ETV Bharat / city

ACB raid at BDA office: ಬಿಡಿಎ ಅಧಿಕಾರಿಗಳ ಪಾಲಿಗೆ ನುಂಗಲಾರದ ತುತ್ತಾದ ಎಸಿಬಿ ದಾಳಿ: ಮೂಲ ದಾಖಲಾತಿಗಾಗಿ ಇಂದೂ ಮುಂದುವರೆದ ದಾಳಿ

ಶುಕ್ರವಾರ ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ 134 ಕೋಟಿ ರೂ. ಮೌಲ್ಯದ ಭೂ ಅಕ್ರಮವನ್ನು ಪತ್ತೆ ಹಚ್ಚಿದ್ದರು. ಭಾನುವಾರ ಹಾಗೂ ಸೋಮವಾರ ಸರ್ಕಾರಿ ರಜೆ‌ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ದಾಳಿಯನ್ನು ಇಂದು ಮುಂದುವರೆಸಿದ್ದಾರೆ.

ACB raid at BDA office
ACB raid at BDA office
author img

By

Published : Nov 23, 2021, 9:04 AM IST

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ (Multi-crore scam at Bengaluru Development Authority) ಬಹುಕೋಟಿ ಹಗರಣ ಬಯಲಿಗೆಳೆದಿರುವ ಭ್ರಷ್ಟಾಚಾರ ನಿಗ್ರಹ ದಳದ (Anti-Corruption Bureau -ACB) ಅಧಿಕಾರಿಗಳು ಇಂದು ಸಹ ದಾಳಿ ಮುಂದುವರೆಸಿ ಮೂಲ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಕಳೆದ ಶುಕ್ರವಾರ ಬಿಡಿಎ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ (ACB raid at BDA office) 134 ಕೋಟಿ ರೂ. ಮೌಲ್ಯದ ಭೂ ಅಕ್ರಮ ಪತ್ತೆ ಹಚ್ಚಿದ್ದರು. ಅಕ್ರಮಕ್ಕೆ ಸಂಬಂಧಿಸಿದ ದಾಖಲಾತಿ ಜಪ್ತಿ ಮಾಡಿಕೊಂಡಿದ್ದರು.‌ ಭಾನುವಾರ ಹಾಗೂ ಸೋಮವಾರ ಸರ್ಕಾರಿ ರಜೆ‌ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ದಾಳಿಯನ್ನು ಇಂದು ಮುಂದುವರೆಸಿದ್ದಾರೆ.

ಬಿಡಿಎ‌ ಕಚೇರಿಯಲ್ಲಿ ಭೂ ಅಕ್ರಮಕ್ಕೆ ಸಂಬಂಧಿಸಿ ದಾಖಲಾತಿಗಳನ್ನು ಈಗಾಗಲೇ ಜಪ್ತಿ ಮಾಡಿಕೊಂಡಿರುವ ಎಸಿಬಿ, ಮೂಲ ದಾಖಲಾತಿ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಒಂದು ವೇಳೆ, ಅಗತ್ಯ ಮೂಲ ದಾಖಲಾತಿ ನೀಡದಿದ್ದಲ್ಲಿ ಕಂದಾಯ ಇಲಾಖೆಯಿಂದ ಪಡೆಯಲು ಮುಂದಾಗಿದೆ.

ಇದನ್ನೂ ಓದಿ: ACB ದಾಳಿ ಬಳಿಕ BDA ವಿರುದ್ಧ ಸಾಲು ಸಾಲು ದೂರುಗಳು.. ಬಯಲಾಗುತ್ತಾ ಬಿಡಿಎ ಬ್ರಹ್ಮಾಂಡ ಭ್ರಷ್ಟಾಚಾರ!?

ಕಂದಾಯ ಇಲಾಖೆಯ ಮೊರೆ ಹೋದ ಎಸಿಬಿ

ಹತ್ತಾರು ವರ್ಷಗಳಿಂದ ಅಕ್ರಮವೆಸಗಿ ಸಂಬಂಧಿಸಿದ ದಾಖಲಾತಿಗಳಿಲ್ಲ ಎಂದು‌ ನೆಪವೊಡ್ಡಿ ನುಣುಚಿಕೊಳ್ಳುತ್ತಿದ್ದ ಅಧಿಕಾರಿ ಹಾಗೂ‌ ಸಿಬ್ಬಂದಿಗೆ ಎಸಿಬಿ ದಾಳಿಯು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ವಿವಾದಿತ ಅರ್ಕಾವತಿ, ಕೆಂಪೇಗೌಡ ಹಾಗೂ ಶಿವರಾಮ್ ಕಾರಂತ್ ಬಡಾವಣೆಗಳಲ್ಲಿ ಬಿಡಿಎ ಹಂಚಿಕೆ‌ ಮಾಡಿರುವ ನಿವೇಶನಗಳು ಹಾಗೂ ಬಡಾವಣೆಗಾಗಿ ಭೂ ಸ್ವಾಧೀನಕ್ಕಾಗಿ ಪಡೆದಿರುವ ಜಾಗಗಳ ದಾಖಲಾತಿಗಳನ್ನು ಈಗಾಗಲೇ ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು ಮೂಲ ದಾಖಲಾತಿಗಳ‌ ಶೋಧ ನಡೆಸುತ್ತಿದ್ದಾರೆ. ಅಸಲಿ‌ ದಾಖಲಾತಿಗಾಗಿ ಕಂದಾಯ ಇಲಾಖೆಯಿಂದ‌ ಪಡೆಯಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಎ ಸೈಟಿನಲ್ಲಿ ಅಕ್ರಮ

ಬಿಡಿಎ ನಾಗರಿಕ ನಿವೇಶನ (ಸಿಎ)ಗಳನ್ನು ರಿಯಲ್‌ ಎಸ್ಟೇಟ್ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ಬಿಡಿಎ ಅಧಿಕಾರಿಗಳು ದಾಖಲಾತಿಗಳಿಗೆ ತಿದ್ದುಪಡಿ ಮಾಡಿರುವುದು ತಿಳಿದು ಬಂದಿದೆ. ಸಾರ್ವಜನಿಕ ಬಳಕೆಗೆ ಮೀಸಲಿರಿಸಬೇಕಿದ್ದ ಸಿಎ ಸೈಟುಗಳ ಹಂಚಿಕೆಯಲ್ಲಿ‌ ದುರ್ಬಳಕೆ ನಡೆದಿರುವುದು ಗೊತ್ತಾಗಿದೆ. ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿರುವುದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.