ಬೆಂಗಳೂರು: ನಿನ್ನೆ ಟೌನ್‌ಹಾಲ್ ಮುಂದೆ 'ಫ್ರೀ ಕಾಶ್ಮೀರ..' ಎಂದು ಪೋಸ್ಟರ್ ಪ್ರದರ್ಶಿಸಿದ್ದ ಯುವತಿಯನ್ನು ಎಸ್.ಜೆ ಪಾರ್ಕ್ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರ್ದ್ರಾ ಅಲಿಯಾಸ್ ಅನ್ನಪೂರ್ಣೇಶ್ವರಿ ಆದ ನಾನು ಸಿಎಎ, ಎನ್‌ಆರ್‌ಸಿ ಹಾಗೂ ಸಂವಿಧಾನ ವಿಧಿ 370ರ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಿಂದ ಪ್ರಚೋದನೆಗೆ ಒಳಗಾಗಿದ್ದೆ. ಈ ಕುರಿತಾಗಿ ನಡೆಯುವ ಎಲ್ಲಾ ಪ್ರತಿಭಟನೆಗಳಲ್ಲೂ ನಾನು ಭಾಗಿಯಾಗ್ತಿದ್ದೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಲ್ಲಿ ಕಾರ್ಯಕ್ರಮಗಳು ಇರ್ತಿದ್ವೋ ಅಂತಹ ಕಾರ್ಯಕ್ರಮಗಳಿಗೆ ನಾನೇ ಮುಂದಾಗಿ ಹೋಗ್ತಿದ್ದೆ. ಅಮೂಲ್ಯ ಭಾಗಿಯಾಗಿದ್ದ ಕಾರ್ಯಕ್ರಮಕ್ಕೂ ನಾನು ತೆರಳಿದ್ದೆ. ಈ ವೇಳೆ ಅಮೂಲ್ಯ 'ಪಾಕಿಸ್ತಾನ್ ಜಿಂದಾಬಾದ್' ಎಂಬ ಹೇಳಿಕೆಗೆ ಪೊಲೀಸರು ಆಕೆಯನ್ನು ಬಂಧಿಸಿ ಜೈಲಿಗಟ್ಟಿದ್ದರು.
ಅಮೂಲ್ಯ ವಿರುದ್ಧವಾಗಿ ಹಿಂದೂಪರ ಸಂಘಟನೆಗಳ ಸದಸ್ಯರು ಟೌನ್‌ಹಾಲ್‌ನ ಬಳಿ ಸೇರಿದ್ದರು. ಅದಕ್ಕಾಗಿ ಮುಂಚಿತವಾಗಿಯೇ ನಾನು ರಟ್ಟಿನಿಂದ ತಯಾರಿಸಿದ ಮುಸಲ್ಮಾನ್ ಹಾಗೂ ದಲಿತರನ್ನು ಮುಕ್ತಗೊಳಿಸಿ, ಫ್ರೀ ಕಾಶ್ಮೀರ್ ಎಂಬ ಇಂಗ್ಲೀಷ್ ಹಾಗೂ ಕನ್ನಡದ ಬರಹಗಳಿರುವ ಸಂದೇಶಗಳನ್ನು ಬರೆದಿಟ್ಟುಕೊಂಡಿದ್ದೆ. ಆ ಬರಹಗಳನ್ನು ಪ್ರದರ್ಶಿಸಿ ಪ್ರತಿಭಟನೆಗೆ ಹಿನ್ನೆಡೆಯಾಗುವಂತೆ ಮಾಡುವ ಉದ್ದೇಶದಿಂದ ಈ ರೀತಿ ಮಾಡಿದ್ದೇನೆ ಎಂದು ಹೇಳಿಕೆ ನೀಡಿದ್ದಾಳೆ.