ETV Bharat / city

ಕೆಎಎಸ್ ಅಧಿಕಾರಿ ಮನೆ, ಟ್ರಸ್ಟ್, ಶಾಲೆ ಮೇಲೆ ದಾಳಿ ನಡೆಸಿದ ಎಸಿಬಿ! - ಬೆಂಗಳೂರಿನಲ್ಲಿ ಎಸಿಬಿ ದಾಳಿ

ಕೆಎಎಸ್ ಅಧಿಕಾರಿ ರಂಗನಾಥ್​ಗೆ ಸಂಬಂಧಿಸಿದ ಮನೆ, ಟ್ರಸ್ಟ್, ಶಾಲೆ ಸೇರಿದಂತೆ 5 ಕಡೆ ದಾಳಿ ನಡೆಸಿರುವ ಎಸಿಬಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

ACB raid on KAS officer in Doddaballapura, ACB raid in Bengaluru, ACB raid news, ದೊಡ್ಡಬಳ್ಳಾಪುರದಲ್ಲಿ ಕೆಎಎಸ್​ ಅಧಿಕಾರಿ ಮೇಲೆ ಎಸಿಬಿ ದಾಳಿ, ಬೆಂಗಳೂರಿನಲ್ಲಿ ಎಸಿಬಿ ದಾಳಿ, ಎಸಿಬಿ ದಾಳಿ ಸುದ್ದಿ,
ಕೆಎಎಸ್ ಅಧಿಕಾರಿ ಕೆ.ರಂಗನಾಥ್
author img

By

Published : Mar 25, 2022, 9:38 AM IST

ದೊಡ್ಡಬಳ್ಳಾಪುರ : ಕೆಎಎಸ್ ಅಧಿಕಾರಿ ಕೆ.ರಂಗನಾಥ್​ಗೆ ಸಂಬಂಧಿಸಿದ ಮನೆ ಮತ್ತು ಟ್ರಸ್ಟ್ ಸೇರಿದಂತೆ 5 ಕಡೆ ಏಕ ಕಾಲದಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ರಂಗನಾಥ್ ಹಿರಿಯ ಶ್ರೇಣಿಯ ಕೆಎಎಸ್ ಅಧಿಕಾರಿಯಾಗಿದ್ದು, ಸದ್ಯ ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ನಿಯಮಿತ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬೆಂಗಳೂರು ಉತ್ತರ ತಾಲೂಕಿನ ಉಪವಿಭಾಗಧಿಕಾರಿಯಾಗಿದ್ದರು.

ಓದಿ: Watch... ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಖತ್​ ಸ್ಟೆಪ್ ಹಾಕಿದ ಸಿದ್ದರಾಮಯ್ಯ

ಆಗ ಸರ್ಕಾರದ ಸುರ್ಪದಿಯಲ್ಲಿದ್ದ ಜಮೀನುಗಳ ಮೂಲ ಮಂಜೂರಾತಿ ದಾಖಲೆಗಳ ಪರಿಶೀಲನೆ ಮಾಡದೇ ಮತ್ತು ಸಂಬಂಧಪಟ್ಟ ತಹಶೀಲ್ದಾರ್​ ಅವರಿಂದ ಯಾವುದೇ ವರದಿ ಪಡೆಯದೇ ಕಾನೂನು ಬಾಹಿರವಾಗಿ ಖಾಸಗಿ ವ್ಯಕ್ತಿಗಳಿಗೆ ಜಮೀನು ಪರಭಾರೆ ಮಾಡಿಕೊಟ್ಟಿದ್ದರು. ಇದಕ್ಕೆ ಸಂಬಂಧಪಟ್ಪಂತೆ ದೂರು ಬಂದ ಹಿನ್ನಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಓದಿ: ‘ನೋ ಆಯ್ಲ್​, ಓನ್ಲಿ ಬಾಯ್ಲ್​’... ಪದ್ಮಶ್ರೀ ಪುರಸ್ಕೃತ ಯೋಗ ಗುರು​ ಜೀವನ ಶೈಲಿ ಹೇಗಿದೆ ಗೊತ್ತಾ...?

ಇಂದು ಮುಂಜಾನೆ 6 ಗಂಟೆ ಸಮಯದಲ್ಲಿ ರಂಗನಾಥ್​ಗೆ ಸಂಬಂಧಿಸಿದ ಯಲಹಂಕದ ನ್ಯಾಯಾಂಗ ಬಡಾವಣೆಯಲ್ಲಿರುವ ಮನೆ, ದೊಡ್ಡಬಳ್ಳಾಪುರದ ಚೈತನ್ಯನಗರದ ಮನೆ, ದೊಡ್ಡಬಳ್ಳಾಪುರ ನಗರದ ಕನಕಶ್ರೀ ಟ್ರಸ್ಟ್ ಕಚೇರಿ ಮತ್ತು ಪಬ್ಲಿಕ್ ಶಾಲೆ, ನಾಗರಬಾವಿಯಲ್ಲಿರುವ ಸಂಬಂಧಿಕರ ಮನೆ, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಬೆಂಗಳೂರು ಉತ್ತರ ತಾಲೂಕಿನ ಉಪವಿಭಾಗಧಿಕಾರಿ ಕಚೇರಿ ಸೇರಿದಂತೆ ಒಟ್ಟು 5 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 42 ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ 5 ತಂಡ ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.