ಬೆಂಗಳೂರು: ಆರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ರಾಮಚಂದ್ರನ್.ಆರ್ ಅವರನ್ನು ಪಿಯು ಶಿಕ್ಷಣ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ಇತ್ತ ಪಿಯು ಶಿಕ್ಷಣ ನಿರ್ದೇಶಕಿಯಾಗಿದ್ದ ಸ್ನೇಹಲ್ ಅವರನ್ನು ಎತ್ತಂಗಡಿ ಮಾಡಲಾಗಿದೆ.
ಬೀದರ್ ಜಿಲ್ಲೆಯ ಡಿಸಿಯಾಗಿ ಗೋವಿಂದ್ ರೆಡ್ಡಿ, ಧಾರವಾಡ ಜಿ.ಪಂ ಸಿಇಒ ಆಗಿ ಸುರೇಶ್ ಇಟ್ನಾಳ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ವಿಜಯಪುರ ಜಿಲ್ಲಾ ಪಂಚಾಯತ್ ಸಿಇಒ ಆಗಿ ರಾಹುಲ್ ಶಿಂಧೆರನ್ನು ವರ್ಗಾವಣೆ ಮಾಡಲಾಗಿದೆ.
(ಇದನ್ನೂ ಓದಿ: 'ಸಮಾನತೆ ಪ್ರತಿಮೆ' ಲೋಕಾರ್ಪಣೆ ವೇಳೆ ಅಪರೂಪದ ಘಟನೆ... ಪ್ರಧಾನಿ ಕಾಲಿಗೆ ನಮಸ್ಕರಿಸಿದ ಪುಟಾಣಿ!)