ETV Bharat / city

ಬೆಂಗಳೂರಲ್ಲಿ ಹಾಡಹಗಲೇ ಚಾಕು ತೋರಿಸಿ ದರೋಡೆಗೆ ಯತ್ನ: ಆರೋಪಿಗೆ ಥಳಿತ - ವಿಡಿಯೋ ವೈರಲ್

ಬೆಂಗಳೂರು ನಗರದ ರಿಚ್​ಮಂಡ್​ ಟೌನ್​ನಲ್ಲಿ ಹಾಡಹಗಲೇ ಆರೋಪಿಯೊಬ್ಬ ಚಾಕು ತೋರಿಸಿ ಕ್ಯಾಬ್​ ಡ್ರೈವರ್​​ ಓರ್ವನನ್ನು ದರೋಡೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.

author img

By

Published : Sep 1, 2021, 7:32 PM IST

a robber try to rob cab driver in richmond town video viral
ಹಾಡಹಗಲೇ ಚಾಕು ತೋರಿಸಿ ದರೋಡೆಗೆ ಯತ್ನ

ಬೆಂಗಳೂರು: ನಗರದ ರಿಚ್​ಮಂಡ್ ಟೌನ್​ನಲ್ಲಿ ಇಂದು ಹಾಡಹಗಲೇ ದರೋಡೆ ಯತ್ನ ನಡೆದಿರುವುದು ಬೆಳಕಿಗೆ ಬಂದಿದೆ. ಮಧ್ಯಾಹ್ನ ಯುವಕನೊಬ್ಬ ಚಾಕು ಹಿಡಿದು ಕ್ಯಾಬ್​ ಡ್ರೈವರ್​​ನನ್ನು ದರೋಡೆ ಮಾಡಲು ಯತ್ನಿಸಿದ್ದಾನೆ.

ಹಾಡಹಗಲೇ ಚಾಕು ತೋರಿಸಿ ದರೋಡೆಗೆ ಯತ್ನ

ರಸ್ತೆ ಬದಿ ನಿಲ್ಲಿಸಿದ್ದ ಕ್ಯಾಬ್​ಗೆ ನುಗ್ಗಿ ಚಾಕು ತೋರಿಸಿ ಡ್ರೈವರ್ ಅನ್ನು ದರೋಡೆ ಮಾಡಲು ಮುಂದಾಗಿದ್ದಾನೆ. ತಕ್ಷಣವೇ ಕ್ಯಾಬ್ ಡ್ರೈವರ್ ಕಿರುಚಾಡಿದ್ದಾನೆ. ಆಗ ಆತನಿಗೆ ಚಾಕು ಇರಿಯಲು ದರೋಡೆಕೋರ ಮುಂದಾಗಿದ್ದಾನೆ.

ತ​​ಕ್ಷಣವೇ ಕಳ್ಳನನ್ನು ಹಿಡಿಯಲು‌ ಸಾರ್ವಜನಿಕರು ಹಿಡಿದು ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆದರೆ ಆತ ಸ್ಥಳೀಯರಿಗೂ ಚಾಕು ತೋರಿಸಿ ಬೆದರಿಸಿ ಎಸ್ಕೇಪ್ ಆಗಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಘಟನೆ ತಿಳಿದು ನಗರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಆರೋಪಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ:ನೆಹರು ಮತ್ತು ಗಾಂಧಿ ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ; ನಟಿ ಪಾಯಲ್ ವಿರುದ್ಧ ದೂರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.