ETV Bharat / city

ವಿಮಾನದಲ್ಲಿ ದೆಹಲಿಯಿಂದ ಬೆಂಗಳೂರಿಗೆ ಏಕಾಂಗಿಯಾಗಿ ಬಂದ 5 ವರ್ಷದ ಪೋರ!

author img

By

Published : May 25, 2020, 10:49 AM IST

Updated : May 25, 2020, 1:08 PM IST

ದೆಹಲಿಯಿಂದ ಐದು ವರ್ಷದ ಬಾಲಕನೋರ್ವ ಏಕಾಂಗಿಯಾಗಿ ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ಏರ್​ಪೋರ್ಟ್​ಗೆ ಬಂದಿಳಿದಿದ್ದಾನೆ.

5-year-old boy
5-year-old boy

ಬೆಂಗಳೂರು: ಇಂದಿನಿಂದ ವಿಮಾನ ಯಾನ ಸೇವೆ ಆರಂಭವಾಗಿದೆ. ಸಾವಿರಾರು ಜನರು ತಮ್ಮ ತಮ್ಮ ಸ್ಥಳಗಳಿಗೆ ಬರುತ್ತಿದ್ದಾರೆ. ಈ ಮಧ್ಯೆ ನವದೆಹಲಿಯಿಂದ ವಿಶೇಷ ಅತಿಥಿಯೊಬ್ಬರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.

ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ 5 ವರ್ಷದ ಬಾಲಕ

ಹೌದು, ದೆಹಲಿಯಿಂದ ಐದು ವರ್ಷದ ಪೋರ ಏಕಾಂಗಿಯಾಗಿ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾನೆ. ವಿಮಾನ ನಿಲ್ದಾಣದಲ್ಲಿ ಐದು ವರ್ಷ ವಯಸ್ಸಿನ ವಿಹಾನ್​ ಶರ್ಮಾ ಎಂಬಾತ ಎಲ್ಲರ ಕೇಂದ್ರಬಿಂದುವಾಗಿದ್ದ. ಮೂರು ತಿಂಗಳ ಬಳಿಕ ವಿಹಾನ್​ ಬೆಂಗಳೂರಿಗೆ ಬಂದಿದ್ದಾನೆ. ಅಧಿಕಾರಿಗಳು ವಿಶೇಷ ಪ್ರಕರಣವೆಂದು ಪರಿಗಣಿಸಿ ಬಾಲಕನನ್ನು ಬೆಂಗಳೂರಿಗೆ ಕಳುಹಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ವಿಹಾನ್ ಶರ್ಮಾನ ಅಜ್ಜಿ, ತಾತ ಬೆಂಗಳೂರಿಗೆ ಬಂದಿದ್ದರು. ದೆಹಲಿಗೆ ಮರಳುವಾಗ ಮೊಮ್ಮಗ ವಿಹಾನ್ ಶರ್ಮಾನನ್ನ ಕೂಡ ಕರೆದುಕೊಂಡು ಹೋಗಿದ್ದರು. ಕೆಲವು ದಿನಗಳ ನಂತರ ಬಾಲಕನ ತಂದೆ-ತಾಯಿ ದೆಹಲಿಗೆ ಹೋಗಿ ಬಾಲಕನನ್ನ ಕರೆತರಬೇಕಿತ್ತು. ಆದ್ರೆ ಅಷ್ಟರಲ್ಲಿ ದೇಶಾದ್ಯಂತ ಲಾಕ್​ಡೌನ್ ಜಾರಿಯಾದ ಹಿನ್ನೆಲೆ ಬಾಲಕ ದೆಹಲಿಯಲ್ಲಿಯೇ ಸಿಲುಕಿಕೊಂಡಿದ್ದ. ಇಂದಿನಿಂದ ಮತ್ತೆ ದೇಶಿ ವಿಮಾನಗಳ ಹಾರಾಟ ಪ್ರಾರಂಭವಾದ ನಂತರ ನಿಹಾನ್ ಶರ್ಮಾ ದೆಹಲಿಯಿಂದ ಏಕಾಂಗಿಯಾಗಿ ಬೆಂಗಳೂರಿನ ಕೆಐಎಎಲ್​ಗೆ ಬಂದಿದ್ದಾನೆ. ಅಜ್ಜಿ, ತಾತ ವಯಸ್ಸಾದವರಾಗಿದ್ದರಿಂದ ಅವರು ಮೊಮ್ಮಗನನ್ನು ಬೆಂಗಳೂರಿಗೆ ಕರೆತರಲು ಸಾಧ್ಯವಾಗಿಲ್ಲ. ದೆಹಲಿ ವಿಮಾನ ನಿಲ್ದಾಣದವರೆಗೂ ಮೊಮ್ಮಗನನ್ನು ಬಿಳ್ಕೊಟ್ಟಿದ್ದಾರೆ. ಸ್ಪೈಸ್ ಜೆಟ್​ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಾಲಕ ಬಂದಿಳಿದ್ದಾನೆ. ಸ್ಪೆಷಲ್ ಕೆಟಗಿರಿಯಲ್ಲಿ ಬಾಲಕನನ್ನು ಹೋಮ್​ ಕಾರಂಟೈನ್ ಮಾಡಲಾಗಿದೆ.

Last Updated : May 25, 2020, 1:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.