ಬೆಂಗಳೂರು: ಭಾನುವಾರದ ಲಾಕ್ಡೌನ್ ವೇಳೆ ಕರ್ತವ್ಯ ನಿರತ ಪೊಲೀಸರಿಗೆ ಮಜ್ಜಿಗೆ ಹಾಗೂ ಕುಡಿಯುವ ನೀರು ಪೂರೈಸುವ ಮೂಲಕ ಇಲ್ಲೊಬ್ಬರು ಮಾನವೀಯತೆ ಮೆರೆದಿದ್ದಾರೆ.
ಮೂರು ಹಂತದ ಲಾಕ್ಡೌನ್ ವೇಳೆಯೂ ಬಿಸಿಲು ಲೆಕ್ಕಿಸದೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ನಿತ್ಯ ಹೆಲನ್ ಎಂಬುವರು ಕುಡಿಯು ನೀರು ಹಾಗೂ ಮಜ್ಜಿಗೆ ವಿತರಿಸಿದ್ದರು. ಸಿಗ್ನಲ್ಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿಗೆ ಖುದ್ದಾಗಿ ತೆರಳಿ ಮಜ್ಜಿಗೆ ವಿತರಣೆ ಮಾಡಿಕೊಂಡು ಬರುತ್ತಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಹೆಲನ್, ಲಾಕ್ಡೌನ್ ಅವಧಿಯಲ್ಲಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರಿಗೆ ನೆರವಾಗಿರುವುದು ಶ್ಲಾಘನೀಯ.