ಬೆಂಗಳೂರು: ಸರ್ಕಾರಿ ಕೆಲಸದಲ್ಲಿದ್ದುಕೊಂಡು ಲಂಚ ಪಡೆದು ಅಕ್ರಮ ಆಸ್ತಿ ಗಳಿಸಿದ ಆರೋಪದಡಿ ಇಬ್ಬರು ಅಧಿಕಾರಿಗಳಿಗೆ ಸೇರಿದ 6 ಸ್ಥಳಗಳಲ್ಲಿ ಎಸಿಬಿ ದಾಳಿ ನಡೆಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚಂರಡಿ ಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಹನುಮಪ್ಪ ಅಂದಪ್ಪ ಪ್ರಭಣ್ಣ ಅವರು, ಅಕ್ರಮ ಆಸ್ತಿಗಳಿಸಿದ್ದಾರೆಂಬ ಆರೋಪದ ಮೇರೆಗೆ ದಾಳಿ ನಡೆಸಲಾಯಿತು. ಇವರ ಗದಗದ ರಾಜೀವ ಗಾಂಧಿನಗರದ ವಾಸದ ಮನೆ, ಬಾಗಲಕೋಟೆ ಬಳಿಯಿರುವ ರೋಟರಿ ಕ್ಲಬ್ ಕ್ರಾಸ್ ಬಳಿಯಿರುವ ಮನೆ, ಕರ್ತವ್ಯ ನಿರ್ವಹಣೆ ಮಾಡುವ ಕಚೇರಿಯಲ್ಲಿ ಶೋಧ ಮುಂದುವರೆದಿದೆ.
ಮತ್ತೋರ್ವ ದಾಸೇಗೌಡ ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ ಮಂಗಳೂರು, ಅವರು ಮಂಡ್ಯದ ಕಾವೇರಿನಗರದಲ್ಲಿನ ಮನೆ ಸ್ನೇಹಿತರ ಮನೆ, ಮಂಡ್ಯದ ಅಶೋಕ ನಗರದಲ್ಲಿರುವ ಆಡಿಟರ್ ಕಚೇರಿ ಹಾಗೂ ಚಾಮುಂಡೇಶ್ವರಿ ನಗರದ ವಾಸದ ಮನೆಗೆ ದಾಳಿ ಮಾಡಿ ಶೋಧ ಮುಂದುವರೆಸಿದ್ದಾರೆ.
ಈ ಇಬ್ಬರು ಅಧಿಕಾರಿಗಳು ನಿಯಮ ಮೀರಿ ಅಕ್ರಮ ಆಸ್ತಿ ಗಳಿಕೆ ಮತ್ತು ಲಂಚ ಪಡೆದ ಆರೋಪದಡಿ ಎಸಿಬಿ ದಾಳಿ ನಡೆಸಿದೆ.