ETV Bharat / city

6 ಡ್ರಗ್ಸ್​​ ಪೆಡ್ಲರ್​ಗಳ ಹೆಡೆಮುರಿ ಕಟ್ಟಿದ ಬೆಂಗಳೂರು ಪೊಲೀಸರು

author img

By

Published : Dec 15, 2021, 7:36 PM IST

ದಕ್ಷಿಣ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಮೂವರು ವಿದೇಶಿಗರು ಸೇರಿದಂತೆ 6 ಮಂದಿ ಡ್ರಗ್ ಪೆಡ್ಲರ್​ಗಳನ್ನು ಪೊಲೀಸರು ಬಂಧಿಸಿ ಅವರಿಂದ ಹೆರಾಯಿನ್, ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

drug peddlers
ಡ್ರಗ್ ಪೆಡ್ಲರ್

ಬೆಂಗಳೂರು: ದಕ್ಷಿಣ ವಿಭಾಗದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದ ಮೂವರು ವಿದೇಶಿಗರು ಸೇರಿ 6 ಮಂದಿ ಡ್ರಗ್ಸ್​​ ಪೆಡ್ಲರ್​ಗಳನ್ನು ಪೊಲೀಸರು ಬಂಧಿಸಿ ಅವರಿಂದ ಹೆರಾಯಿನ್, ಮೊಬೈಲ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.

ಕನಕಪುರ ರಸ್ತೆಯ ಕೋಣನಕುಂಟೆ ಕ್ರಾಸ್ ಮೆಟ್ರೋ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕೋಣನಕುಂಟೆ ಠಾಣೆಯ ಇನ್ಸ್​ಪೆಕ್ಟರ್​​ ನಂಜೇಗೌಡ ನೇತೃತ್ವದಲ್ಲಿ ದಾಳಿ ಮಾಡಿ ಮಣಿಪುರ ರಾಜ್ಯದ ಮೂವರನ್ನು ಬಂಧಿಸಿದ್ದಾರೆ. ಮುಯೀನ್ ಅಲಂ (22) ಮೊಹಮ್ಮದ್ ವಾಕಿಮ್ ಯೂನಸ್ (23) ಬಂಧಿತರು. ಅವರಿಂದ 111.16 ಗ್ರಾಂ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.

ಕುಮಾರಸ್ವಾಮಿ ಲೇಔಟ್​ನಲ್ಲಿ ಒಬ್ಬನ ಬಂಧನ

ನಗರದ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣಾ ಸರಹದ್ದಿನ ಟೀಚರ್ಸ್ ಕಾಲೋನಿ 7ನೇ ಮುಖ್ಯರಸ್ತೆಯ ಖಾಲಿ ಜಾಗದಲ್ಲಿ ವಿದೇಶಿ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡಲು ಬಂದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣ ಇನ್ಸ್​​ಪೆಕ್ಟರ್​​ ಶಿವಕುಮಾರ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ವಿದೇಶಿ ಪ್ರಜೆ ಡಾಲೊ ಭಾರತೆಲೆಮೈ ಎನ್ನುವವನ್ನು ಬಂಧಿಸಿದ್ದಾರೆ.

ಈತನಿಂದ 1.3 ಲಕ್ಷ ರೂ. ಮೌಲ್ಯದ 20 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಎಚ್.ಆರ್.ಬಿ.ಆರ್ ಲೇಔಟ್ 7ನೇ ಮುಖ್ಯರಸ್ತೆಯಲ್ಲಿ ವಾಸವಿದ್ದ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಮಾದಕ ವಸ್ತು ಮಾರಾಟ ಮಾಡುವುದನ್ನೇ ವೃತ್ತಿ ಮಾಡಿಕೊಂಡು ಇದರಿಂದ ಬಂದ ಹಣದಲ್ಲಿ ವಿಲಾಸಿ ಜೀವನ ನಡೆಸುತ್ತಿದ್ದರೆಂದು ತಿಳಿದು ಬಂದಿದೆ.

ಬನಶಂಕರಿ ಠಾಣೆಯಲ್ಲಿ ಇಬ್ಬರ ಬಂಧನ

ಬನಶಂಕರಿ 2ನೇ ಹಂತದ ಕಿಮ್ಸ್‌ ಕಾಲೇಜಿನ ಎದುರು ರಸ್ತೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳು ಮಾದಕ ವಸ್ತುಗಳನ್ನು ಕಾನೂನು ಬಾಹಿರವಾಗಿ ಇಟ್ಟುಕೊಂಡು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಬನಶಂಕರಿ ಠಾಣೆಯ ಪೊಲೀಸರಿಗೆ ಲಭಿಸಿತ್ತು.

ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಸ್ಥಳಕ್ಕೆ ತೆರಳಿ ನೈಜೀರಿಯಾದ ಪ್ರಿನ್ಸ್ ಆನಿ ಚಿಡೋಸಿ ಸ್ಯಾಮ್ಯುಯಲ್ (33) ಹಾಗೂ ಐವೋರಿನಿ ದೇಶದ ಪೋಫನಾ ಅಹಮದ್ (28)ನನ್ನು ಬಂಧಿಸಿ 32 ಗ್ರಾಂ ತೂಕದ ಮಾದಕ ವಸ್ತು, 1 ಸಾವಿರ ಹಣ, ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್ ಹಾಗೂ ದ್ವಿಚಕ, ವಾಹನ ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ: ದಾವಣಗೆರೆ : ಕ್ಯಾಷ್​ಬ್ಯಾಕ್​ ಆಸೆಗೆ ಬಿದ್ದು 2.29 ಲಕ್ಷ ರೂ. ಹಣ ಕಳೆದುಕೊಂಡ ವಿದ್ಯಾರ್ಥಿನಿ.. ದೂರು ದಾಖಲು

ನೈಜೀರಿಯಾ ದೇಶದ ಪ್ರಿನ್ಸ್ ಆನಿ ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಬಂದಿದ್ದ. ಪೋಫನಾ ಜೊತೆ ಸೇರಿಕೊಂಡು ಆತ ತನ್ನ ಪಾಸ್​ಪೋರ್ಟ್ ಮತ್ತು ವೀಸಾ ಅವಧಿ ಮುಗಿದಿದ್ದರೂ ಸಹ ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದರು.

ಜಯನಗರ ಉಪವಿಭಾಗದ ಪೊಲೀಸ್ ಆಯುಕ್ತ ಶ್ರೀನಿವಾಸ್, ಇನ್ಸ್​​​​ಪೆಕ್ಟರ್​ ಪುಟ್ಟಸ್ವಾಮಿ ನೇತೃತ್ವದಲ್ಲಿ ಸಬ್‌ ಇನ್ಸ್‌ಪೆಕ್ಟರ್‌ಗಳಾದ ಶ್ರೀನಿವಾಸ್ ಪ್ರಸಾದ್, ನಂದಿನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು. ಉತ್ತಮ ಕಾರ್ಯ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​, ಅಪರ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಪ್ರಶಂಸಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.