ಬೆಂಗಳೂರು: ರಾಜ್ಯದಲ್ಲಿಂದು 674 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇಬ್ಬರು ಮೃತಪಟ್ಟಿದ್ದು, 815 ಮಂದಿ ಗುಣಮುಖರಾಗಿದ್ದಾರೆ.
7554 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 9,14,492 ಮಂದಿ ಬಿಡುಗಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,34,252ಕ್ಕೆ ಏರಿಕೆಯಾಗಿದೆ. ಮೃತಪಟ್ಟವರ ಸಂಖ್ಯೆ 12,187ಕ್ಕೆ ಏರಿಕೆಯಾಗಿದೆ. ಐಸಿಯುನಲ್ಲಿ 171 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನಲ್ಲಿ ಇಂದು 371 ಜನರ ಕೊರನಾ ವರದಿ ಪಾಸಿಟಿವ್ ಬಂದಿದೆ. ಒಬ್ಬರು ಮೃತಪಟ್ಟಿದ್ದಾರೆ.
ಓದಿ-ಸೀರಂ ಇನ್ಸ್ಟಿಟ್ಯೂಟ್ ಅಗ್ನಿ ಅವಘಡದಲ್ಲಿ ಐವರು ಮೃತ; ದುರ್ಘಟನೆಗೆ ಶಾರ್ಟ್ ಸರ್ಕ್ಯೂಟ್ ಕಾರಣ?
ವ್ಯಾಕ್ಸಿನ್ ಪಡೆದ ವಿವರ
ಇಂದು 364 ಜನರನ್ನು ಕೋವಿಡ್ ಲಸಿಕೆಗೆ ನಿಗದಿಪಡಿಸಲಾಗಿತ್ತು. 355 ಮಂದಿ ಲಸಿಕೆ ಪಡೆದಿದ್ದಾರೆ. 32,773 ಮಂದಿಗೆ ಲಸಿಕೆ ನೀಡುವ ಟಾರ್ಗೆಟ್ ಇದ್ದು, 14,108 ಜನರಿಗೆ ಮಾತ್ರ ನೀಡಲಾಗಿದೆ. ಆರು ದಿನದಲ್ಲಿ 43% ಮಾತ್ರ ಪೂರ್ಣವಾಗಿದೆ.