ETV Bharat / city

ಬೆಂಗಳೂರು: ಯುವತಿಯ ವಿಚಾರಕ್ಕೆ ಸಹಪಾಠಿಗಳ ಮಧ್ಯೆ ಜಗಳ..ಡ್ರ್ಯಾಗರ್​​ನಿಂದ ಯುವಕನ ಬರ್ಬರ ಹತ್ಯೆ - ಬೆಂಗಳೂರು ಕ್ರೈಂ ಸುದ್ದಿ

ಯುವತಿ ವಿಚಾರಕ್ಕೆ ಇಬ್ಬರು ಯುವಕರ ಮಧ್ಯೆ ಜಗಳ ನಡೆದು, ಓರ್ವನ ಕೊಲೆಯಾಗಿದೆ. ಹೆಚ್​ಎಎಲ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

murder
murder
author img

By

Published : Oct 9, 2021, 3:54 AM IST

Updated : Oct 9, 2021, 12:31 PM IST

ಬೆಂಗಳೂರು: ಯುವತಿಯ ವಿಚಾರಕ್ಕೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹೆಚ್‌ಎಎಲ್‌ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಹೆಚ್‌ಎಎಲ್‌ ಬಳಿಯ ನಿವಾಸಿ ಲಿಖಿತ್ (21) ಕೊಲೆಯಾದ ಯುವಕ. ನಯೀಮ್ (23) ಕೊಲೆಗೈದ ಆರೋಪಿ.

ನಯೀಮ್​ ಮತ್ತು ಲಿಖಿತ್ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಯುವತಿ ವಿಚಾರಕ್ಕೆ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು. ಶುಕ್ರವಾರ ಸಂಜೆ 4 ಗಂಟೆಗೆ ಈ ವಿಚಾರದ ಕುರಿತು ಮಾತನಾಡಲು ನಯೀಮ್​ನನ್ನು ಹೆಚ್‌ಎಎಲ್​​ನ ಲಾಲ್ ಬಹದ್ದೂರ್ ಶಾಸ್ತ್ರಿ ನಗರಕ್ಕೆ ಬರಲು ಲಿಖಿತ್ ಹೇಳಿದ್ದ. ಈ ವೇಳೆ ಯುವತಿ ವಿಚಾರವಾಗಿ ಇಬ್ಬರೂ ಮಾತುಕತೆ ಪ್ರಾರಂಭಿಸಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳ ಶುರುವಾಗಿತ್ತು.

ಲಿಖಿತ್ ಡ್ರ್ಯಾಗರ್‌ನಿಂದ ನಯೀಮ್​ ಮೇಲೆ ಹಲ್ಲೆಗೆ ಮುಂದಾಗಿದ್ದ. ಆಗ ನಯೀಮ್ ಡ್ರ್ಯಾಗರ್‌ ಕಸಿದುಕೊಂಡು ಲಿಖಿತ್‌ಗೆ ಇರಿದಿದ್ದಾನೆ. ಗಂಭೀರ ಗಾಯಗೊಂಡಿದ್ದ ಲಿಖಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಮರಣೋತ್ತರ ಪರೀಕ್ಷೆಗೆ ರವಾನೆ:
ಸ್ಥಳಕ್ಕೆ ಧಾವಿಸಿದ ಹೆಚ್‌ಎಎಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಲಿಖಿತ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ತಲೆಮರೆಸಿಕೊಂಡಿರುವ ನಯೀಮ್​ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Last Updated : Oct 9, 2021, 12:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.