ಬೆಂಗಳೂರು: ಕೋವಿಡ್ ನಡುವೆ ಆರ್.ಆರ್. ನಗರದ ಉಪ ಚುನಾವಣೆ ನಡೆಯುತ್ತಿದ್ದು, ವಿಶೇಷವಾಗಿ ಕೋವಿಡ್ ಪಾಸಿಟಿವ್ ರೋಗಿಗಳು ಕೂಡ ತಮ್ಮ ಹಕ್ಕು ಚಲಾಯಿಸಲು ಬಿಬಿಎಂಪಿ ಮತಗಟ್ಟೆಗಳಿಗೆ ಬರಲಿದ್ದಾರೆ. ಇದಕ್ಕೆ ಬಿಬಿಎಂಪಿ ಸಕಲ ಸಿದ್ಧತೆ ನಡೆಸಿದ್ದು, ಸಂಜೆ 5ರಿಂದ 6 ಗಂಟೆವರೆಗೆ 7 ಮಂದಿ ಕೋವಿಡ್ ಪಾಸಿಟಿವ್ ರೋಗಿಗಳು ಮತದಾನ ಮಾಡಲಿದ್ದಾರೆ.
ಆರ್.ಆರ್. ನಗರದಲ್ಲಿ 1500 ಜನ ಕೋವಿಡ್ ರೋಗಿಗಳಿದ್ದು, ಆ್ಯಕ್ಟೀವ್ ಕೋವಿಡ್ ಆರ್.ಆರ್. ನಗರದ ವಿಳಾಸ ಹೊಂದಿರುವ ನಿವಾಸಿಗಳ ಸಂಖ್ಯೆ 148 ಇದೆ. ಪಾಲಿಕೆಯಿಂದ ಕರೆ ಮಾಡಿದಾಗ 26 ಜನ ವೋಟ್ ಮಾಡಲು ಇಚ್ಛಿಸಿದ್ದರು. ಆದ್ರೆ ಅಂತಿಮವಾಗಿ 7 ಜನ ಸೋಂಕಿತರು ಸಾರ್ವಜನಿಕ ಮಟಗಟ್ಟೆಗಳಲ್ಲಿ ಪ್ರತ್ಯೇಕ ಸಮಯದಲ್ಲಿ ವೋಟ್ ಮಾಡಲಿದ್ದಾರೆ.
ಕೋವಿಡ್ ಪಾಸಿಟಿವ್ ರೋಗಿಗಳ ಮತಗಟ್ಟೆಗಳು: ಯಶವಂತಪುರದ ಆನಂದ ಸೋಷಿಯಲ್ ಎಜುಕೇಶನ್ ಸೊಸೈಟಿ, ಪೀಣ್ಯ ಗವರ್ನಮೆಂಟ್ ಜೂನಿಯರ್ ಕಾಲೇಜು, ಅಂಗನವಾಡಿ ಕೇಂದ್ರ- ಬೂತ್ ನಂ-1, ಮೌಂಟ್ ಸಿನಾರಿಯಾ ಸ್ಕೂಲ್ ಲಗ್ಗೆರೆ, ಬಿ.ಇ.ಟಿ ಸ್ಕೂಲ್ ಆರ್.ಆರ್. ನಗರದ ಮತಗಟ್ಟೆಗಳಲ್ಲಿ ಸಂಜೆ 5-6ರವರೆಗೆ ಆ್ಯಂಬುಲೆನ್ಸ್ ಮೂಲಕ ಪಿಪಿಇ ಕಿಟ್ ಧರಿಸಿ ಬಂದು ಮತ ಹಾಕಲಿದ್ದಾರೆ.