ಬೆಂಗಳೂರು : ರಾಜ್ಯದಲ್ಲಿಂದು ಕೋವಿಡ್ ಸಾವಿನ ಸಂಖ್ಯೆ 9 ಸಾವಿರ ಗಡಿದಾಟಿದೆ. ಅಲ್ಲದೆ 8793 ಕೊರೊನಾ ಪ್ರಕರಣ ಇಂದು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 6,20,630ಕ್ಕೆ ಏರಿಕೆಯಾಗಿದೆ.
ಇಂದು 125 ಸೋಂಕಿತರು ಕೊರೊನಾಗೆ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ 9119ಕ್ಕೆ ಏರಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. 7,094 ಗುಣಮುಖರಾಗಿದ್ದು 4,99,506 ಜನ ಈವರೆಗೆ ಡಿಸ್ಜಾರ್ಜ್ ಆಗಿದ್ದಾರೆ.
ಸಕ್ರಿಯ 1,11,986 ಪ್ರಕರಣಗಳಿವೆ. 827 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದಾರೆ. 303 ಪ್ರಯಾಣಿಕರು ವಿಮಾನ ನಿಲ್ದಾಣದಿಂದ ಬಂದಿದ್ದು ತಪಾಸಣೆಗೆ ಒಳಪಟ್ಟಿದ್ದಾರೆ. 1,69,714 ಜನರು ಹೋಂ ಕ್ವಾರಂಟೈನ್ನಲ್ಲಿದ್ದಾರೆ.