ದೇವನಹಳ್ಳಿ: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಘೋಷಣೆಯಾದ ಹಿನ್ನೆಲೆ ಮೊದಲ ಹಂತದ ಗ್ರಾ. ಪಂ. ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಮೂರನೇ ದಿನವಾದ ನಿನ್ನೆ ಹೊಸಕೋಟೆ ಹಾಗೂ ನೆಲಮಂಗಲ ತಾಲೂಕಿನ ಒಟ್ಟು 47 ಗ್ರಾಮ ಪಂಚಾಯತ್ಗಳ 856 ಸ್ಥಾನಗಳ ಪೈಕಿ, 387 ನಾಮಪತ್ರಗಳು ಸಲ್ಲಿಕೆಯಾಗಿದ್ದು, 587 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗಬೇಕಿದೆ.
ಹೊಸಕೋಟೆ ತಾಲೂಕಿನ 26 ಗ್ರಾಮ ಪಂಚಾಯತ್ಗಳ 494 ಸ್ಥಾನಗಳಿಗೆ ಅನುಸೂಚಿತ ಜಾತಿ-35, ಅನುಸೂಚಿತ ಪಂಗಡ-08, ಹಿಂದುಳಿದ ಎ ವರ್ಗ-15, ಹಿಂದುಳಿದ ಬಿ ವರ್ಗ-05, ಸಾಮಾನ್ಯ ವರ್ಗ-84 ಸೇರಿದಂತೆ ಒಟ್ಟು 147 ನಾಮಪತ್ರ ಸಲ್ಲಿಕೆಯಾಗಿದ್ದು, ಇನ್ನೂ 378 ಸ್ಥಾನಗಳಿಗೆ ನಾಮಪತ್ರಗಳು ಸಲ್ಲಿಕೆಯಾಗಬೇಕಿವೆ.
ನೆಲಮಂಗಲ ತಾಲೂಕಿನ 21 ಗ್ರಾಮ ಪಂಚಾಯತ್ಗಳ 362 ಸ್ಥಾನಗಳಿಗೆ ಅನುಸೂಚಿತ ಜಾತಿ-69, ಅನುಸೂಚಿತ ಪಂಗಡ-13, ಹಿಂದುಳಿದ ಎ ವರ್ಗ-25, ಹಿಂದುಳಿದ ಬಿ ವರ್ಗ-06, ಸಾಮಾನ್ಯ ವರ್ಗ-127 ಸೇರಿದಂತೆ ಒಟ್ಟು 240 ನಾಮಪತ್ರ ಸಲ್ಲಿಕೆಯಾಗಿದ್ದು, 209 ಸ್ಥಾನಗಳಿಗೆ ನಾಮಪತ್ರ ಸಲ್ಲಿಕೆಯಾಗದೆ ಖಾಲಿ ಉಳಿದಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್. ರವೀಂದ್ರ ಮಾಹಿತಿ ನೀಡಿದ್ದಾರೆ.