ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತೀವ್ರತೆ ಕಡಿಮೆ ಆಗುತ್ತಿದೆಯೆಂದು ನಿಯಮ ಪಾಲಿಸದೇ ಆಲಸ್ಯ ತೋರಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಡೆಲ್ಟಾಗಿಂತಲೂ ವೇಗವಾಗಿ ಹರಡುವ ಕೊರೊನಾದ ಹೊಸ ರೂಪಾಂತರಿ ಪತ್ತೆಯಾಗಿದೆ.
ಬ್ರಿಟನ್, ಯೂರೋಪ್, ರಷ್ಯಾ ಹಾಗೂ ಅಮೇರಿಕಾದಲ್ಲಿ ಕೊರೊನಾ ಪ್ರಕರಣಗಳ ಏರಿಕೆಗೆ ಕಾರಣವಾಗಿರುವ AY 4.2 ಸೋಂಕು ಇದೀಗ ರಾಜ್ಯದಲ್ಲಿಯೂ ಪತ್ತೆಯಾಗಿದೆ. ರಾಜ್ಯದಲ್ಲಿ 7 ಕೊರೊನಾ ರೂಪಾಂತರಿ AY 4.2 ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ 3 ಹಾಗೂ ಇತರೆ ಜಿಲ್ಲೆಗಳಲ್ಲಿ 4 ಪ್ರಕರಣ ಪತ್ತೆಯಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಂದೀಪ್, ಬೆಂಗಳೂರಿನಲ್ಲಿ 3 ಹಾಗೂ ಬೇರೆ ಭಾಗದಲ್ಲಿ 4 AY 4.2 ಸೋಂಕು ಪ್ರಕರಣಗಳು ಕಂಡುಬಂದಿದೆ. ರಾಜ್ಯದಲ್ಲಿ ಈಗಾಗಲೇ ಎಲ್ಲ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದು, ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆರ್ಟಿ-ಪಿಸಿಆರ್ ಟೆಸ್ಟ್ ಅನ್ನು ಕಡ್ಡಾಯ ಮಾಡಿದ್ದೇವೆ. ಈ ಹಿಂದೆ ಇದ್ದ ಕ್ವಾರಂಟೈನ್ ನಿಯಮವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಬೇರೆ ದೇಶದಲ್ಲಿ ಸೋಂಕು ಹೆಚ್ಚಾದರೆ ಕೇಂದ್ರದಿಂದ ಮಾರ್ಗಸೂಚಿ ಹಾಗೂ ರಾಜ್ಯದಿಂದಲೂ ಹೊಸ ಮಾರ್ಗಸೂಚಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು..
ಇದನ್ನೂ ಓದಿ: ಬಡವರ ಮನೆ ದೀಪ ಬೆಳಗಿಸ್ತಾರೆ ಅಥಣಿಯ ರೈತ ದಂಪತಿ: ದೀಪಾವಳಿಗೆ ಮಾನವೀಯ ಕಾರ್ಯ