ETV Bharat / city

ಟಿವಿಎಸ್ ಎಕ್ಸ್ಎಲ್​ ಬೈಕ್​ಗಳನ್ನೇ‌ ಟಾರ್ಗೆಟ್​ ಮಾಡಿ ಕದಿಯುತ್ತಿದ್ದ ಖದೀಮ ಅರೆಸ್ಟ್

ಈತ ಕಳ್ಳತನ ಮಾಡೋದು ಕೇವಲ ಟಿವಿಎಸ್ ಎಕ್ಸ್ಎಲ್ ಹೆವಿ ಡ್ಯೂಟಿ ಮತ್ತು ಎಕ್ಸ್ಎಲ್ 100 ಬೈಕ್​ಗಳನ್ನ ಮಾತ್ರ. ಅದರ ಪಕ್ಕದಲ್ಲಿ ನೀವು ಅದೆಷ್ಟೋ ಕೋಟಿ ಬೆಲೆ ಬಾಳುವ ಬೈಕ್ ನಿಲ್ಲಿಸಿದ್ದರೂ ಈತ ಮುಟ್ಟೋದಕ್ಕೆ ಹೋಗುವುದಿಲ್ಲ. ಆರೋಪಿಯನ್ನ ಪ್ರಶ್ನಿಸಿದಾಗ ವಿಭಿನ್ನವಾಗಿ ಉತ್ತರಿಸಿದ್ದಾನೆ..

Bangalore
ಟಿವಿಎಸ್ ಎಕ್ಸ್ಎಲ್​ ಬೈಕ್​ಗಳನ್ನೇ‌ ಟಾರ್ಗೆಟ್​ ಮಾಡಿ ಕದಿಯುತ್ತಿದ್ದ ಖದೀಮ ಅರೆಸ್ಟ್
author img

By

Published : Jul 6, 2021, 1:58 PM IST

ಬೆಂಗಳೂರು : ನೀವು ಸಾಕಷ್ಟು ಬೈಕ್ ಕಳ್ಳರ ಬಗ್ಗೆ ಓದಿರುತ್ತೀರಿ. ಆದರೆ, ನಿಖರವಾಗಿ ಒಂದೇ ಕಂಪನಿಯ ಬೈಕ್ ಕದಿಯುವುದನ್ನು ಕೇಳಿರುವುದಕ್ಕೆ ಸಾಧ್ಯವಿಲ್ಲ. ಆದರೆ, ಟಿವಿಎಸ್ ಎಕ್ಸ್ಎಲ್​ ಬೈಕ್​ಗಳನ್ನೇ‌ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಖದೀಮನನ್ನು‌ ಜ್ಞಾನಭಾರತಿ ಪೊಲೀಸರು ಬಂಧಿಸಿದಾರೆ. ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಟಿವಿಎಸ್ ಎಕ್ಸ್ಎಲ್​ ಬೈಕ್​ಗಳನ್ನೇ‌ ಟಾರ್ಗೆಟ್​ ಮಾಡಿ ಕದಿಯುತ್ತಿದ್ದ ಖದೀಮ ಅರೆಸ್ಟ್

ರಾಜಾ ಅಲಿಯಾಸ್ ರಘುರಾಮ್ ಬಂಧಿತ ಆರೋಪಿ. ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಜ್ಞಾನಭಾರತಿ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಲಕ್ಷ್ಮಣ್ ನಾಯಕ್ ಮತ್ತು ಪಿಎಸ್​ಐ ದತ್ತುಬಾ ತಂಡ ಯಶಸ್ವಿಯಾಗಿದೆ. ಬಂಧಿತನಿಂದ 3 ಲಕ್ಷ ಮೌಲ್ಯದ ಒಟ್ಟು 7 ಟಿವಿಎಸ್ ಎಕ್ಸ್ಎಲ್​​ಗಳನ್ನ ವಶಪಡಿಸಿಕೊಂಡು ಆರೋಪಿಯನ್ನ ಜೈಲಿಗಟ್ಟಿದ್ದಾರೆ.

ಈತ ಕಳ್ಳತನ ಮಾಡೋದು ಕೇವಲ ಟಿವಿಎಸ್ ಎಕ್ಸ್ಎಲ್ ಹೆವಿ ಡ್ಯೂಟಿ ಮತ್ತು ಎಕ್ಸ್ಎಲ್ 100 ಬೈಕ್​ಗಳನ್ನ ಮಾತ್ರ. ಅದರ ಪಕ್ಕದಲ್ಲಿ ನೀವು ಅದೆಷ್ಟೋ ಕೋಟಿ ಬೆಲೆ ಬಾಳುವ ಬೈಕ್ ನಿಲ್ಲಿಸಿದ್ದರೂ ಈತ ಮುಟ್ಟೋದಕ್ಕೆ ಹೋಗುವುದಿಲ್ಲ. ಆರೋಪಿಯನ್ನ ಪ್ರಶ್ನಿಸಿದಾಗ ವಿಭಿನ್ನವಾಗಿ ಉತ್ತರಿಸಿದ್ದಾನೆ.

ಟಿವಿಎಸ್ ಎಕ್ಸ್ಎಲ್ ಮಾತ್ರ ಕದಿಯೋಕೆ ಕಾರಣಗಳು‌

ಈ ಕಳ್ಳನಿಗೆ ಟಿವಿಎಸ್ ಎಕ್ಸ್ಎಲ್ ಗಾಡಿ ಬಿಟ್ಟು ಬೇರೆ ಗಾಡಿ ಓಡಿಸೋಕೆ ಬರೋದಿಲ್ವಂತೆ. ಅಲ್ಲದೆ, ಈ ಬೈಕ್‌ನ ಕದಿಯೋದು ಬೇರೆ ಎಲ್ಲಾ ಬೈಕ್​ಗಳಿಗಿಂತ ತೀರಾ ಸಲೀಸಂತೆ. ಜೊತೆಗೆ ಕಡಿಮೆ ಬೆಲೆ ಬೈಕ್ ಆಗಿರೋದ್ರಿಂದ ಪೊಲೀಸರು ಕೂಡ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಂಡು ಹುಡುಕುವುದಿಲ್ಲ ಹಾಗೂ ಈ ಬೈಕ್​ನ ಮಾರುವುದು ಕೂಡ ಸುಲಭ. ಹೀಗಾಗಿ, ಟಿವಿಎಸ್ ಎಕ್ಸ್ಎಲ್ ಬೈಕ್ ಕಳ್ಳತನ ಮಾಡುತ್ತಿದ್ದೆ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: ಹುನಗುಂದ ಬಳಿ ಕಾರು ಅಪಘಾತ ಪ್ರಕರಣ: ಘಟನೆ ಬಗ್ಗೆ ಚಿದಾನಂದ ಸವದಿ ಹೇಳಿದ್ದಿಷ್ಟು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.