ETV Bharat / city

ರಾಜ್ಯದಲ್ಲಿ ಲಕ್ಷಣರಹಿತ ಸೋಂಕಿತರೇ ಹೆಚ್ಚು.. ಆರೋಗ್ಯ ಇಲಾಖೆಯಿಂದ ಆತಂಕಕಾರಿ ಮಾಹಿತಿ!! - ಲಕ್ಷಣ ರಹಿತ ಸೋಂಕಿತರು

ರಾಜ್ಯದಲ್ಲಿ ಇಂದು ದಾಖಲೆಯ ಮಟ್ಟದಲ್ಲಿ ಸೋಂಕಿತರು ಪತ್ತೆಯಾಗಿದ್ದಾರೆ. ಇಲ್ಲಿವರೆಗೂ ಪತ್ತೆಯಾದ ಸೋಂಕಿತರಲ್ಲಿ ಶೇಕಡಾ 76ರಷ್ಟು ಮಂದಿ ಸೋಂಕು ಲಕ್ಷಣ ರಹಿತರು ಎಂಬ ಆತಂಕಕಾರಿ ಮಾಹಿತಿಯನ್ನು ಆರೋಗ್ಯ ಇಲಾಖೆ ಬಹಿರಂಗಪಡಿಸಿದೆ.

corona
ಕೊರೊನಾ
author img

By

Published : May 10, 2020, 8:14 PM IST

ಬೆಂಗಳೂರು : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರಿಕೆ‌ ಆಗುತ್ತಲೇ ಇದೆ. ಇಂದು ಬರೋಬ್ಬರಿ 54 ಮಂದಿಯಲ್ಲಿ ಸೋಂಕು ದೃಢವಾಗಿದೆ.‌ ಇದರಿಂದಾಗಿ ಒಟ್ಟು ಸೋಂಕಿತರ ಸಂಖ್ಯೆ 848ಕ್ಕೆ ಏರಿಕೆಯಾಗಿದೆ. ಈವರೆಗೂ 31 ಮಂದಿ ಬಲಿಯಾಗಿದ್ದಾರೆ. ಕೊರೊನಾದಿಂದ 422 ಮಂದಿ‌ ಗುಣಮುಖರಾಗಿದ್ದಾರೆ. ಉಳಿದ 394 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದ್ದು 6 ಮಂದಿ ಐಸಿಯುನಲ್ಲಿದ್ದಾರೆ.

ಸೋಂಕಿತರ ಜಿಲ್ಲೆಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ರೆ, 2ನೇ ಸ್ಥಾನದಲ್ಲಿದ್ದ ಮೈಸೂರಿನ‌ ಜಾಗವನ್ನು ಬೆಳಗಾವಿ ಆಕ್ರಮಿಸಿದೆ. ಜಿಲ್ಲಾವಾರು ಸೋಂಕಿತರ ಪಟ್ಟಿ ಈ ಕೆಳಕಂಡಂತಿದೆ.

districtwise corona cases
ಜಿಲ್ಲಾವಾರು ಸೋಂಕಿತರ ವರದಿ
ರಾಜ್ಯದಲ್ಲಿ ಹೆಚ್ಚುತ್ತಿದೆ ಲಕ್ಷಣರಹಿತ ಸೋಂಕಿತರ ಸಂಖ್ಯೆ.. ರಾಜ್ಯದಲ್ಲಿ ಯಾವುದೇ ಲಕ್ಷಣಗಳು ಇಲ್ಲದ ವ್ಯಕ್ತಿಗಳಲ್ಲಿ ಕೊರೊನಾ ಪತ್ತೆಯಾಗಿದೆ. ಇದುವರೆಗೂ 848 ಕೊರೋನಾ ಸೋಂಕಿತರು ಪತ್ತೆಯಾಗಿದ್ದಾರೆ. ಇದರಲ್ಲಿ ಸುಮಾರು 645 ಜನರಲ್ಲಿ ಯಾವುದೇ ಗುಣಲಕ್ಷಣ ಇಲ್ಲ. ರೋಗ ಲಕ್ಷಣ ಇರುವ 202 ಜನರಲ್ಲಿ ಮಾತ್ರ ಕೊರೊನಾ ಪತ್ತೆಯಾಗಿದೆ.‌
corona patients
ಸೋಂಕಿತರು

ಈಗ ಸೋಂಕು ಪತ್ತೆಯಾಗಿರುವ ಶೇ.76ರಷ್ಟು ಜನರಲ್ಲಿ ಲಕ್ಷಣಗಳೇ ಕಂಡು ಬಂದಿಲ್ಲ. ಶೇ.24ರಷ್ಟು ಸೋಂಕಿತರಲ್ಲಿ ಮಾತ್ರ ರೋಗ ಲಕ್ಷಣ ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆ ಆತಂಕಕಾರಿ ಮಾಹಿತಿ ಬಯಲು ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.