ಬೆಂಗಳೂರು: ನಗರದ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಕನಕಪುರದ ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಕನಕಪುರದ ನಿವಾಸಿಗಳಾದ ರಾಮು ಹಾಗೂ ಶೋಭಾ ಎಂಬ ದಂಪತಿಗಳಿಗೆ ತ್ರಿವಳಿ ಮಕ್ಕಳು ಜನಿಸಿದೆ. ಏಪ್ರಿಲ್ 5ರಂದು ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮೊದಲು ಕನಕಪುರದಲ್ಲಿರುವ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದರು. ನಂತರ ಅಲ್ಲಿಂದ ವಾಣಿವಿಲಾಸ್ ಆಸ್ಪತ್ರೆಗೆ ಕರೆ ತಂದಿದ್ದು, ವಾಣಿ ವಿಲಾಸ್ ಆಸ್ಪತ್ರೆಯ ತಜ್ಞ ಡಾ. ಜಗನ್ನಾಥ್ ಅವರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಮಹಿಳೆಗೆ ಎರಡು ಹೆಣ್ಣು, ಒಂದು ಗಂಡು ಮಗು ಜನಿಸಿದೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.