ETV Bharat / city

ಮುಂಬೈನಿಂದ 644 ಮಂದಿ ಆಗಮನ; ಹಲವರಲ್ಲಿ ಕೊರೊನಾ ಲಕ್ಷಣಗಳು...

ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದಿಳಿದ 644 ವಲಸಿಗರ ಪೈಕಿ ಹಲವರಿಗೆ ಕೊರೊನಾ ಲಕ್ಷಣಗಳು ಇರುವುದು ಕಂಡು ಬಂದಿದೆ. ಅಂತಹವರನ್ನು ನೇರವಾಗಿ ಆಸ್ಪತ್ರೆಗೆ ರವಾನಿಸಲಾಗುತ್ತದೆ. ಉಳಿದವರನ್ನು ಕ್ವಾರಂಟೈನ್​​ಗೆ ಒಳಪಡಿಸಲಾಗುತ್ತದೆ.

Corona
ಕೊರೊನಾ
author img

By

Published : Jun 2, 2020, 4:05 PM IST

ಬೆಂಗಳೂರು: ರಾಜ್ಯ ರಾಜಧಾನಿ ಸೇರಿದಂತೆ ಹಲವೆಡೆ ಮುಂಬೈನಿಂದ ಬರುತ್ತಿರುವ ವಲಸಿಗರು ಶೇ 100ರಷ್ಟು ಆತಂಕ ಸೃಷ್ಟಿಸಿರುವುದು ನಿಜ. ಇಂದು ರೈಲಿನ ಮೂಲಕ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದ 644 ಮಂದಿಯಲ್ಲಿ ಹಲವರಿಗೆ ಕೊರೊನಾ ಲಕ್ಷಣಗಳು ಕಂಡು ಬಂದಿವೆ.

ಇದನ್ನೂ ಓದಿ: ಮುಂಬೈಯಿಂದ ಬೆಂಗಳೂರಿಗೆ ರೈಲಲ್ಲಿ ಬಂದ ಪ್ರಯಾಣಿಕರು ಪರಾರಿ, ಪೊಲೀಸರಿಗೆ ಹೆಚ್ಚಿದ ತಲೆನೋವು

ರೈಲು ಕಾಂತ್ರಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದ 644 ವಲಸಿಗರ ಪೈಕಿ 592 ವಯಸ್ಕರು, 52 ಮಕ್ಕಳಿದ್ದಾರೆ. ಅವರನ್ನು ಥರ್ಮಲ್ ಸ್ಕ್ರೀನಿಂಗ್ ಒಳಪಡಿಸಿ ನಂತರ ಹೋಟೆಲ್ ಕ್ವಾರಂಟೈನ್​​​ಗೆ ಕಳುಹಿಸಲಾಗುತ್ತಿದೆ. ನಿನ್ನೆಯೂ ಮಹಾರಾಷ್ಟ್ರ ಟ್ರಾವೆಲ್​ ಹಿಸ್ಟರಿ ಹೊಂದಿದ್ದ 20 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ಥರ್ಮಲ್​ ಸ್ಕ್ಯಾನಿಂಗ್​​​

ರೋಗ ಲಕ್ಷಣಗಳು ಕಂಡು ಬಂದರೆ ಸ್ವಾಬ್ ಟೆಸ್ಟ್:

ಥರ್ಮಲ್ ಸ್ಕೀನಿಂಗ್ ವೇಳೆ ದೇಹದ ಉಷ್ಣಾಂಶ ಹೆಚ್ಚಾಗಿರುವುದು ಕಂಡು ಬಂದಲ್ಲಿ ಅವರಿಗೆ ಸ್ವಾಬ್ ಟೆಸ್ಟ್​​ಗೆ ಒಳಪಡಿಸಿ ನೇರವಾಗಿ ಆಸ್ಪತ್ರೆಗೆ ರವಾನಿಸಲಾಗುತ್ತಿದೆ. ನಿಲ್ದಾಣದಲ್ಲೇ ಸ್ವಾಬ್ ಟೆಸ್ಟ್ ವ್ಯವಸ್ಥೆ ಇರುವ ಕಾರಣ 48 ಗಂಟೆಗಳಲ್ಲಿ ವರದಿ ಇಲಾಖೆ ಕೈ ಸೇರಲಿದೆ. ಈಗಾಗಲೇ 30ಕ್ಕೂ ಹೆಚ್ಚು ಮಂದಿಗೆ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.