ಬೆಂಗಳೂರು: ರಾಜ್ಯದಲ್ಲಿಂದು 334 ಮಂದಿಗೆ ಸೋಂಕು ತಗುಲಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 9,49,183ಕ್ಕೆ ಏರಿಕೆ ಆಗಿದೆ. 6 ಸೋಂಕಿತರು ಮೃತರಾಗಿದ್ದು ಸಾವಿನ ಸಂಖ್ಯೆ 12,309ಕ್ಕೆ ಏರಿದೆ.
ರಾಜ್ಯದಲ್ಲಿ ಇಂದು 313 ಮಂದಿ ಗುಣಮುಖರಾಗಿದ್ದು, 9,30,778 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 6,077 ಇದ್ದು 122 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಪ್ರಕರಣಗಳ ಶೇಕಡವಾರು 0.52 ರಷ್ಟು ಇದ್ದರೆ ಮೃತ ಪಟ್ಟವರ ಪ್ರಮಾಣ ಶೇ 1.79 ರಷ್ಟು ಇದೆ. ಇಂದು ಯುಕೆ ಯಿಂದ 199 ಪ್ರಯಾಣಿಕರು ಆಗಮಿಸಿದ್ದಾರೆ.
ಈವರೆಗೆ 63 ಜನಕ್ಕೆ ಪಾಸಿಟಿವ್ ಬಂದಿದ್ದು, ಈ ಸೋಂಕಿತರ ಸಂಪರ್ಕದಲ್ಲಿ ಇದ್ದ 26 ಮಂದಿಗೂ ಪಾಸಿಟಿವ್ ದೃಢಪಟ್ಟಿದೆ. 25 ಜನರಿಗೆ ರೂಪಾಂತರ ಕೊರೊನಾ ಹರಡಿದೆ.
ಬೆಂಗಳೂರು ಕೊರೊನಾ ವಿವರ:
ಬೆಂಗಳೂರಿನಲ್ಲಿಂದು 174 ಮಂದಿಗೆ ಸೋಂಕು ದೃಢಪಟ್ಟಿದ್ದು ಈ ಮೂಲಕ ಸೋಂಕಿತರ ಸಂಖ್ಯೆ 4,04,357 ಕ್ಕೆ ಏರಿಕೆ ಆಗಿದೆ. 171 ಸೋಂಕಿತರು ಗುಣಮುಖರಾಗಿದ್ದು 3,95,515 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 4,379 ಸಕ್ರಿಯ ಪ್ರಕರಣಗಳು ಇದ್ದು 4 ಸೋಂಕಿತರು ಕೊರೊನಾದಿಂದ ಮೃತರಾಗಿದ್ದಾರೆ. ಈವರೆಗೆ 4,462 ಜನರು ಸೋಂಕಿಗೆ ತುತ್ತಾಗಿದ್ದಾರೆ.