ETV Bharat / city

ಡೇಟಿಂಗ್ ಆ್ಯಪಲ್ಲಿ ಪರಿಚಯವಾದ ಯುವತಿಗೆ ಮನಸೋತು 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್..! - ಡೇಟಿಂಗ್​ ಆ್ಯಪ್​ನಲ್ಲಿ ಕೋಟಿ ಕೋಟಿ ಹಣದ ಕಳೆದುಕೊಂಡ ವ್ಯಕ್ತಿ

ಬ್ಯಾಂಕ್‌ ಮ್ಯಾನೇಜರ್​ವೊಬ್ಬ ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾದ ಯುವತಿಗೆ ಮನಸೋತು 6 ಕೋಟಿ ರೂಪಾಯಿ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bank manager lost crore rupees in Dating app, man A Bank manager lost six crore rupees in Dating app in Bengaluru, ಬೆಂಗಳೂರಿನಲ್ಲಿ ಆರು ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್, ಡೇಟಿಂಗ್​ ಆ್ಯಪ್​ನಲ್ಲಿ ಕೋಟಿ ಕೋಟಿ ಹಣದ ಕಳೆದುಕೊಂಡ ವ್ಯಕ್ತಿ, ಬೆಂಗಳೂರು ಅಪರಾಧ ಸುದ್ದಿ,
6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್
author img

By

Published : Jun 24, 2022, 1:09 PM IST

Updated : Jun 24, 2022, 9:09 PM IST

ಬೆಂಗಳೂರು: ಡೇಟಿಂಗ್ ಆ್ಯಪ್​ನಲ್ಲಿ ಬ್ಯಾಂಕ್ ಮ್ಯಾನೇಜರ್​ನನ್ನು‌ ಪರಿಚಯಿಸಿಕೊಂಡ ಯುವತಿ ಸಲುಗೆ ಬೆಳೆಸಿಕೊಂಡು ಹಂತ - ಹಂತವಾಗಿ 6 ಕೋಟಿ ರೂಪಾಯಿ ಟೋಪಿ ಹಾಕಿರುವ ಘಟನೆ ನಡೆದಿರುವುದು ರಾಜಧಾನಿಯಲ್ಲಿ ಬೆಳಕಿಗೆ ಬಂದಿದೆ.

ಹರಿಶಂಕರ್ ಎಂಬುವರು ಹಣ‌ ಕಳೆದುಕೊಂಡಿರುವ ವ್ಯಕ್ತಿ. ಹನುಮಂತನಗರ ಇಂಡಿಯನ್ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿದ್ದು, ಮದ್ವೆಯಾಗಿ ಮನೆತುಂಬಾ ಮಕ್ಕಳು ಓಡಾಡ್ತಿರುವ ಕಾಲದಲ್ಲೇ ಈ ಹರಿಶಂಕರ ಇದೀಗ ದೊಡ್ಡದೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅನಿತಾ ಎಂಬ ಠೇವಣಿದಾರರ ಎಫ್​ಡಿ ಖಾತೆಯ ಮೇಲೆ ಸರಿಸುಮಾರು 6 ಕೋಟಿಯಷ್ಟು ಲೋನನ್ನ ಮಾಡಿ ಇದೀಗ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.

ಹರಿಶಂಕರ್​ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಡೇಟಿಂಗ್ ಆ್ಯಪ್​ನಲ್ಲಿ ತನ್ನ ಹೆಸರನ್ನ ನೊಂದಾಯಿಸಿಕೊಂಡಿದ್ದ. ಈ ವೇಳೆ‌ ಯುವತಿಯನ್ನು ಪರಿಚಯಿಸಿಕೊಂಡ ಇವರು ಪರಿಚಯ ಬೆಳೆಸಿಕೊಂಡಿದ್ದಾನೆ. ಯುವತಿ ಸಹ ರಸಭರಿತವಾಗಿ ಹರಿಶಂಕರನ ಮೊಬೈಲ್​ಗೆ ಸಂದೇಶಗಳನ್ನು ಕಳುಹಿಸುತ್ತಿದ್ದಳು. ಚೆಂದದ ಯುವತಿಯ ಯೌವನದ ಮೆಸೇಜ್​ಗೆ ಮನಸೋತು ತನ್ನ ಬಳಿಯಿದ್ದ 12 ಲಕ್ಷ ಹಣವನ್ನ ಯುವತಿಯ ಅಕೌಂಟ್​ಗೆ ಕಳುಹಿಸಿದ್ದ.

ಪೊಲೀಸ್​ ಅಧಿಕಾರಿ ಹೇಳಿಕೆ

ಯುವತಿ ನನಗೆ ಇನ್ನೂ ಹಣಬೇಕು, ಅದೆಷ್ಟು ಪ್ರೀತಿಬೇಕು ಕೇಳು ಅಂದಿದ್ದಳಷ್ಟೇ. ಅಷ್ಟಕ್ಕೆ ಹರಿಶಂಕರ್ ತಾನು ಕೆಲಸ ಮಾಡ್ತಿದ್ದ ಇಂಡಿಯನ್ ಬ್ಯಾಂಕ್​ನ ಠೇವಣಿದಾರರಾದ ಅನಿತಾ ಎಂಬವರ ಎಫ್​ಡಿ ಅಕೌಂಟ್ ಮೇಲೆ ಆರು ಕೋಟಿಯಷ್ಟು ಸಾಲವನ್ನ ಮಾಡಿದ್ದಾನೆ. ಆ ಆರು ಕೋಟಿಯನ್ನ ಡೇಟಿಂಗ್ ಬೆಡಗಿಗೆ ನೀಡಿದ್ದಾನೆ. ಡೇಟಿಂಗ್ ಬೆಡಗಿಯ ಬಣ್ಣದ ಮಾತಿಗೆ ತಣ್ಣಗೆ ಕೋಟಿ ಕೋಟಿ ಸುರಿದು ಇದೀಗ ಹನುಮಂತನಗರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹರಿಶಂಕರನ ಪ್ರೇಮದಾಟ ಇದೀಗ ಆತನನ್ನ ಜೈಲಿನೂಟದವರೆಗೂ ಕರೆದೊಯ್ದಿದೆ.

ಓದಿ: ಮೈಸೂರು: ಡೇಟಿಂಗ್ ಆ್ಯಪ್ ಮೂಲಕ ವಂಚಿಸುತ್ತಿದ್ದ ಆರೋಪಿಯ ಬಂಧನ

Last Updated : Jun 24, 2022, 9:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.