ETV Bharat / city

ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಬಿಗ್ ಶಾಕ್: ಪೊಲೀಸ್ ಇಲಾಖೆಯಲ್ಲಿ 67 ಕೊರೊನಾ ಕೇಸ್​​ ಪತ್ತೆ - 67 police personalities found corona positive

ಬೆಂಗಳೂರಿನಲ್ಲಿ ಪೊಲೀಸ್​ ಇಲಾಖೆ ಮೇಲೆ ಕೊರೊನಾ ಕರಿ ನೆರಳು ಬಿದ್ದಿದೆ. ಈವರೆಗೆ ಒಟ್ಟು 67 ಪೊಲೀಸ್​ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಅದರಲ್ಲೂ ಹೆಚ್ಚಾಗಿ ಪಶ್ಚಿಮ ವಿಭಾಗದ ಪೊಲೀಸ್​ ಸಿಬ್ಬಂದಿಯಲ್ಲೇ ಸೋಂಕು ಹೆಚ್ಚು ಕಂಡು ಬಂದಿದೆ.

positive
ಪೊಲೀಸ್ ಇಲಾಖೆಯಲ್ಲಿ ಒಟ್ಟು 67 ಕೊರೊನಾ ಕೇಸ್​​ ಪತ್ತೆ
author img

By

Published : Jun 22, 2020, 10:18 AM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ವಾರಿಯರ್ಸ್​​ಗಳಾದ ಪೊಲೀಸರಲ್ಲೇ ಕೊರೊನಾ ಸೋಂಕು ಪತ್ತೆಯಾಗ್ತಿದೆ. ಹೀಗಾಗಿ ಹಿರಿಯ ಅಧಿಕಾರಿಗಳು ಸದ್ಯ ಪೊಲೀಸ್ ಸಿಬ್ಬಂದಿಯ ಆರೋಗ್ಯದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದಾರೆ.

ಸದ್ಯ ಬೆಂಗಳೂರಿನಲ್ಲಿ ಇಲ್ಲಿಯವರೆಗೆ ಒಟ್ಟು 67 ಪೊಲೀಸರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗೆ 67 ಮಂದಿಯ ಪೈಕಿ 7 ಮಂದಿ ಡಿಸ್ಚಾರ್ಜ್ ಆಗಿದ್ದು, 3 ಮಂದಿ ಪೊಲೀಸರು ಕೋವಿಡ್​​ನಿಂದ ಮರಣ ಹೊಂದಿದ್ದಾರೆ.

positive
ಪೊಲೀಸ್ ಇಲಾಖೆಯಲ್ಲಿ ಒಟ್ಟು 67 ಕೊರೊನಾ ಕೇಸ್​​ ಪತ್ತೆ
ಎಲ್ಲೆಲ್ಲಿ ಕೊರೊನಾ ಸೋಂಕು ಪತ್ತೆ: ಪಶ್ಚಿಮ ವಿಭಾಗ ಒಂದರಲ್ಲೇ 24 ಜನ, ಉತ್ತರ ವಿಭಾಗ-1, ದಕ್ಷಿಣ ವಿಭಾಗ-1,ಕೇಂದ್ರ ವಿಭಾಗ-2,ಪೂರ್ವ ವಲಯ-1, ಆಗ್ನೇಯ-2, ಪೂರ್ವ ವಲಯ ಟ್ರಾಫಿಕ್-2, ಪಶ್ಚಿಮ ಟ್ರಾಫಿಕ್- 11ಸಿಸಿಬಿ-4, CAR ಹೆಡ್ ಕ್ವಾಟರ್- 1,CAR ಪಶ್ಚಿಮ-1,ಬಿಡಿಎ-1, ಎಸಿಬಿ-1,ಡಿಜಿ ಕಚೇರಿ-1,ಕೆಎಸ್ಆರ್​​ಪಿ ಬೆಂಗಳೂರು-5 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ ಪಶ್ಚಿಮ ವಿಭಾಗದ ಪೊಲೀಸರಿಗೆ ಅತಿ ಹೆಚ್ಚು ಕೊರೊನಾ ಸೋಂಕು ತಗುಲಿದೆ. ಸದ್ಯ ಪ್ರತಿ ಪೊಲೀಸ್ ಠಾಣೆಗಳಲ್ಲಿ ಬಹಳ ಜಾಗರೂಕತೆಯಿಂದ ಇರುವಂತೆ ನಿನ್ನೆ ನಗರ ಪೊಲೀಸ್ ಆಯುಕ್ತರು ಎಲ್ಲ ಡಿಸಿಪಿ, ಇನ್ಸ್​​​​​​ಪೆಕ್ಟರ್​​​ ಹಾಗೂ ಸಬ್ ಇನ್ಸ್ ಪೆಕ್ಟರ್​​ಗಳಿಗೆ ಸೂಚನೆ ನೀಡಿದ್ದಾರೆ. ಸದ್ಯ ನಗರ ಆಯುಕ್ತರು ನೀಡಿದ 10 ಸಲಹೆಗಳನ್ನ ಇಲಾಖೆಯ ಎಲ್ಲ ಸಿಬ್ಬಂದಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.