ETV Bharat / city

ರಾಜಧಾನಿಯಲ್ಲಿ ಮುಂದುವರಿದ ಕಳ್ಳರ ಅಟ್ಟಹಾಸ.. ಹಣ ಕಿತ್ತುಕೊಂಡು ದುಷ್ಕರ್ಮಿಗಳು ಪರಾರಿ..

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಿದೆ. ಬ್ಯಾಂಕ್​​ನಿಂದ ಹೊರಬಂದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಡ್ರಾ ಮಾಡಿಕೊಂಡ ಹಣವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

author img

By

Published : Aug 30, 2019, 11:24 AM IST

Updated : Aug 30, 2019, 11:43 AM IST

a gang of robbers in Bangalore

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳರ ಹಾವಳಿ ನಿಲ್ಲುತ್ತಿಲ್ಲ. ಬ್ಯಾಂಕ್​​ನಿಂದ ಹೊರಬಂದ ವ್ಯಕ್ತಿಯೊಬ್ಬರಿಗೆ ಚಾಕು ತೋರಿಸಿ ಡ್ರಾ ಮಾಡಿಕೊಂಡ ಹಣವನ್ನು ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ನಗರದ ಪೀಣ್ಯಾದ ಕೋಟಕ್ ಮಹೀಂದ್ರ ಬ್ಯಾಂಕ್​ನಲ್ಲಿ ಹರೀಶ್ ಎಂಬುವರು ₹2 ಲಕ್ಷ ಹಣ ಡ್ರಾ ಮಾಡಿಕೊಂಡು ಹೊರಗೆ ಬಂದರು. ಅಷ್ಟರಲ್ಲಿ 6 ಮಂದಿ ಕಳ್ಳರು ಏಕಾಏಕಿ ಹರೀಶ್ ಮೇಲೆ ದಾಳಿ ನಡೆಸಿ ಚಾಕು ತೋರಿಸಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಹಣ ನೀಡಲು ನಿರಾಕರಿಸಿದ ಹರೀಶ್​ಗೆ ಕಳ್ಳರು ಕೊಲೆ ಬೆದರಿಕೆ ಹಾಕಿದ್ದಾರೆ.

ಕಳ್ಳರ ಅಟ್ಟಹಾಸ ಸಿಸಿ ಕ್ಯಾಮರಾದಲ್ಲಿ ಸೆರೆ

ಆಗ ಕಳ್ಳರು ಬೈಕಿನಲ್ಲಿಟ್ಟಿದ್ದ ಹಣ ತೆಗೆದುಕೊಂಡು ಬೈಕ್​ಗಳಲ್ಲಿ ಪಲಾಯನ ಮಾಡಿದ್ದಾರೆ. ಈ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೀಣ್ಯ ಪೊಲೀಸ್ ಠಾಣೆಯಲ್ಲಿ ಹರೀಶ್ ಪ್ರಕರಣ ದಾಖಲಿಸಿದ್ದಾರೆ.

Intro:ಸಿಲಿಕಾನ್ ಸಿಟಿಯಲ್ಲಿ ಮತ್ತೆ ರಾಬರಿ ಗ್ಯಾಂಗ್ ಹಾವಳಿ
ದುಷ್ಕರ್ಮಿಗಳ ಕೃತ್ಯ ಸಿಸಿ ಸೆರೆ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ರಾಬರಿ ಗ್ಯಾಂಗ್ ಹಾವಳಿ ಹೆಚ್ಚಾಗಿದೆ.ಬ್ಯಾಂಕ್ ನಿಂದ ಹಣ ತರುವವರನ್ನೇ ಟಾರ್ಗೇಟ್ ಮಾಡಿಕೊಂಡು ಹಣ ಎಗರಿಸಿರುವ ಘಟನೆ ಪೀಣ್ಯ ಬಳಿ ನಡೆದಿದೆ.

ನಗರದ ಪಿಣ್ಯದ ಕೋಟಾಕ್ ಮಹಿಂದ್ರ ಬ್ಯಾಂಕ್ ನಲ್ಲಿ ಹರೀಶ್ ಎಂಬುವವರು ಬ್ಯಾಂಕ್ ನಿಂದ 2 ಲಕ್ಷ ಹಣ ಡ್ರಾ ಮಾಡಿಕೊಂಡು ಹೊರಗೆ ಬರುವಷ್ಟು ರಲ್ಲಿ 6 ಜನ ಏಕಾಏಕಿ ಹರೀಶ್ ಮೇಲೆ ಅಟ್ಯಾಕ್ ಮಾಡಿ ಚಾಕು ತೋರಿಸಿ ಹಣ ನೀಡಿಲ್ಲಂದ್ರೆ ಕೊಲೆ ಮಾಡುವುದಾಗಿ ತಿಳಿಸಿ ಮತ್ತೊಬ್ಬರು ಬೈಕಿನಲ್ಲಿಟ್ಟಿದ್ದ 2 ಲಕ್ಷ ಹಣ ಪಿಕಿ ಮೂರು ಬೈಕ್ ಗಳಲ್ಲಿ ಪರಾರಿಯಾಗಿದ್ದಾರೆ

ಇನ್ನು ನೊಂದ ಹರೀಶ್ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದುಖದೀಮರು ಹಣ ಎಗರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ‌ಸದ್ಯ ಸಿಸಿಟಿವಿಯ ಚಲನವಲನ ಆಧಾರಿಸಿ ರಾಬರಿ ಗ್ಯಾಂಗ್ ಗಾಗಿ ಶೋಧ ನಡೆಸಿದ್ದಾರೆ. Body:KN_BNG_05_ROBBARY_7204498Conclusion:KN_BNG_05_ROBBARY_7204498
Last Updated : Aug 30, 2019, 11:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.