ETV Bharat / city

ಸ್ಪ್ರೈಟ್ ಕುಡಿಯಲು ಅಂಗಡಿಗೆ ಹೋದವ ಕೊಲೆಯಲ್ಲಿ ಅಂತ್ಯ.. ಕುಡಿದ‌‌ ಮತ್ತಿನಲ್ಲಿ‌ದ್ದ ದುಷ್ಕರ್ಮಿಗಳಿಂದ ಹತ್ಯೆ.. - ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಕೊಲೆ

ಕುಡಿದ ಮತ್ತಿನಲ್ಲಿದ್ದ ಐದಾರು ದುಷ್ಕರ್ಮಿಗಳು (Drunken five people) ತಂಪು ಪಾನೀಯ(ಸ್ಪ್ರೈಟ್​) ಕುಡಿಯಲು ಬಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಕೊಲೆ(A man Killed) ಮಾಡಿದ ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ(Baippanahalli police station limit)ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ‌..

a man killed
ಸ್ಪ್ರೈಟ್ ಕುಡಿಯಲು ಅಂಗಡಿಗೆ ಹೋದವ ಕೊಲೆ
author img

By

Published : Nov 15, 2021, 2:51 PM IST

ಬೆಂಗಳೂರು : ಕುಡಿದ ಮತ್ತಿನಲ್ಲಿದ್ದ ಐದಾರು ದುಷ್ಕರ್ಮಿಗಳು (Drunken five people)ತಂಪು ಪಾನೀಯ(ಸ್ಪ್ರೈಟ್​) ಕುಡಿಯಲು ಬಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಕೊಲೆ (A man Killed) ಮಾಡಿದ ಘಟನೆ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Baippanahalli police station limit)ಭಾನುವಾರ ರಾತ್ರಿ ನಡೆದಿದೆ‌. ಮಧ್ಯಪ್ರದೇಶ ಮೂಲದ ಭೂಪತ್ ಸಿಂಗ್ (25) ಕೊಲೆಯಾದ ದುರ್ದೈವಿ.

a man killed
ಮಧ್ಯಪ್ರದೇಶ ಮೂಲದ ಭೂಪತ್ ಸಿಂಗ್

3 ತಿಂಗಳ ಹಿಂದಷ್ಟೇ ಭೂಪತ್​ ಸಿಂಗ್​ ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ. ಜೀವನಕ್ಕಾಗಿ ಗ್ರೀಲಿಂಗ್ ಕೆಲಸ‌ ಮಾಡಿಕೊಂಡಿದ್ದ ಯುವಕ ಹೊಸ ಬೈಯ್ಯಪ್ಪನಹಳ್ಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ.

ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಮನೆಯ ಪಕ್ಕದಲ್ಲಿದ್ದ ಅಂಗಡಿಗೆ ತಂಪು ಪಾನೀಯ(ಸ್ಪ್ರೈಟ್​) ಕುಡಿಯಲು ಹೋಗಿದ್ದಾನೆ. ಈ ವೇಳೆ ಅದೇ ಅಂಗಡಿಗೆ ಕುಡಿದ ಮತ್ತಿನಲ್ಲಿದ್ದ ಐವರು ದುಷ್ಕಮಿರ್ಗಳು ಆಗಮಿಸಿದ್ದಾರೆ. ಯಾವುದೋ ಕಾರಣಕ್ಕಾಗಿ ಗುಂಪು ಮತ್ತು ಯುವಕನ ಮಧ್ಯೆ ವಾಗ್ವಾದ ನಡೆದಿದೆ.

ಈ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸ್ನೇಹಿತರ ನೆರವಿನಿಂದ ಯುವಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಬೈಯ್ಯಪ್ಪನಹಳ್ಳಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು ಹಂತಕರ ಸುಳಿವು ದೊರೆತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.