೆದಿದೆ. ಟೆಲಿಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಅವರಿಂದ ಮಧ್ಯಾಹ್ನ ಮಾಹಿತಿ ಪಡೆದುಕೊಳ್ಳಲಾಗಿದೆಯಂತೆ. ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಯತಿರಾಜ್ ರಿಂದ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಓದಿ: ಅರವಿಂದ್ ಬೆಲ್ಲದ್​​ಗೆ ಜೈಲಿನಿಂದ ಕರೆ ಆರೋಪ: ತನಿಖೆ‌ ಚುರುಕು!

ಶಾಸಕ ಅರವಿಂದ್ ಬೆಲ್ಲದ್ ಬಳಿ ತೆರಳಿ ಮಾಹಿತಿ ಪಡೆದ ಪೊಲೀಸರು, ಕರೆ ಬಂದಿದ್ದ ನಂಬರ್ ಸೇರಿ ಅನೇಕ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಅವಶ್ಯಕತೆ ಇದ್ದರೆ ಸಹಕರಿಸುವಂತೆ ಪೊಲೀಸರು ತಿಳಿಸಿದ್ದಾರೆ. ಅವಶ್ಯಕತೆ ಇದ್ದಾಗ ಬಂದು ಮಾಹಿತಿ ನೀಡುತ್ತೇನೆ ಎಂದು ಬೆಲ್ಲದ್ ಕೂಡ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.

ತನಿಖೆ ಬಗ್ಗೆ ಶುಕ್ರವಾರ ಮಾಹಿತಿ ನೀಡಿದ್ದ ಕಮಲ್ ಪಂತ್:

ಶಾಸಕ ಅರವಿಂದ್ ಬೆಲ್ಲದ್​​ಗೆ ಜೈಲಿನಿಂದ ಕರೆ ಬಂದಿರುವ ಆರೋಪ ಸಂಬಂಧ, ಕಬ್ಬನ್ ಪಾರ್ಕ್ ಎಸಿಪಿಗೆ ತನಿಖೆ ನಡೆಸುವಂತೆ ಸೂಚನೆ ನೀಡಿರುವುದಾಗಿ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ಶುಕ್ರವಾರ ಸ್ಪಷ್ಟಪಡಿಸಿದ್ದರು.

ಪ್ರಕರಣ ಸಂಬಂಧ ತನಿಖೆಯನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಎಸಿಪಿ ಯತಿರಾಜ್​​ಗೆ ವಹಿಸಲಾಗಿದ್ದು, ಈಗಾಗಲೇ ತನಿಖೆ ನಡೆಸುತ್ತಿದ್ದಾರೆ‌ ಎಂದು ಮಾಹಿತಿ ನೀಡಿದ್ದರು. ಅರವಿಂದ್​​ ಬೆಲ್ಲದ್ ನೀಡಿರುವ ದೂರು ಅಸ್ಪಷ್ಟವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಪೊಲೀಸರು ಸಂಪರ್ಕಿಸಿದರೂ ಕೂಡ ಬೆಲ್ಲದ್ ಫೋನ್​​ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ತನಿಖೆಗೆ ಸಹಕಾರ ನೀಡುತ್ತಿಲ್ಲವೇ ಎನ್ನುವ ಅನುಮಾನ ಸಹ ಮೂಡಿಸಿತ್ತು.

ಪ್ರಕರಣದ ಹಿನ್ನೆಲೆ:

ಹುಬ್ಬಳ್ಳಿ - ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಕೆಲ ದಿನಗಳ ಹಿಂದೆ ಜೈಲಿನಿಂದ ಆರೋಪಿ ಯುವರಾಜ್ ಸ್ವಾಮಿ ಎಂಬಾತ ಕರೆ ಮಾಡಿದ್ದಾನೆ. ಕರೆ ಹಿಂದೆ ನನ್ನನ್ನು ಸಿಲುಕಿಸಲು ಷಡ್ಯಂತ್ರ ಇದೆ. ನನಗೆ ಬರುವ ಕರೆಗಳನ್ನು ಫೋನ್ ಟ್ಯಾಪಿಂಗ್ ಮಾಡಲಾಗುತ್ತಿದೆ‌ ಎಂದು ಅನುಮಾನ ವ್ಯಕ್ತಪಡಿಸಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದು, ಗೃಹ ಸಚಿವರಿಗೆ ದೂರು ನೀಡಿದ್ದರು.

ಜೈಲಿನಿಂದ ಕರೆ ಮಾಡಿರುವ ಬಗ್ಗೆ ಬೆಲ್ಲದ್ ದೂರು ಗಂಭೀರವಾಗಿ ಪರಿಗಣಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಡಿಜಿಪಿ‌ ಪ್ರವೀಣ್ ಸೂದ್​ಗೆ ತನಿಖೆ ನಡೆಯುವಂತೆ ಆದೇಶಿಸಿದ್ದರು. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.